ಕೊರೊನಾ ಸುನಾಮಿಯಿಂದ ಯಶಸ್ವಿಯಾಗಿ ಮುಂದೆ ಸಾಗ್ತಿದ್ದ​ IPL​ಗೆ, ತಾತ್ಕಾಲಿಕವಾಗಿ ತೆರೆಬಿದ್ದಿದೆ. ದೇಶದಲ್ಲಿ ಕೊರೊನಾ ಮಿತಿ ಮೀರಿದ ಕಾರಣ, ಉಳಿದ 31 ಪಂದ್ಯಗಳ ಮರು ಆಯೋಜನೆಗೆ ವಿಶ್ವದ ಶ್ರೀಮಂತ ಮಂಡಳಿ ಸಕಲ ಸಿದ್ಧತೆ ಮಾಡಿಕೊಳ್ತಿದೆ. ಸೆಪ್ಟೆಂಬರ್ 18 ಅಥವಾ 19ರಿಂದ ವಿಶ್ವದ ಶ್ರೀಮಂತ ಕ್ರಿಕೆಟ್​ ಲೀಗ್ ಆಯೋಜಿಸೋಕೆ, ಬಿಸಿಸಿಐ ಯೋಚನೆ​ ಮಾಡ್ತಿದೆ. ಆದರೆ ಈ ಸಿಹಿ ಸುದ್ದಿ ಹೊರ ಬಿದ್ದ ಬೆನ್ನಲ್ಲೇ, ಕ್ರಿಕೆಟ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್​ವೊಂದು ಆಘಾತ ಉಂಟುಮಾಡಿದೆ.

IPL​​ ಮರು ಆಯೋಜನೆ ಬಗ್ಗೆ ಮೇ 29ರಂದು ನಡೆಯಲಿರುವ BCCI ವಿಶೇಷ ಸಾಮಾನ್ಯ ಸಭೆಯಲ್ಲಿ, ಅಧಿಕೃತ ಘೋಷಣೆ ಹೊರ ಬೀಳಲಿದೆ. 3 ವಾರಗಳ ಕಾಲ ನಡೆಯಲಿರುವ ಈ ಆವೃತ್ತಿಯ ದ್ವಿತೀಯಾರ್ಧದಲ್ಲಿ, 10 ಡಬಲ್​​ ಹೆಡರ್​ ಪಂದ್ಯಗಳನ್ನ ನಡೆಸೋಕೆ ಬಿಸಿಸಿಐ ಚಿಂತನೆ ನಡೆಸಿದೆ. ಆ ಮೂಲಕ ಕ್ರಿಕೆಟ್ ಪ್ರೇಮಿಗಳಿಗೆ ಉಂಟಾಗಿದ್ದ ನಿರಾಸೆಯನ್ನ ನೀಗಿಸಲು, ಮಂಡಳಿ ಮುಂದಾಗಿದೆ. ಒಂದು ವೇಳೆ ಅಂದುಕೊಂಡ ಅವಧಿಗೇ ಮಿಲಿಯನ್​ ಡಾಲರ್ ಟೂರ್ನಿಯನ್ನ​​ ನಡೆಸಿದ್ರೆ, ಲೀಗ್​​​​ನ ರೀ ಶೆಡ್ಯೂಲ್​​​​​ ಪಂದ್ಯಗಳಿಗೆ ಆಲ್​ಮೋಸ್ಟ್​​​ ಫಾರಿನ್​​ ಪ್ಲೇಯರ್ಸ್​​ ಮಿಸ್​​ ಆಗೋ ಸಾಧ್ಯತೆ ಇದೆ.

