ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಹಾಗೂ ಇಂಗ್ಲೆಂಡ್​ ವಿರುದ್ದ ಟೆಸ್ಟ್​ ಸರಣಿಗಾಗಿ ಟೀಮ್ ಇಂಡಿಯಾವನ್ನ ಪ್ರಕಟಿಸಲಾಗಿದೆ. 20 ಸದಸ್ಯರ ಭಾರತ ತಂಡಕ್ಕೆ, ಆಲ್​ರೌಂಡರ್​ ಜಡೇಜಾ, ಮಹಮ್ಮದ್​ ಶಮಿ ಕಮ್​ಬ್ಯಾಕ್ ಮಾಡಿದ್ದಾರೆ. ಆದ್ರೆ ಇಂಗ್ಲೆಂಡ್ ವಿರುದ್ಧದ ಏಕದಿನ, ಟಿ20 ಸರಣಿಯಲ್ಲಿ ಕಮಾಲ್ ಮಾಡಿದ್ದ ಸ್ಟಾರ್ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ, ಮತ್ತೊಮ್ಮೆ ಟೆಸ್ಟ್​ ತಂಡಕ್ಕೆ ಪುನರಾಗಮನ ಮಾಡುವಲ್ಲಿ ವಿಫಲರಾಗಿದ್ದಾರೆ. ಅದ್ರಲ್ಲೂ ಬಹುಮುಖ್ಯವಾದ ಇಂಗ್ಲೆಂಡ್ ಪ್ರವಾಸಕ್ಕೆ ಪಾಂಡ್ಯ ಇಲ್ಲದಿರೋದು, ಟೆಸ್ಟ್​ ಕರಿಯರ್​ನ END ಕಾರ್ಡ್​ ಅಂತಾನೇ ಹೇಳಲಾಗ್ತಿದೆ.

ಹೌದು..! ನಾಲ್ಕು ತಿಂಗಳ ಇಂಗ್ಲೆಂಡ್ ಟೂರ್​ಗೆ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ, ಉಪಸ್ಥಿತಿ ತಂಡಕ್ಕಿತ್ತು. ಮೀಡಿಯಂ ಪೇಸರ್ ಆ್ಯಂಡ್ ಬ್ಯಾಟ್ಸ್​​ಮನ್​ ಆಗಿ ಇಂಗ್ಲೆಂಡ್ ಪಿಚ್​ನಲ್ಲಿ ಕಮಾಲ್ ಮಾಡಬಲ್ಲವರಾಗಿದ್ದ ಪಾಂಡ್ಯ, ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ತಂಡದಲ್ಲಿ ಕಾಣಿಸಿಕೊಳ್ಳುತ್ತಾರೆ ಅಂತಾನೇ ಊಹಿಸಲಾಗಿತ್ತು. ಆದ್ರೆ ಆಗಿದ್ದೇ ಬೇರೆ..!!! ಇದಕ್ಕೆ ಕಾರಣ ಹಾರ್ದಿಕ್ ಪಾಂಡ್ಯ ಸಂಪೂರ್ಣ ಫಿಟ್ನೆಸ್ ಇಲ್ಲದಿರುವುದು..!

