ಅಹ್ಮದಾಬಾದ್​ನ ನಮೋ ಸ್ಟೇಡಿಯಮ್​, ಐಪಿಎಲ್​ನ ಮತ್ತೊಂದು ರೋಚಕ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಇಂದು ಬಲಿಷ್ಟ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ, ಪಂಜಾಬ್ ಕಿಂಗ್ಸ್​ ಸವಾಲೆಸೆಯಲು ರೆಡಿಯಾಗಿದ್ದಾರೆ. ಇನ್ನು ಸೋಲಿನ ಸುಳಿಗೆ ಸಿಲುಕಿರುವ ಕೆ.ಎಲ್.ರಾಹುಲ್ ಪಡೆ ಬೆಂಗಳೂರು ವಿರುದ್ಧ ಗೆದ್ದು, ಟೂರ್ನಿಯಲ್ಲಿ ಗೆಲುವಿನ ಓಟ ಮುಂದುವರೆಸುವ ವಿಶ್ವಾಸದಲ್ಲಿದೆ. ಮತ್ತೊಂದೆಡೆ ಫಾರ್ಮ್​​​ನಲ್ಲಿರೋ​​ ಟೀಮ್ ಆರ್​ಸಿಬಿ, ಪಂಜಾಬ್​​ ಕಿಂಗ್ಸ್​ಗೆ ಕಿಕ್​ ನೀಡಿ, ಪಾಯಿಂಟ್ಸ್​​ ಟೇಬಲ್​ನಲ್ಲಿ ಅಗ್ರ ಸ್ಥಾನಕ್ಕೇರುವ ಲೆಕ್ಕಾಚಾರದಲ್ಲಿದೆ.

ಆರ್​ಸಿಬಿಗೆ ಸಿಗ್ತಿದೆ ಸಾಲಿಡ್ ಓಪನಿಂಗ್
ಕ್ಯಾಪ್ಟನ್ ವಿರಾಟ್ ಮತ್ತು ಕನ್ನಡಿಗ ದೇವದತ್ ಪಡಿಕ್ಕಲ್ ತಂಡಕ್ಕೆ ಉತ್ತಮ ಆರಂಭ ನೀಡ್ತಿದ್ದಾರೆ. ವೈಯಕ್ತಿಕವಾಗಿಯೂ ಇಬ್ಬರೂ ಬ್ಯಾಟ್ಸ್​​ಮೆನ್​ ಪರ್ಫಾಮ್ ಮಾಡ್ತಿದ್ದಾರೆ. ಪವರ್​ ಪ್ಲೇನಲ್ಲಿ ಆರ್​ಸಿಬಿ ಉತ್ತಮ ರನ್ ಸಹ​ ಕಲೆ ಹಾಕ್ತಿದೆ. ಇದು ತಂಡಕ್ಕೆ, ಬಿಗ್ ಪ್ಲಸ್ ಪಾಯಿಂಟ್. ಸದ್ಯ ವಿರಾಟ್-ಪಡಿಕ್ಕಲ್ ಜೋಡಿ ಎದುರಾಳಿ ಬೌಲರ್​ಗಳನ್ನ ವಿಲನ್​ಗಳಾಗಿ ಕಾಡ್ತಿದ್ದಾರೆ.

ಮ್ಯಾಕ್ಸಿ, ಎಬಿಡಿ ತಂಡದ ಗೇಮ್ ಚೇಂಜರ್ಸ್​
ನಂಬರ್ ಫೋರ್​ ಸ್ಲಾಟ್​ನಲ್ಲಿ ಡೇಂಜರಸ್ ಬ್ಯಾಟ್ಸ್​ಮ್ಯಾನ್​ ಗ್ಲೇನ್ ಮ್ಯಾಕ್ಸ್​ವೆಲ್, ತಮ್ಮ ಜವಾಬ್ದಾರಿಯನ್ನ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ಟೂರ್ನಿಯುದ್ದಕ್ಕೂ ಮ್ಯಾಕ್ಸಿ, ಡೀಸೆಂಟ್​ ಪರ್ಫಾಮೆನ್ಸ್ ನೀಡ್ತಿದ್ದಾರೆ. ​​ಎಬಿ ಡಿವಿಲಿಯರ್ಸ್​​, ಆರ್​ಸಿಬಿಯ ಆಪತ್ಭಾಂಧವ. ಯಾರೇ ಕೈಕೊಟ್ರು, ಡಿವಿಲಿಯರ್ಸ್​ ಅಬ್ಬರ ಮಾತ್ರ ನಿಲ್ಲಲ್ಲ. ಏಕಾಂಗಿಯಾಗಿ ಪಂದ್ಯ ಗೆಲ್ಲಿಸಿಕೊಡುವ ಎಬಿಡಿ, ಬೆಂಗಳೂರು ತಂಡದ ಗೇಮ್​ಚೇಂಜರ್.

