ಆರ್​ಎಸ್​ಎಸ್​ ನಾಯಕರು ಬ್ರಿಟಿಷರೊಂದಿಗೆ ಇದ್ದರು.. – ಬಿ.ಕೆ ಹರಿಪ್ರಸಾದ್

ಧಾರವಾಡ: ಆರ್​ಎಸ್​ಎಸ್​​ ಪಾತ್ರ ಸ್ವತಂತ್ರ ಭಾರತದ ಹೋರಾಟದಲ್ಲಿ ಶೂನ್ಯ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಮಾತಾಡಿದ ಬಿ.ಕೆ ಹರಿಪ್ರಸಾದ್​​​​, ಆರ್​ಎಸ್​ಎಸ್​ ನಾಯಕರು ಬ್ರಿಟಿಷರೊಂದಿಗೆ ಇದ್ದರು ಎಂದಿದ್ದಾರೆ.

ಆರ್​ಎಸ್​ಎಸ್​ ನಾಯಕರು ಹಿಂದುತ್ವದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಮಹಾತ್ಮ ಗಾಂಧಿಜೀ ಕೂಡ ಹಿಂದೂ ಧರ್ಮದವರೇ. ಮಹಾತ್ಮ ಗಾಂಧಿ ಅವರಷ್ಟು ದೊಡ್ಡ ಹಿಂದೂ ಯಾರಿಲ್ಲ. ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಪೂಜೆ, ಭಜನೆ ಮಾಡುತ್ತಿದ್ದರು. ಗಾಂಧೀಜಿಯವರನ್ನು ಬೇರೆ ಧರ್ಮದವರು ಕೊಲೆ ಮಾಡಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ಹಿಂದುತ್ವವಾದಿಗಳೇ ಅವರನ್ನು ಕೊಲೆ ಮಾಡಿದರು. ಹಿಂದುತ್ವದ ಮೇಲೆ ಅಷ್ಟು ನಂಬಿಕೆ ಇರೋದಾದ್ರೆ, ಮೊಹ್ಮದ್ ಅಲಿ ಜಿನ್ನಾ ಮುಸ್ಲಿಂ ಲೀಗ್​​ದವರನ್ನು ಯಾಕೆ ಕೊಲೆ ಮಾಡಲಿಲ್ಲ. ಹಿಂದೂ ಮಹಾಸಭಾ, ಮುಸ್ಲಿಂ ಲೀಗ್ ಸಂಪೂರ್ಣ ಸ್ವತಂತ್ರ ಕೇಳಲಿಲ್ಲ. ಹಾಗಾಗಿ ಆರ್​ಎಸ್​ಎಸ್​ ರಾಷ್ಟ್ರದ ಸ್ವತಂತ್ರಕ್ಕೆ ವಿರುದ್ಧವಾಗಿದ್ದರು ಎಂದು ಕಿಡಿಕಾರಿದರು.

ಇದನ್ನೂ ಓದಿ: ಸಭಾಪತಿಗಳೇ ಸುಪ್ರೀಂ, ಅವರು ರಾಜ್ಯಪಾಲರ ಮಾತು ಕೇಳಬೇಕೆಂದಿಲ್ಲ: ಬಿ.ಕೆ ಹರಿಪ್ರಸಾದ್

ರಾಷ್ಟ್ರೀಯ ಸ್ವಯಂ ಸೇವ ಸಂಘದ ನಾಯಕರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ. ದೇಶವನ್ನ ಪೂರ್ತಿ ತಾಲಿಬಾನ್ ಸರ್ಕಾರ ಮಾಡುತ್ತಿದ್ದರು ಎಂದು ಸಿಡಿಮಿಡಿಗೊಂಡರು.

The post ಆರ್​ಎಸ್​ಎಸ್​ ನಾಯಕರು ಬ್ರಿಟಿಷರೊಂದಿಗೆ ಇದ್ದರು.. – ಬಿ.ಕೆ ಹರಿಪ್ರಸಾದ್ appeared first on News First Kannada.

News First Live Kannada

Leave a comment

Your email address will not be published. Required fields are marked *