ಆಲ್​ರೌಂಡರ್​​ ಪಾಂಡ್ಯಗಿಲ್ಲ ಬೌಲಿಂಗ್ ಮಾಡುವ ಸಾಮರ್ಥ್ಯ..!
ಆಸ್ಟ್ರೇಲಿಯಾ ವಿರುದ್ಧದ ಪ್ರವಾಸದ ವೇಳೆ ರಾಷ್ಟ್ರೀಯ ತಂಡಕ್ಕೆ ಕಮ್​​ಬ್ಯಾಕ್ ಮಾಡಿದ್ದ ಹಾರ್ದಿಕ್ ಪಾಂಡ್ಯ, ಆಲ್​ರೌಂಡರ್​ ಆಗಿ ಅಲ್ಲದೆ, ಬ್ಯಾಟ್ಸ್​ಮನ್​ ಆಗಿ ಮಾತ್ರವೇ ತಂಡಕ್ಕೆ ಪರಿಗಣಿಸಲಾಗ್ತಿದೆ. ಇದಕ್ಕೆ ಕಾರಣ ಹಾರ್ದಿಕ್ ಪಾಂಡ್ಯಗೆ ಕಾಡುತ್ತಿದ್ದ ಬೆನ್ನು ನೋವಿನ ಸಮಸ್ಯೆ.. ಸರ್ಜರಿ ಬಳಿಕ ಗುಣಮುಖರಾದರೂ ಭುಜದ ನೋವು ಪಾಂಡ್ಯಗೆ ಇನ್ನಿಲ್ಲದೇ ಕಾಡುತ್ತಿದೆ. ಹಾಗಾಗಿಯೇ ಹಾರ್ದಿಕ್ ಪಾಂಡ್ಯ, ಓರ್ವ ಬ್ಯಾಟ್ಸ್​ಮನ್​ ಆಗಿ ಮಾತ್ರವೇ ತಂಡದ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

ಸರ್ಜರಿ ಬಳಿಕ ಚೆಂಡು ಹಂಚಿಕೊಂಡಿದ್ದೇ ಅಪರೂಪ..!
V.O – ಲಂಡನ್​​ನಲ್ಲಿ ಬ್ಯಾಕ್​ ಸರ್ಜರಿಗೆ ಒಳಗಾಗಿದ್ದ ಹಾರ್ದಿಕ್ ಪಾಂಡ್ಯ, ಯುಎಇನಲ್ಲಿ ನಡೆದ ಐಪಿಎಲ್​ ಟೂರ್ನಿಯಲ್ಲಿ ಚೆಂಡು ಹಂಚಿಕೊಂಡಿರಲೇ ಇಲ್ಲ. ನಂತರದ ಸರಣಿಗಳಲ್ಲೂ ಬಹುಪಾಲು ಬ್ಯಾಟ್ಸ್​ಮನ್​ ಆಗಿಯೇ ಕಾಣಿಸಿಕೊಂಡಿದ್ದ ಪಾಂಡ್ಯ, ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ, ನಾಲ್ಕೈದು ಓವರ್ ಎಸೆದಿದ್ದ ಬಿಟ್ಟರೇ, ಇಂಗ್ಲೆಂಡ್ ಸರಣಿ ಪೂರ್ತಿ ಬ್ಯಾಟ್ಸ್​ಮನ್​ ಆಗಿಯೇ ಕಾಣಿಸಿಕೊಂಡರು. ಅಷ್ಟೇ ಅಲ್ಲ..! ಇತ್ತೀಚಿಗೆ ಮೊಟಕುಗೊಂಡ ಐಪಿಎಲ್ ಟೂರ್ನಿಯಲ್ಲೂ ಪಾಂಡ್ಯ, ಭುಜದ ನೋವಿನ ಅಪಾಯದ ಕಾರಣ, ಬೌಲಿಂಗ್ ಮಾಡಲೇ ಇಲ್ಲ..

ಚುಟುಕು ಕ್ರಿಕೆಟ್​ಗೆ ಹೋಲಿಸಿದರೆ, ಟೆಸ್ಟ್​ ಕ್ರಿಕೆಟ್​ನಲ್ಲಿ ಆಲ್​ರೌಂಡರ್, ಬೌಲಿಂಗ್ ಮಾಡಬೇಕಾದ ಅನಿವಾರ್ಯತೆ ಇದೆ. ಬ್ಯಾಟ್ಸ್​ಮನ್ ಆಗಿ ಅಲ್ಲದೆ, ಬೌಲರ್ ಆಗಿಯೂ ಆತನ ಪ್ರದರ್ಶನ ತಂಡಕ್ಕೆ ಅತ್ಯಗತ್ಯ.. ಹೀಗಾಗಿಯೇ ಇಂಗ್ಲೆಂಡ್ ಪ್ರವಾಸದ ಸುದೀರ್ಘ ಟೆಸ್ಟ್​ ಸರಣಿಯಿಂದ ಹಾರ್ದಿಕ್ ಪಾಂಡ್ಯರನ್ನ ಕೈಬಿಡಲಾಗಿದೆ. ಇದು ಹಾರ್ದಿಕ್​ ಪಾಂಡ್ಯರ ಟೆಸ್ಟ್​ ಕ್ರಿಕೆಟ್​ ಹಾದಿ ಬಹುಪಾಲು ಮುಂಚಿದೆ ಅಂತಾನೇ ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೆಟರ್​ ಆಕಾಶ್ ಚೋಪ್ರಾ ವಿಶ್ಲೇಷಿಸಿದ್ದಾರೆ.

