ಆಸ್ಟ್ರೇಲಿಯಾ ಕೋಚ್​ ಹುದ್ದೆಗೆ ಜಸ್ಟಿನ್​ ಲ್ಯಾಂಗರ್​ ದಿಢೀರ್​ ರಾಜೀನಾಮೆ -ಮಾಜಿ ಕ್ರಿಕೆಟರ್ಸ್​ ಗರಂ


ಕೋಚ್​​​, ಕ್ಯಾಪ್ಟನ್​, ಮಂಡಳಿಗಳ ನಡುವಿನ ವಿವಾದದ ಸದ್ದು ಇದೀಗ ಟೀಮ್​ ಇಂಡಿಯಾದಲ್ಲಿ ತಣ್ಣಗಾಗಿದೆ. ಆದ್ರೆ, ಇಂತದ್ದೇ ಹೊಸ ಕಾಂಟ್ರವರ್ಸಿ ಇದೀಗ ಆಸ್ಟ್ರೇಲಿಯಾ ಕ್ರಿಕೆಟ್​ನಲ್ಲಿ ಆರಂಭವಾಗಿದೆ. ಏನದು ಹೊಸ ವಿವಾದ.? ಇಲ್ಲಿದೆ ನೋಡಿ ಡಿಟೇಲ್ಸ್​..!

ಆ್ಯಷಸ್​​ ಸರಣಿ ಸೋಲಿನ ಬೆನ್ನಲ್ಲೇ ಇಂಗ್ಲೆಂಡ್​​ ಕ್ರಿಕೆಟ್​​ ತಂಡದ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ವು. ಕೋಚ್​​​ & ಕ್ಯಾಪ್ಟನ್​ ಗೇಟ್​ ಪಾಸ್​ ನೀಡಿ ಎಂದು ನೇರಾ ನೇರವಾಗೆ ಅಭಿಮಾನಿಗಳು, ಮಾಜಿ ಕ್ರಿಕೆಟರ್ಸ್​​ ಟೀಕೆಗಳ ಸುರಿಮಳೆಗೈದಿದ್ರು. ಇದರ ಬೆನ್ನಲ್ಲೇ, ಕೋಚ್​​ ಕ್ರಿಸ್​​ ಸಿಲ್ವರ್​ವುಡ್​ಗೆ​ ಇಂಗ್ಲೆಂಡ್​ ಕ್ರಿಕೆಟ್​ ಬೋರ್ಡ್​​ ಗೇಟ್​ಪಾಸ್​ ನೀಡಿದೆ. ಇದು ಮೊನ್ನೆ ನಡೆದ ಬೆಳವಣಿಗೆ. ಇದೀಗ ಗೆದ್ದಿರೋ ಆಸ್ಟ್ರೇಲಿಯಾ ತಂಡದ ಕೋಚ್​ ತಮ್ಮ ಹುದ್ದೆಗೆ ದಿಢೀರ್​​ ರಾಜೀನಾಮೆ ನೀಡಿ ಶಾಕ್​ ನೀಡಿದ್ದಾರೆ.

ವಿಶ್ವಕಪ್​, ಆ್ಯಷಸ್​ ಗೆದ್ರೂ ಹುದ್ದೆಯಿಂದ ಕೆಳಗಿಳಿದ ಲ್ಯಾಂಗರ್​.!

ಯೆಸ್​​..! ಕಳೆದ 6 ತಿಂಗಳಿಂದ ಆಸ್ಟ್ರೇಲಿಯಾ ಕ್ರಿಕೆಟ್​ ತಂಡ ಸಾಲಿಡ್​​ ಫಾರ್ಮ್​ನಲ್ಲಿದೆ. ವಿಶ್ವಕಪ್​ ಟೂರ್ನಿಯಲ್ಲಿ ಆಲ್​ರೌಂಡ್​​ ಪರ್ಫಾಮೆನ್ಸ್​ ನೀಡಿ ಟಿ20 ಕಿರೀಟಕ್ಕೂ ಮುತ್ತಿಕ್ಕಿದೆ. ಇಷ್ಟೇ ಅಲ್ಲ.. ಇಡೀ ದೇಶದ ಪ್ರತಿಷ್ಠೆಯ ಕದನ ಆ್ಯಷಸ್​ನಲ್ಲೂ ಜಯಿಸಿದೆ. ಆಸ್ಟ್ರೇಲಿಯಾ ತಂಡ ಈ ಸಕ್ಸಸ್​​ಗೆ ಆಟಗಾರರು ಎಷ್ಟು ಕಾರಣೀಕರ್ತರೂ ಅಷ್ಟೇ ಶ್ರಮ ಕೋಚ್​​ ಜಸ್ಟಿನ್​ ಲ್ಯಾಂಗರ್​ದೂ ಇದೇ. ಆದ್ರೆ, ತಂಡ ಯಶಸ್ಸಿನ ಉತ್ತುಂಗದಲ್ಲಿರೋ ಈ ಸಮಯದಲ್ಲಿ ಕೋಚ್​ ಹುದ್ದೆಯಿಂದ ಲ್ಯಾಂಗರ್​ ದಿಢೀರ್​​ ಕೆಳಗಿಳಿಸಿದ್ದಾರೆ.

