ಆಸ್ಟ್ರೇಲಿಯಾದಲ್ಲಿ ಕೊಲೆ ಮಾಡಿ ಭಾರತದಲ್ಲಿ ತಲೆಮರೆಸಿಕೊಂಡಿರುವ ನರ್ಸ್​ ಸುಳಿವು ಕೊಟ್ಟರೆ 8 ಕೋಟಿ ಬಹುಮಾನ – 8 crores reward if the nurse who murdered in Australia and came to India and is hiding gives information


ಆಸ್ಟ್ರೇಲಿಯನ್ ಮಹಿಳೆಯನ್ನು ಕೊಂದು ಭಾರತದಲ್ಲಿ ಬಂದು ತಲೆಮರೆಸಿಕೊಂಡಿರುವ ಭಾರತೀಯ ಮೂಲದ ನರ್ಸ್ ಅನ್ನು ಪತ್ತೆ ಹಚ್ಚಿಕೊಟ್ಟವರಿಗೆ ಒಂದು ಮಿಲಿಯನ್ ಡಾಲರ್ ಬಹುಮಾನವನ್ನು ನೀಡುವುದಾಗಿ ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್ ಪೊಲೀಸರು ಘೋಷಿಸಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಕೊಲೆ ಮಾಡಿ ಭಾರತದಲ್ಲಿ ತಲೆಮರೆಸಿಕೊಂಡಿರುವ ನರ್ಸ್​ ಸುಳಿವು ಕೊಟ್ಟರೆ 8 ಕೋಟಿ ಬಹುಮಾನ

8 crores reward if the nurse who murdered in Australia and came to India and is hiding gives information

ಮೆಲ್ಬೋರ್ನ್: ಆಸ್ಟ್ರೇಲಿಯಾದಲ್ಲಿ 2018ರಲ್ಲಿ ಕಡಲತೀರದಲ್ಲಿ ಆಸ್ಟ್ರೇಲಿಯನ್ ಮಹಿಳೆಯನ್ನು ಕೊಂದು ಭಾರತದಲ್ಲಿ ಬಂದು ತಲೆಮರೆಸಿಕೊಂಡಿರುವ ಭಾರತೀಯ ಮೂಲದ ನರ್ಸ್ ಅನ್ನು ಪತ್ತೆ ಹಚ್ಚಿಕೊಟ್ಟವರಿಗೆ ಒಂದು ಮಿಲಿಯನ್ ಡಾಲರ್ ಬಹುಮಾನವನ್ನು ನೀಡುವುದಾಗಿ ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್ ಪೊಲೀಸರು ಘೋಷಿಸಿದ್ದಾರೆ.

ಇನ್ನಿಸ್‌ಫೈಲ್‌ನಲ್ಲಿ ದಾದಿಯಾಗಿ ಕೆಲಸ ಮಾಡಿದ 38 ವರ್ಷದ ರಾಜ್‌ವಿಂದರ್ ಸಿಂಗ್, ಪ್ರಕರಣದ ಪ್ರಮುಖ ವ್ಯಕ್ತಿಯಾಗಿದ್ದಾನೆ. ಆದರೆ ಕಾರ್ಡಿಂಗ್ಲಿಯನ್ನು ಕೊಲೆ ಮಾಡಿದ ನಂತರ ಆಸ್ಟ್ರೇಲಿಯಾದಲ್ಲಿ ಕೆಲಸವನ್ನು ತೊರೆದು ತನ್ನ ಹೆಂಡತಿ ಮತ್ತು ಮೂವರು ಮಕ್ಕಳೊಂದಿಗೆ ದೇಶವನ್ನು ಬಿಟ್ಟು ಭಾರತಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಇದೀಗ ಆತನನ್ನು ಹುಡುಕಿ ಕೊಟ್ಟವರಿಗೆ ಕ್ವೀನ್ಸ್‌ಲ್ಯಾಂಡ್ ಪೋಲಿಸರು 1 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್‌ಗಳನ್ನು ನೀಡುತ್ತೇವೆ, ಇದು ಕ್ವೀನ್ಸ್‌ಲ್ಯಾಂಡ್ ಪೋಲಿಸ್ ನೀಡಿದ ಅತಿದೊಡ್ಡ ಮೊತ್ತವಾಗಿದೆ, ಸಿಂಗ್‌ಗಾಗಿ ನಡೆಯುತ್ತಿರುವ ಹುಡುಕಾಟದಲ್ಲಿ ಸಾರ್ವಜನಿಕರಿಂದ ಮಾಹಿತಿ ಬೇಕಾಗಿದೆ. ಡಿಟೆಕ್ಟಿವ್ ಆಕ್ಟಿಂಗ್ ಸೂಪರಿಂಟೆಂಡೆಂಟ್ ಸೋನಿಯಾ ಸ್ಮಿತ್ ತುಂಬಾ ದುಬಾರಿ ಬಹುಮಾನ ಎಂದು ತಿಳಿಸಿದ್ದಾರೆ.

ತೊಯಾಹ್ ಹತ್ಯೆಯಾದ ಮರುದಿನ ಅಕ್ಟೋಬರ್ 22 ರಂದು ಸಿಂಗ್ ಕೇರ್ನ್ಸ್‌ನಿಂದ ನಿರ್ಗಮಿಸಿದರು, ನಂತರ 23ರಂದು ಸಿಡ್ನಿಯಿಂದ ಭಾರತಕ್ಕೆ ಹೋಗಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಇದನ್ನು ಖಚಿತ ಪಡಿಸಿಕೊಳ್ಳಲಾಗಿದೆ. ಆತ ಭಾರತದ ಯಾವ ಪ್ರದೇಶದ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದಿಲ್ಲ, ಹಾಗಾಗಿ ಭಾರತದ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಈ ಬಗ್ಗೆ ಅವರಿಂದ ಯಾವುದೇ ಮಾಹಿತಿ ಬಂದಿಲ್ಲ. ಹಾಗಾಗಿ ಸಾರ್ವಜನಿಕರಿಗೆ ಆ ವ್ಯಕ್ತಿ ಕಂಡರೆ ತಕ್ಷಣ ಪೊಲೀಸರಿಗೆ ತಿಳಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಬಹುಮಾನ ನೀಡುವುದಾಗಿ ಹೇಳಿದ್ದಾರೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.