‘ಹಾರ್ದಿಕ್ ಪಾಂಡ್ಯ, ಟೆಸ್ಟ್ ಆಡಬೇಕಾದ ಸ್ಥಳವಿದ್ದರೆ ಅದು ಇಂಗ್ಲೆಂಡ್ ಅಥವಾ ದಕ್ಷಿಣ ಆಫ್ರಿಕಾ. ಇಲ್ಲಿ ಮಧ್ಯಮ ವೇಗಿಗಳ ಅಗತ್ಯವಿರುತ್ತದೆ. ಹಾರ್ದಿಕ್ ಪಾಂಡ್ಯ, ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​​ ಫೈನಲ್​ ತಂಡದಲ್ಲಿ ಇಲ್ಲದಿದ್ದರೆ ಒಳ್ಳೆಯದು. ಆದರೆ, ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳಿಗೆ ಹೆಸರಿಸಿರುವ ತಂಡದಲ್ಲೂ ಕೂಡ ಇಲ್ಲ. ಇದು ಹಾರ್ದಿಕ್ ಪಾಂಡ್ಯ ಟೆಸ್ಟ್ ಕ್ರಿಕೆಟ್​ನಲ್ಲಿ ದೀರ್ಘಕಾಲ ಕಾಣಿಸದಿರಬಹುದು ಎಂಬುದನ್ನು ತೋರಿಸುತ್ತೆ..’
-ಆಕಾಶ್​ ಚೋಪ್ರಾ, ಮಾಜಿ ಕ್ರಿಕೆಟಿಗ

ಸದ್ಯ ಬೆನ್ನು ನೋವಿನಿಂದ ಬಳಲುತ್ತಿರುವ ಹಾರ್ದಿಕ್ ಪಾಂಡ್ಯ, ಬೌಲಿಂಗ್ ಮಾಡುವ ಸ್ಥಿತಿಯಲ್ಲಿ ಇಲ್ಲ. ಮತ್ತೊಂದೆಡೆ ಟಿ20 ವಿಶ್ವಕಪ್ ದೃಷ್ಟಿಯಿಂದ ಬ್ಯಾಟಿಂಗ್ ಬಗ್ಗೆ ಹೆಚ್ಚು ಗಮನಹರಿಸಿದ್ದಾರೆ. ಹೀಗಾಗಿಯೇ ವಿಶ್ರಾಂತಿ ನೀಡಲಾಗಿದೆ ಅಂತಾ ಹೇಳಲಾಗ್ತಿದೆ. ಒಟ್ನಲ್ಲಿ ಬ್ಯಾಕ್ ಸರ್ಜರಿ ಬಳಿಕ ಬೌಲಿಂಗ್​​ನಿಂದ ಅಂತರ ಕಾಯ್ದುಕೊಂಡಿರುವ ಹಾರ್ದಿಕ್​ ಟೆಸ್ಟ್​ ಕರಿಯರ್, ಡೇಂಜರ್​ ಜೋನ್​​​ನಲ್ಲಿ ಇರೋದಂತು ನೂರರಷ್ಟು ಸತ್ಯ.

The post ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಟೆಸ್ಟ್ ಕರಿಯರ್ ಮುಗೀತಾ..? appeared first on News First Kannada.

Source: newsfirstlive.com

Source link