ಹೈದರಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ನಡೆದ ಐಪಿಎಲ್​ನ 26 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಟೀಂ ಮುಖಾಮುಖಿಯಾಗಿದ್ದವು. ಟಾಸ್​ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಬೆಂಗಳೂರು ಟೀಂ ಪಂಜಾಬ್ ಟೀಂನ್ನು ಬ್ಯಾಟಿಂಗ್​ಗೆ ಆಹ್ವಾನಿಸಿತ್ತು. ಕನ್ನಡಿಗ ಕೆ. ಎಲ್​. ರಾಹುಲ್ ಭರ್ಜರಿ ಆಟದ ಫಲವಾಗಿ 20 ಓವರ್​ಗಳಲ್ಲಿ ಪಂಜಾಬ್ ಟೀಂ 5 ವಿಕೆಟ್​ ಕಳೆದುಕೊಂಡು 179 ರನ್ ಗಳಿಸಿತ್ತು.

180 ರನ್​ಗಳ ಬೆನ್ನಟ್ಟಿದ ಆರ್​ಸಿಬಿ ಗೆಲುವಿನ ದಡ ಮುಟ್ಟಲಾಗದೇ ಸೋಲೊಪ್ಪಿಕೊಳ್ತು. ಪಂಜಾಬ್​ 34 ರನ್​ಗಳ ಅಂತರದಲ್ಲಿ ಗೆಲುವು ಸಾಧಿಸಿತು. ಆರ್​ಸಿಬಿ 20 ಓವರ್​ಗಳಲ್ಲಿ 8 ವಿಕೆಟ್​ ಕಳೆದುಕೊಂಡು 145 ರನ್​ಗಳಿಸಲಷ್ಟೇ ಶಕ್ತವಾಯ್ತು. ಕ್ಯಾಪ್ಟನ್ ವಿರಾಟ್ ಕೊಹ್ಲಿ 35 ರನ್​ ಗಳಿಸಿದ್ರೆ ದೇವದತ್ ಪಡಿಕ್ಕಲ್ 7 ರನ್ ಗಳಿಸಿ ಔಟಾದ್ರು. ರಜತ್ ಪಾಟಿದಾರ್ 31, ಡೆವಿಲಿಯರ್ಸ್​ 3, ಶಾಹ್​ಬಾಜ್​ ಅಹ್ಮದ್ 8, ಡೇನಿಯಲ್ ಸ್ಯಾಮ್ಸ್ 3, ಕೈಲ್ ಜಮೇಯ್ಸನ್​ 16, ಹರ್ಷಲ್ ಪಟೇಲ್ 31 ರನ್​ ಗಳಿಸಿದ್ರು.

The post ಆರ್​​ಸಿಬಿ V/S ಪಂಜಾಬ್​; ಬೆಂಗಳೂರಿಗೆ ಸೋಲು.. ಕನ್ನಡಿಗನಿಗೆ ಭರ್ಜರಿ ಗೆಲುವು appeared first on News First Kannada.

Source: newsfirstlive.com

Source link

Leave a comment