ಬೆಂಗಳೂರು : ಐಪಿಎಲ್ 14ನೇ ಆವೃತ್ತಿಯ ಚೊಚ್ಚಲ ಪಂದ್ಯದಲ್ಲಿ ಭರಪೂರ ಗೆಲುವು ಪಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಚಂದನವನದ ತಾರೆಯರು ಶುಭಾಶಯ  ತಿಳಿಸಿದ್ದಾರೆ. ಟ್ವಿಟರ್‍ ನಲ್ಲಿ ಆರ್‌ಸಿಬಿ ಗೆಲುವು ಸಂಭ್ರಮಿಸಿರುವ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಇಡೀ ತಂಡಕ್ಕೆ ವಿಶ್ ಮಾಡಿದ್ದಾರೆ.

ರೋಚಕ ಹಣಾಹಣಿಯಲ್ಲಿ ಗೆಲುವು ಪಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟದ ವೈಖರಿ ಬಗ್ಗೆ ಟ್ವೀಟ್ ಮಾಡಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ”ವಾಹ್ ಆರ್‌ಸಿಬಿ,,,,ಅದ್ಭುತ ಆರಂಭ. ಎಂತಹ ಆರಂಭ ಇದು. ಆರ್‌ಸಿಬಿಯ ಎಲ್ಲಾ ಅಭಿಮಾನಿಗಳು ಖುಷಿಯಾಗಿದ್ದಾರೆ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಆರ್‌ಸಿಬಿ ಗೆಲುವಿನ ಬಗ್ಗೆ  ಟ್ವಿಟ್ ಮಾಡಿರುವ ನಿರ್ದೇಶಕ ಸಿಂಪಲ್ ಸುನಿ, ”ಎಲ್ಲರೂ ಬಾಯಲ್ಲಿರುವ ಬೀಜವನ್ನು ಉಗಿಯಬೇಕಾಗಿ ವಿನಂತಿ. ಈ ಸಲ …ಗೊತ್ತಲ್ಲ..ಹರ್ಷಲ್ ಪಟೇಲ್ ಮ್ಯಾಚ್ ವಿನ್ನರ್. ABD ಮಾಮುಲಿ ಮನೇದೇವ್ರು..ಮ್ಯಾಕ್ಸಿ…ಮ್ಯಾಕ್ಸಿಮಮ್ 100 ಮೀಟರ್ ಸಿಕ್ಸ್. ಕೊಹ್ಲಿ ಕೆನ್ನೆ ಸರಿ ಮಾಡ್ಕೊ…” ಎಂದು ಪಂದ್ಯದ ಅನುಭವ ಹಂಚಿಕೊಂಡಿದ್ದಾರೆ.

ಅದೇ ರೀತಿ ನಿರ್ದೇಶಕ ಪವನ್ ಒಡೆಯರ್ ಸಹ ಆರ್‌ಸಿಬಿ ಗೆಲುವನ್ನು ಸಂಭ್ರಮಿಸಿದ್ದಾರೆ. ”ಥ್ರಿಲ್ಲಿಂಗ್ ವಿನ್” ಎಂದು ಟ್ವಿಟ್ಟರ್‌ನಲ್ಲಿ ಪೋಸ್ಟ್ ಸಂತಸ ಹಂಚಿಕೊಂಡಿದ್ದಾರೆ.

ಇನ್ನು ಶುಕ್ರವಾರ ನಡೆದ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ  ಮೊದಲ ಪಂದ್ಯದಲ್ಲಿ ಬೆಂಗಳೂರು ತಂಡ ಎರಡು ವಿಕೆಟ್‌ಗಳ ಗೆಲವು ಸಾಧಿಸಿದೆ. ಈ ಮೂಲಕ ಶುಭಾರಂಭ ಮಾಡಿದೆ. ನಾಯಕ ವಿರಾಟ್ ಕೊಹ್ಲಿ, ಮ್ಯಾಕ್ಸ್‌ವೆಲ್ ಮತ್ತು ಎಬಿಡಿಯ ಭರ್ಜರಿ ಆಟದ ನೆರವಿನಿಂದ ರೋಹಿತ್ ಪಡೆಯನ್ನು ಸೋಲಿಸುವಲ್ಲಿ ಯಶಸ್ಸು ಕಂಡಿದ್ದಾರೆ.

ಕ್ರೀಡೆ – Udayavani – ಉದಯವಾಣಿ
Read More