ಆಸ್ಕರ್​ ರೇಸ್​ನಲ್ಲಿ ಜೈ ಭೀಮ್​, ಮರಕ್ಕರ್; ಯಾವುದಕ್ಕೆ ಸಿಗಲಿದೆ ಪ್ರಶಸ್ತಿಯ ಗರಿ?


ಇತ್ತೀಚಿಗೆ ರಿಲೀಸ್​ ಆದ ಸೂರ್ಯ ಅಭಿನಯದ ‘ಜೈ ಭೀಮ್’​ ಸಿನಿಮಾ ಸಾಕಷ್ಟು ಯಶಸ್ಸು ಗಳಿಸಿತ್ತು. ಸಿನಿಮಾದಲ್ಲಿ ಕೆಳವರ್ಗದವರ ಮೇಲೆ ಆಗಿದ್ದ ದೌರ್ಜನ್ಯದ ನೈಜ ಕಥೆಯನ್ನು,ಈ ಸಿನಿಮಾದಲ್ಲಿ ತುಂಬಾ ಅದ್ಭುತಾವಗಿ ತೋರಿಲಾಗಿದೆ.ಈ ಸಿನಿಮಾವನ್ನು ನೋಡಿ ಇಡೀ ಭಾರತವೇ ಮೆಚ್ಚುಗೆ ವ್ಯಕ್ತಪಡಿಸಿತ್ತು. ಹೌದು ಜೈ ಭೀಮ್​ ಸೂರ್ಯ ನಟನೆಯ ಚಿತ್ರ. ಅಮೇಜಾನ್​ ಪ್ರೈಮ್​ನಲ್ಲಿ​ ವಿಡಿಯೋ ರಿಲೀಸ್​ ಆದ ಮೇಲಂತೂ ಚಿತ್ರದ ಬಗ್ಗೆ ಮತ್ತಷ್ಟು ಮೆಚ್ಚುಗೆ ವ್ಯಕ್ತವಾಯಿತು.

ಭಾರತೀಯ ಚಿತ್ರರಂಗದಲ್ಲಿ 2021ರಲ್ಲಿ ರಿಲೀಸ್​ ಆದ ಅತ್ಯುತ್ತಮ ಸಿನಿಮಾಗಳಲ್ಲಿ ಇದು ಕೂಡ ಒಂದು. ಸದ್ಯ ಈಗ ‘ಜೈ ಭೀಮ್’​ ಸಿನಿಮಾಗೆ ಮತ್ತೊಂದು ಅಭಿಮಾನದ ಗರಿ ಸೇರುವ ಸಮಯ ಬಂದಿದೆ. ಆಸ್ಕರ್​​ ಸಂಸ್ಥೆ ನೀಡುವ ಪ್ರಶಸ್ತಿಗೆ 276 ಸಿನಿಮಾಗಳು ಆಯ್ಕೆ ಆಗಿದ್ದು. ಆಯ್ಕೆಗೊಂಡ ಸಿನಿಮಾಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ‘ಜೈಭೀಮ್​’​ ಹಾಗೂ ಮಲಯಾಳಂನ ಮೋಹನ್​ ಲಾಲ್​ ನಟನೆಯ ‘ಮರಕ್ಕರ್​’ ಸಿನಿಮಾಗಳು ಸ್ಥಾನ ಪಡೆದುಕೊಂಡಿವೆ.

ಈ ಬಾರಿಯ 94ನೇ ಆಸ್ಕರ್​ ಪ್ರಶಸ್ತಿ ಪ್ರಧಾನ ​ಕಾರ್ಯಕ್ರಮ ಮಾರ್ಚ್​ 27ರಂದು, ಲಾಸ್​ ಏಂಜಲೀಸ್​ನಲ್ಲಿ ನಡೆಯುತ್ತಿದೆ. ‘ಜೈ ಭೀಮ್​’ ಆಸ್ಕರ್​ ರೇಸ್​ನಲ್ಲಿ ಇರುವುದಕ್ಕೆ ಚಿತ್ರತಂಡ ಸಂತಸ ವ್ಯಕ್ತಪಡಿಸಿದೆ. ಈ ಬಗ್ಗೆ ಟ್ವೀಟ್​ ಮಾಡುವ ಮೂಲಕ ಖುಷಿ ಹಂಚಿಕೊಂಡಿದೆ. ಇನ್ನು,‘ಮರಕ್ಕರ್’​ಚಿತ್ರ ತಂಡ ಕೂಡ ಈ ಬಗ್ಗೆ ಸಂತಸ ಹೊರಹಾಕಿದೆ. ಈ ಸಿನಿಮಾಗಳು ಫಿನಾಲೆ ತಲುಪಿ ಪ್ರಶಸ್ತಿ ಬಾಚಿಕೊಳ್ಳಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

News First Live Kannada


Leave a Reply

Your email address will not be published. Required fields are marked *