ಹೌದು..!! ನಿಗದಿತ ಐಸಿಸಿ ಟಿ20 ವಿಶ್ವಕಪ್, ಅಕ್ಟೋಬರ್​ 18ರಿಂದ ಆರಂಭವಾಗೋ ಕಾರಣ, BCCI ಈ ಸಮಯದೊಳಗೆ IPL​ Phase-2, ಪೂರ್ಣಗೊಳಿಸಲು ಬಿಗ್​ಪ್ಲಾನ್​ ಹಾಕಿಕೊಂಡಿದೆ. ಸೆಪ್ಟೆಂಬರ್ -ಅಕ್ಟೋಬರ್‌ನಲ್ಲಿ IPL ಆರಂಭವಾದ್ರೆ, ಇದು ವಿಶ್ವಕಪ್​​ಗೂ ಅನುಕೂಲ ಎಂದೇ ಭಾವಿಸಲಾಗಿತ್ತು. ಆದರೆ ಬ್ಯುಸಿ ಶೆಡ್ಯೂಲ್​​​ನಿಂದಾಗಿ ಆಸಿಸ್​, ಇಂಗ್ಲೆಂಡ್​​ ಸೇರಿದಂತೆ ಇತರೆ ತಂಡಗಳ ಆಟಗಾರರಿಗೆ, ಇದು ಬ್ಯಾಡ್​ನ್ಯೂಸ್​ ಆಗಿದೆ. ಹಾಗೆಯೇ ಇದು ಬಿಸಿಸಿಐಗೂ ತಲೆನೋವಾಗಿ ಪರಿಣಮಿಸಿದೆ.

ಶ್ರೀಮಂತ ಲೀಗ್​​ನಲ್ಲಿ ಇರಲ್ಲ, ಮ್ಯಾಕ್ಸಿ – ವಾರ್ನರ್​ ಅಬ್ಬರ..!
ಜುಲೈನಲ್ಲಿ ಆಸ್ಟ್ರೇಲಿಯಾ 5 ಪಂದ್ಯಗಳ ಟಿ20 ಸರಣಿಗಾಗಿ, ವೆಸ್ಟ್​ ಇಂಡೀಸ್​​ ಪ್ರವಾಸ ಕೈಗೊಳ್ಳಲಿದೆ. ಬಳಿಕ ಬಾಂಗ್ಲಾದೇಶದ ವಿರುದ್ಧ 5 ಪಂದ್ಯಗಳ ಟಿ-ಟ್ವೆಂಟಿ ಸರಣಿ.! IPL​ ಆಯೋಜಿಸುವ ಟೈಮ್​ನಲ್ಲೇ ಅಂದರೆ, ವಿಶ್ವಕಪ್​ಗೂ ಮುನ್ನ ಶ್ರೀಲಂಕಾ ಎದುರು ಏಕದಿನ-ಟಿ20 ಸರಣಿ ಆಯೋಜಿಸಲು ಕಾಂಗರೂ ಪಡೆ ಸಿದ್ಧತೆ ಮಾಡಿಕೊಳ್ತಿದೆ. ಇದೆಲ್ಲದರ ಜೊತೆಗೆ ಕ್ವಾರಂಟೀನ್​ ಕೂಡ ಇರಲಿದೆ. ಹೀಗಾಗಿ ಬಹುತೇಕ ಆಸಿಸ್​ ಆಟಗಾರರ ಮನರಂಜನೆ, IPL​ನಲ್ಲಿ ಮಿಸ್​​ ಆಗೋದು ಗ್ಯಾರಂಟಿ.

ಡೇವಿಡ್​ ವಾರ್ನರ್​, ಸ್ಟೀವ್​ ಸ್ಮಿತ್​, ಪ್ಯಾಟ್​ ಕಮಿನ್ಸ್​, ಗ್ಲೇನ್​ ಮ್ಯಾಕ್ಸ್​ವೆಲ್​, ಮಾರ್ಕಸ್​ ಸ್ಟೋಯ್ನಿಸ್​.. ಹೀಗೆ ಆಸಿಸ್​​ನ 18 ಪ್ರಮುಖ ಆಟಗಾರರು, ಶ್ರೀಮಂತ ಲೀಗ್​ನಿಂದ ಬಹುತೇಕ ದೂರ ಉಳಿಯೋದು ಕನ್ಫರ್ಮ್​​. ಆದರೆ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗದ​ ಆಟಗಾರರು​ ಮಾತ್ರ, ಐಪಿಎಲ್ ಆಡಲಿದ್ದಾರೆ.