ಸಿರಾಜ್, ಹರ್ಷಲ್ ಪೇಸ್.. ಆರ್​​ಸಿಬಿಗೆ ಸಕ್ಸಸ್
ವೇಗಿ ಮೊಹಮ್ಮದ್ ಸಿರಾಜ್​​, ಹೊಸ ಬಾಲ್​ನಲ್ಲಿ ಅದ್ಭುತ ಸ್ಪೆಲ್ ಮಾಡ್ತಿದ್ದಾರೆ. ಅಗತ್ಯ ಸಮಯದಲ್ಲಿ ತಂಡಕ್ಕೆ ಬ್ರೇಕ್ ಥ್ರೂ ಕೂಡ ನೀಡ್ತಿದ್ದಾರೆ. ಈ ಸೀಸನ್​ನಲ್ಲಿ ಅತಿ ಹೆಚ್ಚು ಡಾಟ್ ಬಾಲ್ ಬೌಲ್ ಮಾಡಿರುವ ಸಿರಾಜ್, ಆರ್​ಸಿಬಿಯ ಫ್ರಂಟ್​ಲೈನ್ ಪೇಸರ್ ಆಗಿ ಗುರುತಿಸಿಕೊಂಡಿದ್ದಾರೆ. ಇನ್ನು ಹರ್ಷಲ್ ಪಟೇಲ್, ಡೆತ್ ಓವರ್​ಗಳಲ್ಲಿ ಡೇಂಜರಸ್​ ಸ್ಪೆಲ್ ಹಾಕ್ತಿದ್ದಾರೆ. ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿರುವ ಹರ್ಷಲ್, ದುಬಾರಿ ರನ್​ಗಳಿಗೆ ಕಂಟ್ರೋಲ್ ಹಾಕಬೇಕು. ಇದನ್ನ ಬಿಟ್ರೆ, ಈ ಇಬ್ಬರೂ ವೇಗಿಗಳು, ಆರ್​ಸಿಬಿಯ ಪ್ರಮುಖ ವೆಪನ್​ಗಳಾಗಿ ಗುರುತಿಸಿಕೊಂಡಿದ್ದಾರೆ.

ಮಯಾಂಕ್​-ರಾಹುಲ್ ಮಾಡಬೇಕು ಕಮಾಲ್
ಪಂಜಾಬ್ ತಂಡ ಸೋಲಿನ ಸುಳಿಯಿಂದ ಹೊರಬರಬೇಕಾಗಿದೆ. ಟಿ-ಟ್ವೆಂಟಿ ಕ್ರಿಕೆಟ್​ಗೆ ಹೇಳಿ ಮಾಡಿಸಿದ ಆಟಗಾರರು ತಂಡದಲ್ಲಿದ್ರೂ, ಯಾವುದೇ ಪ್ರಯೋಜನ ಆಗ್ತಿಲ್ಲ. ಆರಂಭಿಕ ಕೆ.ಎಲ್.ರಾಹುಲ್ ಹಾಗೂ ಮಯಾಂಕ್ ಅಗರ್​ವಾಲ್, ಮತ್ತಷ್ಟು ಅಗ್ರೆಸಿವ್ ಸ್ಟಾರ್ಟ್ ನೀಡಬೇಕಿದೆ. ಆರಂಭದಲ್ಲೇ ಎದುರಾಳಿ ಬೌಲರ್​ಗಳ ಮೇಲೆ ಒತ್ತಡ ಹೇರಬೇಕಿದೆ. ಪವರ್​ ಪ್ಲೇನಲ್ಲಿ ಈ ಜೋಡಿ, ಪವರ್​ಫುಲ್ ಅಟ್ಯಾಕ್​ ಮಾಡಬೇಕಿದೆ.​

ಅಬ್ಬರಿಸದ ಕ್ರಿಸ್ ಗೇಲ್, ಪೂರನ್
ಪಂಜಾಬ್ ಕಿಂಗ್ಸ್​ ತಂಡಕ್ಕೆ, ಕೆರಿಬಿಯನ್ ದೊರೆಗಳ ಬಲವಿದೆ, ಆದ್ರೆ ಉಪಯೋಗವಾಗ್ತಿಲ್ಲ ಅಷ್ಟೆ. ಟಿ-ಟ್ವೆಂಟಿ ಕಿಂಗ್​​ ಕ್ರಿಸ್ ಗೇಲ್ ತನ್ನ ತಾಖತ್ತನ್ನ ಇನ್ನೂ ತೋರಿಸಿಲ್ಲ. ಗೇಲ್ ಸುನಾಮಿ ನಿರೀಕ್ಷೆಯಲ್ಲಿರುವ ಅಭಿಮಾನಿಗಳಿಗೆ, ಕೆರಿಬಿಯನ್ ಕಿಂಗ್ ನಿರಾಸೆ ಮೂಡಿಸಿದ್ದಾರೆ.

