ಆಶಿಕಾ ರಂಗನಾಥ್​ ಮುದ್ದಾಗಿ ಕಾಣೋಕೆ ಪವನ್​ ಒಡೆಯರ್​ ಪತ್ನಿ ಅಪೇಕ್ಷಾ ಕಾರಣ; ಏನಿದು ಸಮಾಚಾರ? | Raymo actress Ashika Ranganath talks about director Pawan Wadeyar wife Apeksha Purohit


‘ರೇಮೋ’ ಸಿನಿಮಾದಲ್ಲಿ (Raymo Movie) ಮೋಹನಾ ಎಂಬ ಪಾತ್ರವನ್ನು ಆಶಿಕಾ ರಂಗನಾಥ್​ ನಿಭಾಯಿಸಿದ್ದಾರೆ. ಈ ಚಿತ್ರಕ್ಕೆ ಇಶಾನ್​ ಹೀರೋ. ಪವನ್​ ಒಡೆಯರ್​ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಟೀಸರ್​ ಬಿಡುಗಡೆ ಆಗಿದೆ. ಟೀಸರ್​ ನೋಡಿದ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್​ ಸಿಗುತ್ತಿರುವುದು ಆಶಿಕಾ ರಂಗನಾಥ್​ (Ashika Ranganath) ಅವರಿಗೆ ಖುಷಿ ನೀಡಿದೆ. ಚಿತ್ರದಲ್ಲಿ ಅವರು ಸಖತ್​ ಮುದ್ದಾಗಿ ಕಾಣುತ್ತಿದ್ದಾರೆ. ಅದಕ್ಕೆ ನಿರ್ದೇಶಕ ಪವನ್​ ಒಡೆಯರ್ (Pawan Wadeyar)​ ಅವರ ಪತ್ನಿ ಅಪೇಕ್ಷಾ ಪುರೋಹಿತ್ (Apeksha Purohit)​ ಕಾರಣ! ಅದು ಹೇಗೆ ಎಂಬುದನ್ನು ಕೂಡ ಆಶಿಕಾ ರಂಗನಾಥ್​ ವಿವರಿಸಿದ್ದಾರೆ. ‘ನಾನು ಮುದ್ದಾಗಿ ಕಾಣುತ್ತೇನೆ ಎಂದರೆ ಅದರ ಕ್ರೆಡಿಟ್​ ಅಪೇಕ್ಷಾ ಅವರಿಗೆ ಸಲ್ಲಬೇಕು. ನಾಯಕಿ ಪಾತ್ರದ ಇಡೀ ಲುಕ್​ ಡಿಸೈನ್​ ಮಾಡಿದ್ದು ಅವರೇ’ ಎಂದಿದ್ದಾರೆ ಆಶಿಕಾ ರಂಗನಾಥ್​.

ಇದನ್ನೂ ಓದಿ:

TV9 Kannada


Leave a Reply

Your email address will not be published. Required fields are marked *