ಕಳೆದ ಐಪಿಎಲ್ ಸೀಸನ್ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದರು ಆಲ್ರೌಂಡರ್ ವೆಂಕಟೇಶ್ ಅಯ್ಯರ್. ಇದರಿಂದಲೇ ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಗೆ ಟೀಮ್ ಇಂಡಿಯಾದಲ್ಲಿ ವೆಂಕಟೇಶ್ ಅಯ್ಯರ್ ಅವಕಾಶ ಗಿಟ್ಟಿಸಿಕೊಂಡಿದ್ದರು.
ಈಗ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ ತಮ್ಮನ್ನು ಸರಣಿಯುದ್ದಕ್ಕೂ ಬೆಂಬಲಿಸಿದರು ಎಂದು ವೆಂಕಟೇಶ್ ಅಯ್ಯರ್ ಹೇಳಿದ್ದಾರೆ. ಈ ಸಂಬಂಧ ಮಾತಾಡಿದ ಅವರು, ದ್ರಾವಿಡ್ ಮತ್ತು ರೋಹಿತ್ ಶರ್ಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನನ್ನ ಪಾಲಿಗೆ ಇದೊಂದು ಅವಿಸ್ಮರಣೀಯ ಸರಣಿ. ಭಾರತದ ಜರ್ಸಿ ತೊಡುವ ಕನಸು ಕೊನೆಗೂ ನನಸಾಗಿದೆ. ಅದರಲ್ಲೂ ಪದಾರ್ಪಣೆ ಸರಣಿಯನ್ನ ಕ್ಲೀನ್ ಸ್ವೀಪ್ ಮೂಲಕ ಗೆದ್ದಿರುವುದು ತುಂಬಾ ಖುಷಿಯಾಗಿದೆ ಎಂದು ಹೇಳಿದರು.
ಸರಣಿ ಗೆದ್ದ ಬಳಿಕ ಸೆಲೆಬ್ರೇಷನ್ ವೇಳೆ ರೋಹಿತ್ ಭಾಯ್ ಟ್ರೋಫಿಯನ್ನು ನನಗೆ ನೀಡಿ ಉತ್ತಮವಾಗಿ ಆಡಿದ್ದೀಯಾ ಎಂದರು. ನನಗೆ ತಂಡದಲ್ಲಿ ಹಿರಿಯ ಆಟಗಾರರಿಂದ ಸಾಕಷ್ಟು ಬೆಂಬಲ ಸಿಕ್ಕಿತು. ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ದ್ರಾವಿಡ್ ಸರ್ ತುಂಬಾ ಪ್ರೋತ್ಸಾಹ ನೀಡಿದರು ಎಂದು ಆಲ್ರೌಂಡರ್ ಹೇಳಿಕೊಂಡಿದ್ದಾರೆ.
The post ಆಲ್ ರೌಂಡರ್ ವೆಂಕಟೇಶ್ ಅಯ್ಯರ್ ಬೆನ್ನು ತಟ್ಟಿದ ಕ್ಯಾಪ್ಟನ್ ರೋಹಿತ್, ಕೋಚ್ ದ್ರಾವಿಡ್ appeared first on News First Kannada.