ಟೀಮ್ ಇಂಡಿಯಾದ ಅನುಭವಿ ಆರ್.ಅಶ್ವಿನ್ಗೆ ದೀರ್ಘಾವಧಿ ಚಾನ್ಸ್ ನೀಡದ ಬಗ್ಗೆ ತನಿಖೆ ನಡೆಸಬೇಕೆಂದು ಮಾಜಿ ಸೆಲೆಕ್ಟರ್ ದಿಲೀಪ್ ವೆಂಗಸರ್ಕಾರ್ ಆಗ್ರಹಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ದಿಲೀಪ್ ವೆಂಗಸರ್ಕಾರ್, ದೀರ್ಘಾವಧಿಯಿಂದ ಆರ್.ಅಶ್ವಿನ್ರನ್ನು ಕೈ ಬಿಡಲಾಗುತ್ತಿದೆ ಏಕೆ? ಈ ವಿಷಯವನ್ನು ತನಿಖೆಗೆ ವಹಿಸಬೇಕು. 600 ಅಂತಾರಾಷ್ಟ್ರೀಯ ವಿಕೆಟ್‌ಗಳನ್ನು ಕಬಳಿಸಿರುವ ಆರ್.ಅಶ್ವಿನ್ ಎಲ್ಲಾ ಸ್ವರೂಪದಲ್ಲಿಯೂ ಅತ್ಯುತ್ತಮ ಸ್ಪಿನ್ನರ್ ಆಗಿದ್ದಾರೆ.
ಅಷ್ಟೇ ಅಲ್ಲದೆ, ಅತ್ಯಂತ ಹಿರಿಯ ಆಟಗಾರರಾಗಿದ್ದರೂ ನೀವು ಅವರನ್ನು ಆಡಿಸುತ್ತಿಲ್ಲ..? ಇದನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾನು ವಿಫಲನಾಗಿದ್ದೇನೆ. ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿಯೂ ಕನಿಷ್ಠ ಒಂದೇ ಒಂದು ಟೆಸ್ಟ್ ಪಂದ್ಯದಲ್ಲಿಯೂ ಆಡಿಸಿರಲಿಲ್ಲ. ಅಂದಹಾಗೆ ಯಾವ ಪುರುಷಾರ್ಥಕ್ಕಾಗಿ ಆಯ್ಕೆ ಮಾಡಬೇಕಿತ್ತು. ಇದು ನನಗೆ ಇನ್ನೂ ನಿಗೂಢವಾಗಿಯೇ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.