ಆರ್​​ಸಿಬಿ ₹7.75 ಕೋಟಿ ಕೊಟ್ಟು ಖರೀದಿಸಿದ್ದ ಬೌಲರ್​​ಗೆ ICC ಟಿ-20 ಱಂಕಿಂಗ್​ನಲ್ಲಿ 2ನೇ ಸ್ಥಾನ


ಆಸ್ಟ್ರೇಲಿಯಾದ ಖ್ಯಾತ ವೇಗದ ಬೌಲರ್​ ಜೋಶ್​ ಹೇಜಲ್​ವುಡ್​,  ಅಂತರಾಷ್ಟ್ರೀಯ ಕ್ರೆಕೆಟ್​ ಮಂಡಳಿ(ICC) ಪ್ರಕಟಿಸಿದ ಟಿ-20 ಱಂಕಿಂಗ್​ ಪಟ್ಟಿಯ, ಬೌಲರ್​ ವಿಭಾಗದಲ್ಲಿ ಎರಡನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಇನ್ನು ಈ ಮೊದಲು ಅಗ್ರಸ್ಥಾನದಲ್ಲಿದ್ದ ಶ್ರೀಲಂಕಾದ ಆಲ್​ರೌಂಡರ್​​ ವನಿಂದು ಹಸರಂಗ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಇತ್ತೀಚಿಗೆ ಬೆಂಗಳೂರಿನಲ್ಲಿ 2 ದಿನಗಳ ಕಾಲ ನಡೆದ ಮೆಗಾ ಹರಾಜಿನಲ್ಲಿ ಆರ್​ಸಿಬಿ ಬರೋಬ್ಬರಿ 7.75 ಕೋಟಿ ನೀಡಿ ಖರೀದಿಸಿತ್ತು. ಸದ್ಯ ಹೇಜಲ್​ವುಡ್​ ಉತ್ತಮ ಫಾರ್ಮ್​ನಲ್ಲಿದ್ದು ಆರ್​ಸಿಬಿ ಬೌಲಿಂಗ್​ ವಿಭಾಗಕ್ಕೆ ಬಲ ತುಂಬುವ  ಸಾಧ್ಯತೆಗಳಿವೆ.

ಈ ಮೊದಲು ಚೆನ್ನೈ ಸೂಪರ್​ ಕಿಂಗ್ಸ್​ ಪರ ಆಡಿದ್ದ ಹೇಜಲ್​ವುಡ್​ 12 ಪಂದ್ಯಗಳಿಂದ 12 ವಿಕೆಟ್​ ಕಬಳಿಸಿದ್ದಾರೆ. ಸದ್ಯ ಐಸಿಸಿ ವಿಶ್ವ ಟಿ-20 ಱಂಕಿಂಗ್​ ಪಟ್ಟಿಯಲ್ಲಿ ಸೌತ್​ ಆಫ್ರಿಕಾದ ತಬ್ರೀಜ್​ ಶಮ್ಸಿ ಮೊದಲ ಸ್ಥಾನದಲ್ಲಿದ್ದಾರೆ.

News First Live Kannada


Leave a Reply

Your email address will not be published. Required fields are marked *