ಆಸ್ತಿಯಲ್ಲಿ ಪಾಲು ಕೇಳಿದ್ದಕ್ಕೆ ಸಹೋದರಿಯ ಮೇಲೆಯೇ ಹಲ್ಲೆಗೈದ ಅಣ್ಣ-ತಮ್ಮ..!

ಇಸ್ಲಾಮಾಬಾದ್: ತಂದೆಯ ಆಸ್ತಿಯಲ್ಲಿ ಪಾಲು ಕೇಳಿದಳೆಂದು ಸಹೋದರಿಯ ಮೇಲೆ ಆಕೆಯ ಸಹೋದರರೇ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

ಹಲ್ಲೆಗೈದವರನ್ನು ಅಫ್ತಾಬ್ ಹಾಗೂ ಹರ್ಷದ್ ಹನ್ನನ್ ಎಂದು ಗುರುತಿಸಲಾಗಿದೆ. ಇವರಿಬ್ಬರು ತಮ್ಮ ಸಹೊದರಿಯ ಮೇಲೆ ಸುತ್ತಿಗೆ ಹಾಗೂ ಹೆಲ್ಮೆಟ್ ನಿಂದ ಹಲ್ಲೆ ಮಾಡಿದ್ದಾರೆ.

ಸಹೋದರಿಯ ಮೇಲೆ ಹಲ್ಲೆ ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೀಡಿಯೋ ನೋಡಿದ ಪೇಶಾವರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಳಿಕ ತನಿಖೆ ನಡೆಸಿದಾಗ ಆರೋಪಿಗಳು ಪೊಲೀಸರ ಮುಂದೆ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.

ಇತ್ತ ಸಹೋದರರಿಂದ ಹಲ್ಲೆಗೊಳಗಾಗಿ ಗಂಭೀರ ಗಾಯಗೊಂಡಿರುವ ಸಹೋದರಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಮಹಿಳೆಯ ವೈದ್ಯಕೀಯ ವರದಿ ಬಂದ ಬಳಿಕ ಇಬ್ಬರು ಸಹೋದರರ ಮೇಲೆ ಭಾನ ಮಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೀಡಿಯೋದಲ್ಲೇನಿದೆ..?
ಮಹಿಳೆಯನ್ನು ನೆಲಕ್ಕುರುಳಿಸಿ ಇಬ್ಬರು ಸಹೋದರರು ಸುತ್ತಿಗೆ ಹಾಗೂ ಹೆಲ್ಮೆಟ್ ನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಅಲ್ಲದೆ ಇಬ್ಬರಲ್ಲಿ ಓರ್ವ ಹೆಲ್ಮೆಟ್ ಅನ್ನು ಮಹಿಳೆಯ ಮೇಲೆ ಎಸೆಯುತ್ತಾನೆ. ಈ ವೇಳೆ ಮಹಿಳೆ ನೋವಿನಿಂದ ಜೋರಾಗಿ ಕಿರುಚುತ್ತಿರುವುದನ್ನು ನಾವು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ: ಬೈಕ್ ಅಡ್ಡ ಬಂದಿದ್ದಕ್ಕೆ ಕಾರ್ ಡಿಕ್ಕಿ ಆಯ್ತು: ಚಿದಾನಂದ್ ಸವದಿ

ಸಹೋದರರು ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ಮಾಡುತ್ತಿರುವುದನ್ನು ಗಮನಿಸಿದ ಮಹಿಳೆಯೊಬ್ಬರು ಜಗಳ ಬಿಡಿಸಲೆಮದು ಬರುತ್ತಾರೆ. ಈ ವೇಳೆ ಆರೋಪಿಗಳು ಆ ಮಹಿಲೆಯ ಕತ್ತು ಹಿಡಿದು ತಳ್ಳುವುದು ವೀಡಿಯೋದಲ್ಲಿ ಸೆರೆಯಾಗಿದೆ.

ತಂದೆಯ ಆಸ್ತಿಯಲ್ಲಿ ತನಗೂ ಪಾಲಿದೆ. ಆ ಪಾಲನ್ನು ನೀಡುವಂತೆ ಕೇಳಿದ್ದಕ್ಕಾಗಿ ಈ ಹಲ್ಲೆ ಮಾಡಲಾಗಿದೆ ಎಂಬುದಾಗಿ ತಿಳಿದುಬಂದಿದೆ.

The post ಆಸ್ತಿಯಲ್ಲಿ ಪಾಲು ಕೇಳಿದ್ದಕ್ಕೆ ಸಹೋದರಿಯ ಮೇಲೆಯೇ ಹಲ್ಲೆಗೈದ ಅಣ್ಣ-ತಮ್ಮ..! appeared first on Public TV.

Source: publictv.in

Source link