ಆಲ್​​ ರೌಂಡರ್​​ ಹಾರ್ದಿಕ್​​​ ಪಾಂಡ್ಯಾಗೆ ಸಲಹೆ ಕೊಟ್ಟ ಪಾಕ್​​​ ಕ್ರೆಕೆಟರ್

ಟೀಮ್‌ ಇಂಡಿಯಾ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಆಡಬೇಕಾದರೆ ಹೆಚ್ಚಿನ ತರಬೇತಿ ಅಗತ್ಯವಿದೆ. ಮುಂದಿನ ದಿನಗಳಲ್ಲಿ ತಮ್ಮ ದೇಹದ ತೂಕವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬೇಕೆಂದು ಬಿಸಿಸಿಐ ಕೂಡ ಹೇಳಿದೆ. ಹೀಗಿರುವಾಗಲೇ ಹಾರ್ದಿಕ್ ಪಾಂಡ್ಯಗೆ ಪಾಕಿಸ್ತಾನ ಮಾಜಿ ನಾಯಕ ಸಲ್ಮಾನ್‌ ಬಟ್‌ ಸಲಹೆ ನೀಡಿದ್ದಾರೆ.

ಈ ಸಂಬಂಧ ಮಾತಾಡಿದ ಸಲ್ಮಾನ್‌ ಬಟ್‌, ದಕ್ಷಿಣ ಆಫ್ರಿಕಾ ಪ್ರವಾಸದ ಹೊತ್ತಿಗೆ ಸಂಪೂರ್ಣ ಫಿಟ್‌ ಆಗುವ ಸಲುವಾಗಿ ಹಾರ್ದಿಕ್‌ ಪಾಂಡ್ಯರನ್ನು ನ್ಯಾಷನಲ್‌ ಕ್ರಿಕೆಟ್‌ ಅಕಾಡೆಮಿಗೆ ಕಳಿಸಲಾಗಿದೆ. ಬಿಸಿಸಿಐ ತೆಗೆದುಕೊಂಡಿರುವ ಈ ನಿರ್ಧಾರ ಒಳ್ಳೆಯದು. ಹಾರ್ದಿಕ್‌ ಪಾಂಡ್ಯ ಮುಂದಿನ ದಿನಗಳಲ್ಲಿ ಭಾರತ ತಂಡದ ಪರ ಮೂರು ಸ್ವರೂಪದಲ್ಲಿ ಕಾಣಿಸಿಕೊಳ್ಳಬೇಕು ಅಂದರೆ ತಮ್ಮ ದೇಹದ ತೂಕ ಹೆಚ್ಚಿಸಿಕೊಳ್ಳಬೇಕು ಎಂದಿದ್ದಾರೆ.

ಹಾರ್ದಿಕ್‌ ಪಾಂಡ್ಯ ಇನ್ನಷ್ಟು ದಪ್ಪ ಆಗಬೇಕು. ಹಾಗಾಗಿ, ಹೆಚ್ಚಿನ ತರಬೇತಿ ಹಾಗೂ ಅತ್ಯುತ್ತಮ ಆಹಾರವನ್ನು ಸೇವಿಸಬೇಕು. ಆಗ ಮಾತ್ರ ಅವರು ಮೂರೂ ಸ್ವರೂಪದಲ್ಲಿ ಉಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು.

The post ಆಲ್​​ ರೌಂಡರ್​​ ಹಾರ್ದಿಕ್​​​ ಪಾಂಡ್ಯಾಗೆ ಸಲಹೆ ಕೊಟ್ಟ ಪಾಕ್​​​ ಕ್ರೆಕೆಟರ್ appeared first on News First Kannada.

News First Live Kannada

Leave a comment

Your email address will not be published. Required fields are marked *