ನಿಕೊಲಸ್ ಪೂರನ್, ಟೂರ್ನಿಯಲ್ಲಿ ಅಟ್ಟರ್ ಫ್ಲಾಪ್ ಪ್ಲೇಯರ್ ಎನಿಸಿಕೊಂಡಿದ್ದಾರೆ. ನಾಲ್ಕು ಬಾರಿ ಸಿಂಗಲ್ ಡಿಜಿಟ್​​​ಗೆ ಔಟ್ ಆಗಿರುವ ಪೂರನ್​ಗೆ, ಬಹುಶಃ ಇದು ಕೊನೆಯ ಚಾನ್ಸ್​ ಆಗಿದೆ. 6 ಪಂದ್ಯಗಳಿಂದ ಈ ಇಬ್ಬರೂ ಬ್ಯಾಟ್ಸ್​ಮ್ಯಾನ್​​ಗಳಿಂದ ನಿರೀಕ್ಷಿತ ಪ್ರದರ್ಶನ ಬಂದಿಲ್ಲ. ಆದ್ರೆ ಇವತ್ತು ಈ ಇಬ್ಬರೂ ಆಟಗಾರರು, ಟೆಸ್ಟಿಂಗ್ ಟೈಮ್​ನಲ್ಲಿ ಪಾಸಾಗಬೇಕಿದೆ. ಸಂಕಷ್ಟದಲ್ಲಿರುವ ತಂಡದ ಕೈಹಿಡಿಯಬೇಕಿದೆ.

ಪಂಜಾಬ್​ ಕಿಂಗ್ಸ್​ ಬೌಲಿಂಗ್​ನಲ್ಲಿ ಧಮ್ ಇಲ್ಲ
ಅನುಭವಿ ವೇಗಿ ಮೊಹಮ್ಮದ್ ಶಮಿ ಹಾಗು ಯುವ ಎಡಗೈ ವೇಗಿ ಆರ್ಷ್​​​ದೀಪ್ ಸಿಂಗ್, ತಂಡದ ಪ್ರಮುಖ ಬೌಲರ್​ಗಳು. ಆದ್ರೆ ಕೆಲವೊಮ್ಮೆ ಇವರಿಬ್ಬರ ದುಬಾರಿ ಸ್ಪೆಲ್​​, ತಂಡಕ್ಕೆ ಹಿನ್ನಡೆ ಉಂಟುಮಾಡುತ್ತಿದೆ. ಲೆಗ್ ​ಸ್ಪಿನ್ನರ್ ರವಿ ಬಿಷ್ನೋಯ್ ಆಡಿರೋ ಎರಡೂ ಪಂದ್ಯಗಳಲ್ಲಿ, ಉತ್ತಮ ಎಕಾನಮಿಯಲ್ಲಿ ಬೌಲ್ ಮಾಡಿದ್ದಾರೆ. ಆದ್ರೆ ಉಳಿದ ಬೌಲರ್​ಗಳಿಂದ ಉತ್ತಮ ಸ್ಪೆಲ್ ಬರ್ತಿಲ್ಲ. ಪಂಜಾಬ್ ಕಿಂಗ್ಸ್​ ಬೌಲಿಂಗ್ ಧಮ್ ಕಳೆದುಕೊಂಡಂತೆ ಕಾಣುತ್ತಿದೆ.

ಒಟ್ನಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಸಾರಥ್ಯದ ಪಂಜಾಬ್ ಕಿಂಗ್ಸ್​, ನಮ್ಮ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ, ಬಿಗ್​ ಫೈಟ್ ನೀಡಲು ಮುಂದಾಗಿದ್ದಾರೆ. ಆದ್ರೆ ಗೆಲ್ಲೋದು ಕನ್ನಡಿಗನಾ.. ಬೆಂಗಳೂರಾ..? ಅನ್ನೋದನ್ನ ಕಾದು ನೋಡಬೇಕು.

The post ಆರ್​ಸಿಬಿ v/s ಪಂಜಾಬ್​​ ಕಿಂಗ್ಸ್​; ಗೆಲ್ಲೋದು ಕನ್ನಡಿಗನಾ, ಬೆಂಗಳೂರಾ? appeared first on News First Kannada.

Source: newsfirstlive.com

Source link