ಶಕ್ತಿಕಾಂತ್ ದಾಸ್
ಡಿಜಿಟಲ್ ವ್ಯವಹಾರಗಳು ಹೆಚ್ಚುತ್ತಿರುವ ಬೆನ್ನಲ್ಲೇ ಆರ್ಬಿಐ ಒಂದು ಮಹತ್ವದ ಘೋಷಣೆ ಮಾಡಿದೆ. ಫೀಚರ್ ಫೋನ್ಗಳಲ್ಲೂ ಕೂಡ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಅಂದರೆ ಇನ್ನುಮುಂದೆ ಫೀಚರ್ ಫೋನ್ಗಳಲ್ಲೂ ಕೂಡ ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ -UPI) ಆಧಾರಿತ ವೈಶಿಷ್ಟ್ಯಗಳು ಸಿಗುವಂತೆ ಆರ್ಬಿಐ ರೂಪಿಸಲಿದೆ. ಹಾಗೇ, ಇದು ಮುಂಬರುವ ದಿನಗಳಲ್ಲಿ ಇಂಟರ್ನೆಟ್ ಮುಕ್ತ ಯುಪಿಐ ಪಾವತಿಯನ್ನು ಸಾಧ್ಯವಾಗಿಸುತ್ತದೆ. ಇತ್ತೀಚೆಗೆ ನಡೆದ ದ್ವೈಮಾಸಿಕ ಹಣಕಾಸು ನೀತಿ ಸಮಿತಿ (MPC)y ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾಗಿ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ. ಈಗೀಗ ದೇಶದಲ್ಲಿ ಡಿಜಿಟಲ್ ಮಾದರಿಯ ಯುಪಿಐ ಪಾವತಿಯೇ ಹೆಚ್ಚಾಗಿದೆ. ಹಾಗಾಗಿ ಈ ಯುಪಿಐ ಪಾವತಿ ವ್ಯವಸ್ಥೆಯನ್ನು ಸರಳೀಕೃತಗೊಳಿಸಲು ಶಕ್ತಿಕಾಂತ್ ದಾಸ್ ಅವರು ಮೂರು ಕ್ರಮಗಳನ್ನು ಪ್ರಸ್ತಾಪಿಸಿದ್ದಾರೆ.