ಸಿಎ ಹಾಗೂ ನಾಯಕನ ನಡವಳಿಕೆಯಿಂದ ಬೇಸತ್ರಾ ಲ್ಯಾಂಗರ್​..?

ಸಕ್ಸಸ್​ಫುಲ್​ ಕೋಚ್​ ದಿಢೀರ್​​ ರಾಜೀನಾಮೆ ನೀಡಿದ ಬೆನ್ನಲ್ಲೇ ವಿವಾದದ ಬಿರುಗಾಳಿ ಎದ್ದಿದೆ. ನೂತನ ಟೆಸ್ಟ್​ ನಾಯಕ ಪ್ಯಾಟ್​ ಕಮಿನ್ಸ್​ ಹಾಗೂ ಕ್ರಿಕೆಟ್​ ಆಸ್ಟ್ರೇಲಿಯಾದ ವರ್ತನೆಯಿಂದ ಲ್ಯಾಂಗರ್​ ಬೇಸತ್ತಿದ್ರು ಎಂದು ವರದಿಯಾಗ್ತಿದೆ. ಜಸ್ಟಿನ್​ ಲ್ಯಾಂಗರ್​ರ ಕೋಚಿಂಗ್​ ಸ್ಟೈಲ್​ ಹಲವು ಆಟಗಾರರಿಗೆ ಇಷ್ಟವಾಗ್ತಿರಲಿಲ್ಲವಂತೆ. ಹಲವು ಬಾರಿ ಬೋರ್ಡ್​​ ಕಂಪ್ಲೇಂಟ್ ಕೂಡ​ ಮಾಡಲಾಗಿತ್ತು. ಹೀಗಾಗಿಯೇ ಬೋರ್ಡ್​ ಕೂಡ ಲ್ಯಾಂಗರ್​​ಗೆ ಕೊಕ್ ಕೊಡಲು ಸಜ್ಜಾಗಿತ್ತು ಎನ್ನಲಾಗಿದ್ದು, ಮುಜುಗರದಿಂದ ತಪ್ಪಿಕೊಳ್ಳಲು ಲ್ಯಾಂಗರ್​​ ರಾಜೀನಾಮೆ ನೀಡದ್ದಾರೆ ಎಂದು ವರದಿಯಾಗ್ತಿದೆ.

ಬೋರ್ಡ್​​, ನಾಯಕನ ವಿರುದ್ಧ ಮಾಜಿ ಕ್ರಿಕೆಟರ್ಸ್​ ಕಿಡಿ..!

ಲ್ಯಾಂಗರ್​ ರಾಜೀನಾಮೆ ನೀಡಿದ ಬೆನ್ನಲ್ಲೇ ಬೋರ್ಡ್​ ಮತ್ತು ಕ್ಯಾಪ್ಟನ್​ ವಿರುದ್ಧ ಮಾಜಿ ಕ್ರಿಕೆಟರ್ಸ್​ ಕಿಡಿ ಕಾರ್ತಿದ್ದಾರೆ. ಸಕ್ಸ್​​​ಸ್​ಫುಲ್​ ಕೋಚ್​ ಅನ್ನ ನಡೆಸಿಕೊಂಡ ರೀತಿಯನ್ನ ಮ್ಯಾಥ್ಯೂ ಹೆಡನ್​ ಹಾಗೂ ಮಿಚೆಲ್​ ಜಾನ್ಸನ್​ ಪ್ರಶ್ನೆ ಮಾಡ್ತಿದ್ದಾರೆ. ​ಕೋಚಿಂಗ್​ ಶೈಲಿ ಹೇಗೆ ಇದ್ದರೂ ಫಲಿತಾಂಶದಲ್ಲಿ ಸಕ್ಸಸ್​ ಸಿಕ್ಕೆದೆಯಲ್ಲಾ ಎಂಬ ಮಾತುಗಳನ್ನ ಇನ್ನೂ ಹಲವರು ಹೇಳ್ತಿದ್ದಾರೆ. ಈ ಅಭಿಪ್ರಾಯಗಳೇ ವಿವಾದಗಳನ್ನ ಹುಟ್ಟಿಹಾಕ್ತಿವೆ. ಒಟ್ಟಿನಲ್ಲಿ ಇಡೀ ಪ್ರಕರಣ ಈ ಹಿಂದಿನ ವಿರಾಟ್​ ಕೊಹ್ಲಿ – ಅನಿಲ್​ ಕುಂಬ್ಳೆ ಜಟಾಪಟಿಯನ್ನ ನೆನಪಿಸುವಂತಿರೋದಂತೂ ಸುಳ್ಳಲ್ಲ.

News First Live Kannada


Leave a Reply

Your email address will not be published.