ಮತ್ತೊಮ್ಮೆ ಮಿಸ್​ ಆಗಲಿದ್ದಾರೆ ಸ್ಟೋಕ್ಸ್​​, ಆರ್ಚರ್​​..?
ಯೆಸ್​​..! ಇಂಗ್ಲೆಂಡ್​ ಕ್ರಿಕೆಟಿಗರ ಎಂಟರ್​​ಟೈನ್​ಮೆಂಟ್​ ಆಲ್​ಮೋಸ್ಟ್​ ಸಿಗೋದಿಲ್ಲ. ಮಿಲಿಯನ್​ ಡಾಲರ್ ಟೂರ್ನಿ ರದ್ದಾದ ಸಂದರ್ಭದಲ್ಲೇ, ​IPL ಮರು ಆಯೋಜನೆಗೊಂಡ್ರೂ ಆಡೋದು ಅಸಾಧ್ಯ ಅಂತ ಇಂಗ್ಲೆಂಡ್​ ಆಟಗಾರರು ಹೇಳಿದ್ರು. ಅದರಂತೆ ಆಗಸ್ಟ್​ನಲ್ಲಿ ಭಾರತದ ವಿರುದ್ಧ 5 ಪಂದ್ಯಗಳ ಟೆಸ್ಟ್​ ಸರಣಿ. ನಂತರ ಸೆಪ್ಟೆಂಬರ್​​ನಲ್ಲಿ ಬಾಂಗ್ಲಾದೇಶದ ಎದುರು 3 ಪಂದ್ಯಗಳ ಏಕದಿನ ಮತ್ತು ಎರಡು ಪಂದ್ಯಗಳ ಟಿ20 ಸರಣಿಯನ್ನು ಆಯೋಜಿಸಲಿದೆ. ಇದರಿಂದಾಗಿ 14ನೇ ಆವೃತ್ತಿಯ 2ನೇ ಹಂತದಲ್ಲಿ ಕ್ರಿಕೆಟ್​ ಜನಕರ ಅಬ್ಬರ ಇರೋದಿಲ್ಲ..!!

ಮೊಯಿನ್​ ಅಲಿ, ಬೆನ್​ ಸ್ಟೋಕ್ಸ್​, ಜೋಫ್ರಾ ಆರ್ಚರ್​, ಜೋಸ್​ ಬಟ್ಲರ್​, ಸ್ಯಾಮ್ ಕರನ್, ಇಯಾನ್​ ಮಾರ್ಗನ್​, ಜಾನಿ ಬೈರ್​​ಸ್ಟೋ ಸೇರಿದಂತೆ, 14 ಆಟಗಾರರು ಶ್ರೀಮಂತ ಲೀಗ್​ಗೆ ಗೈರಾಗಲಿದ್ದಾರೆ. ಇವರ ಜೊತೆಗೆ ಬಾಂಗ್ಲಾ ಆಟಗಾರರಾದ ಶಕೀಲ್​ ಅಲ್​ ಹಸನ್, ಮುಸ್ತಪೀಜುರ್​ ರೆಹಮಾನ್ ಕೂಡ ಅಲಭ್ಯರಾಗಲಿದ್ದಾರೆ.

ಜೆಮಿಸನ್-ಬೋಲ್ಟ್​-ಕೇನ್​​​​ ಬರಲ್ಲ ಶ್ರೀಮಂತ ಲೀಗ್​​ಗೆ..?
ಆಸಿಸ್​ – ಇಂಗ್ಲೆಂಡ್​ – ಬಾಂಗ್ಲಾ ಆಟಗಾರರಂತೆ, ನ್ಯೂಜಿಲೆಂಡ್​ ಆಟಗಾರರು ಕೂಡ IPLಗೆ ಆಬ್ಸೆಂಟ್ ಆಗಲಿದ್ದಾರೆ​. ಹೌದು..! ಸೆಪ್ಟೆಂಬರ್​ನಲ್ಲಿ UAEನಲ್ಲಿ ಪಾಕಿಸ್ತಾನ-ಕಿವೀಸ್ ನಡುವೆ​​ ತಲಾ 3 ಪಂದ್ಯಗಳ ಏಕದಿನ ಮತ್ತು ಚುಟುಕು ಸರಣಿ ನಡೆಯಲಿದೆ. ಹೀಗಾಗಿ ಕೇನ್​ ವಿಲಿಯಮ್ಸನ್​, ಟ್ರೆಂಟ್​ ಬೋಲ್ಟ್​, ಕೈಲ್​ ಜೆಮಿಸನ್​ ಸೇರಿದಂತೆ, ಪ್ರಮುಖರು IPL​​ಗೆ ಮಿಸ್​ ಆಗೋದು ಖಚಿತ..! ಹಾಗೆಯೇ ಇದೇ ಸಮಯದಲ್ಲಿ ಆಫ್ಘನ್​ ಪ್ಲೇಯರ್ಸ್​ ಕೂಡ, ಪಾಕಿಸ್ತಾನದೊಂದಿಗೆ ಸಿರೀಸ್​ ಆಡಲಿದ್ದು, ಶ್ರೀಮಂತ ಟೂರ್ನಿ ಆಡೋದು ಕಷ್ಟ.! ಹೀಗಾಗಿ ರಶೀದ್ ಖಾನ್, ಮೊಹಮ್ಮದ್​ ನಬಿ, ಮುಜೀರ್​ ಉರ್​ ರೆಹಮಾನ್​​ ಆಟ ಕಣ್ತುಂಬಿಕೊಳ್ಳೋಕು ಆಗೋದಿಲ್ಲ..!

