ರಾಮನಗರ: ಆಸ್ತಿಗಾಗಿ ಮಗ ಹೆತ್ತ ಅಪ್ಪನನ್ನೇ ಥಳಿಸಿ ಮನೆಯಿಂದ ಹೊರಗಾಕಿದ ಘಟನೆ ರಾಮನಗರದ ಸಿಂಗ್ರಾಬೋವಿಯಲ್ಲಿ ಬೆಳಕಿಗೆ ಬಂದಿದೆ.

ಕೆಎಸ್​​ಆರ್​ಟಿಸಿ ಚಾಲಕ ಕುಮಾರ ಎಂಬಾತ ತಂದೆಯನ್ನು ಥಳಿಸಿ ಮನೆಯಿಂದ ಹೊರ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಈ ಕುರಿತ ವಿಡಿಯೋ ಸಾಕಷ್ಟು ವೈರಲ್ ಆಗಿದೆ.

ರಾಮನಗರ ಡಿಪೋದಲ್ಲಿ ಚಾಲಕನಾಗಿರುವ ಕುಮಾರ, ವೃದ್ಧ ತಂದೆ ತಿಮ್ಮಯ್ಯನ ಮೇಲೆ ದರ್ಪ ತೋರಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ. ವೃದ್ಧಾಪ್ಯದಲ್ಲಿ ಹಾಸಿಗೆ ಹಿಡಿದಿರುವ ಅಪ್ಪ ತಿಮ್ಮಯ್ಯ ಅವರನ್ನು ಮನೆಯಿಂದ ಹೊರಗೆ ಎಸೆದಿರುವ ದೃಶ್ಯಗಳಯ ಮೊಬೈಲ್​​ನಲ್ಲಿ ಸೆರೆಯಾಗಿದೆ.

ಮಗ ಆಸ್ತಿಗಾಗಿಯೇ ತಂದೆಯನ್ನು ಮನೆಯಿಂದ ಹೊಡೆದು ಹೊರದಬ್ಬಿದ್ದಾನೆ ಎನ್ನಲಾಗಿದ್ದು, ಹಲವಾರು ತಿಂಗಳಿಂದ್ಲೂ ಮನೆಯನ್ನ ತನಗೆ ನೀಡುವಂತೆ ಒತ್ತಡ ಹಾಕಿದ್ದ. ಅದಕ್ಕೆ ತಂದೆ ಒಪ್ಪದ್ದಕ್ಕೆ ದಿನನಿತ್ಯ ಥಳಿಸಿ, ಊಟ ಕೂಡ ನೀಡುತ್ತಿರಲಿಲ್ಲ ಎನ್ನಲಾಗಿದೆ. ಮಗನ ಕ್ರೌರ್ಯಕ್ಕೆ ವೃದ್ಧ ಬಳಲಿದ್ದು, ಪೊಲೀಸ್ ಠಾಣೆಗೂ ದೂರು ನೀಡಿದ್ದರು. ಪೊಲೀಸರು ಮಾತುಕತೆ ನಡೆಸಿ ಕಳುಹಿಸಿಕೊಟ್ಟಿದ್ದಾರೆ ಎನ್ನಲಾಗಿದೆ.

The post ಆಸ್ತಿಗಾಗಿ ಹೆತ್ತ ತಂದೆಯನ್ನೇ ಥಳಿಸಿ ಮನೆಯಿಂದ ಹೊರಗೆಸೆದ ಮಗ appeared first on News First Kannada.

Source: newsfirstlive.com

Source link