ನವದೆಹಲಿ: ಆಲೋಪತಿ ಒಂದು ಸ್ಟುಪಿಡ್ ಸೈನ್ಸ್​ ಎಂದು ಹೇಳಿಕೆ ನೀಡಿದ್ದ ಬಾಬಾ ರಾಮ್​ದೇವ್ ಇದೀಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರನ್ನು ಬಂಧಿಸುವಂತೆ ಅಸೋಸಿಯೇಷನ್ ಆಫ್ ರೆಸಿಡೆಂಟ್​ ಡಾಕ್ಟರ್ಸ್ ಸಂಘ ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಿದೆ.

ಈ ಹಿಂದೆ ರಾಮ್​ದೇವ್ ಹೇಳಿಕೆಯನ್ನು PGIMERನ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್, AIIMS ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ ಮತ್ತು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಉತ್ತರಾಂಚಲ್ ಬ್ರಾಂಚ್ ವಿರೋಧಿಸಿದ್ದವು. ಈ ಹಿನ್ನೆಲೆ ರಾಮ್​ದೇವ್ ಬಾಬಾ ತಮ್ಮ ಹೇಳಿಕೆಯನ್ನ ಹಿಂಪಡೆದಿದ್ದರು. ಆದರೆ ಇಷ್ಟಕ್ಕೇ ಬಿಡದ PGIMERನ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ ರಾಮ್​ದೇವ್ ಬಾಬಾ ಅವರನ್ನ ಬಂಧಿಸುವಂತೆ ಒತ್ತಾಯಿಸಿದೆ.

ಇಂಡಿಯನ್ ಮೆಡಿಕಲ್ ಅಸೋಸಿಯೇಷನ್​ನ ಪ್ರಕಟಣೆಯನ್ನು ಉಲ್ಲೇಖಿಸಿರುವ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್.. ರಾಮ್​ದೇವ್ ಬಾಬಾ ಅವರ ಹೇಳಿಕೆ ಎಪಿಡೆಮಿಕ್ ಡಿಸೀಸಸ್ ಆ್ಯಕ್ಟ್​ನ ಉಲ್ಲಂಘನೆಯಾಗಿದ್ದು ಅವರನ್ನ ಬಂಧಿಸಬೇಕೆಂದು ಒತ್ತಾಯಿಸಿದೆ.

The post ‘ಆಲೋಪತಿ ಸ್ಟುಪಿಡ್ ಸೈನ್ಸ್’ ಎಂದ ರಾಮ್​ದೇವ್​ಗೆ ಸಂಕಷ್ಟ.. ಅರೆಸ್ಟ್​ ಆಗ್ತಾರಾ ಯೋಗ ಗುರು? appeared first on News First Kannada.

Source: newsfirstlive.com

Source link