ಮತ್ತೆ ಸಿಗಲಿದೆ ಗೇಲ್​ – ರಸೆಲ್​ – ಎಬಿಡಿ​​ ಅಬ್ಬರ..!
ಪ್ರಮುಖ ವಿದೇಶಿ ಆಟಗಾರರ ಅಲಭ್ಯತೆ, ಫ್ರಾಂಚೈಸಿ ಮತ್ತು ಕ್ರಿಕೆಟ್ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್.!! ಆದ್ರೆ ಸೌತ್​ ಆಫ್ರಿಕಾ ಮತ್ತು ವೆಸ್ಟ್​ ಇಂಡೀಸ್​ ಆಟಗಾರರು, ಐಪಿಎಲ್​ನಲ್ಲಿ ಮತ್ತೆ ಮಿಂಚೋಕೆ ಬರಲಿದ್ದಾರೆ. ಸೌತ್​ ಆಫ್ರಿಕಾದ ಎಬಿಡಿ ವಿಲಿಯರ್ಸ್​​, ಕ್ವಿಂಟನ್​ ಡಿ ಕಾಕ್​, ರಬಾಡ, ಫಾಫ್​​ ಡು ಪ್ಲೆಸಿಸ್​, ಕೆರಿಬಿಯನ್​ನ ಕ್ರಿಸ್​ ಗೇಲ್​, ಆ್ಯಂಡ್ರೆ ರಸೆಲ್​, ಕಿರನ್​ ಪೊಲಾರ್ಡ್​ ಸೇರಿದಂತೆ, ಹಲವು ಆಟಗಾರರು ಮಿಲಿಯನ್​ ಡಾಲರ್​​ ಟೂರ್ನಿಯಲ್ಲಿ ಆಡಲಿದ್ದು, ಅಭಿಮಾನಿಗಳಿಗೆ ರಸದೌತಣ ಉಣಬಡಿಸಲಿದ್ದಾರೆ.

IPL​ ಹಂಗಾಮ ಮತ್ತೆ ಕಣ್ತುಂಬಿಕೊಳ್ಳೋಕೆ ಸಿದ್ದವಾದ್ರು, ರನ್​ಹೊಳೆ ಹರಿಸುವ ಬ್ಯಾಟ್ಸ್​ಮನ್ಸ್​ ಮತ್ತು ವಿಕೆಟ್​ ಬೇಟೆಯಾಡೋ ಪ್ರಮುಖ ಬೌಲರ್ಸ್​​ಗಳು, ಮಿಸ್​​ ಆಗ್ತಿರೋದು ಬೇಸರ ತರಿಸಿರೋದಂತೂ, ಸುಳ್ಳಲ್ಲ…

The post ಆಸ್ಟ್ರೇಲಿಯಾ, ಇಂಗ್ಲೆಂಡ್​ ಆಟಗಾರರು ಐಪಿಎಲ್​ಗೆ ಅಲಭ್ಯ..? appeared first on News First Kannada.

Source: newsfirstlive.com

Source link