ಆಸ್ಟ್ರೇಲಿಯಾ ಪರ ಕ್ಲಬ್ ಕ್ರಿಕೆಟ್ ಆಡಲು ಯುವರಾಜ್ ಸಿಂಗ್ ರೆಡಿ..?

ಆಸ್ಟ್ರೇಲಿಯಾ ಪರ ಕ್ಲಬ್ ಕ್ರಿಕೆಟ್ ಆಡಲು ಯುವರಾಜ್ ಸಿಂಗ್ ರೆಡಿ..?

ಯುವರಾಜ್ ಸಿಂಗ್, ಕ್ರಿಸ್ ಗೇಲ್​, ಎಬಿಡಿ ವಿಲಿಯರ್ಸ್​ರಂತಹ ಖ್ಯಾತ ಕ್ರಿಕೆಟಿಗರು ಮುಂದಿನ ದಿನಗಳಲ್ಲಿ ಆಸ್ಟ್ರೇಲಿಯಾದ ಕ್ಲಬ್​ ಒಂದರಲ್ಲಿ ಆಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಮೆಲ್ಬೋರ್ನ್ ಮೂಲದ​ ಕ್ರಿಕೆಟ್ ಕ್ಲಬ್​​ ಪರ ಆಡಲು ಈ ಆಟಗಾರರು ಮುಂದಾಗ್ತಿದ್ದಾರೆ ಎಂದು ಹೇಳಲಾಗ್ತಿದೆ. ಇವರಲ್ಲದೇ ಬ್ರಿಯಾನ್ ಲಾರಾ ಜೊತೆಗೂ ಸಹ ಕ್ಲಬ್​ ಮಾತುಕತೆ ನಡೆಸುತ್ತಿರುವುದಾಗಿಯೂ ತಿಳಿದು ಬಂದಿದೆ. ಶ್ರೀಲಂಕಾದ ತಿಲಕರತ್ನೆ ದಿಲ್ಶಾನ್, ಸನತ್ ಜಯಸೂರ್ಯ, ಉಪುಲ್​ ತರಂಗಾ ತಂಡದಲ್ಲಿದ್ದು, ನಾವು ಇತರೆ ಕೆಲವು ಸಂಭಾವ್ಯ ಆಟಗಾರರೊಂದಿಗೆ ಒಪ್ಪಂದಗಳನ್ನ ಅಂತಿಮಗೊಳಿಸುವ ಕೆಲಸ ಮಾಡ್ತಿದ್ದೇವೆ ಎಂದು ಕ್ಲಬ್​ನ ಅಧಿಕಾರಿಗಳು ತಿಳಿಸಿದ್ಧಾರೆ. ಕ್ರಿಸ್ ಗೇಲ್ ಮತ್ತು ಯುವರಾಜ್ ಅವರೊಂದಿಗೆ ಮಾತನಾಡುತ್ತಿದ್ದು, ಅವರು ಶೇಕಡಾ 85 ರಿಂದ 90ರಷ್ಟು ಆಡುವ ಸಾಧ್ಯತೆ ಇದೆ ಎಂದಿದ್ದಾರೆ.

The post ಆಸ್ಟ್ರೇಲಿಯಾ ಪರ ಕ್ಲಬ್ ಕ್ರಿಕೆಟ್ ಆಡಲು ಯುವರಾಜ್ ಸಿಂಗ್ ರೆಡಿ..? appeared first on News First Kannada.

Source: newsfirstlive.com

Source link