ಬೆಂಗಳೂರು: ಕೊರೊನಾ ಪಾಸಿಟಿವ್ ಬಂದ ತಂದೆಯನ್ನ ಕಳೆದುಕೊಂಡ ವ್ಯಕ್ತಿಯೋರ್ವರು ಖಾಸಗಿ ಆಸ್ಪತ್ರೆಗಳು ದುಡ್ಡು ಮಾಡೋದರಲ್ಲಿ ಬ್ಯುಸಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೇ ತನ್ನ ಪತ್ನಿಯ ತಾಳಿ ಅಡ ಇಟ್ಟರೂ ತಂದೆ ಉಳಿಯಲಿಲ್ಲ ಎಂದು ನ್ಯೂಸ್​ ಫಸ್ಟ್ ಜೊತೆಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

ನಮ್ಮ ಅಪ್ಪನನ್ನ ಹೋದವಾರ ಸಂಜೆ ಅಡ್ಮಿಟ್ ಮಾಡಿದ್ದೀನಿ.. ಱಪಿಡ್ ಟೆಸ್ಟ್​ನಲ್ಲಿ ಪಾಸಿಟಿವ್ ಅಂತ ಬಂತು.. ಸರ್ಕಾರದ ಟೆಸ್ಟ್​ಗೆ ಕಳಿಸಿದ್ಮೇಲೆ 4 ದಿನ ಆದ್ಮೇಲೆ ರಿಸಲ್ಟ್ ಬಂತು. ಒಂದೊಂದು ಆಸ್ಪತ್ರೆಯ ಒಳಗೂ ಡೈರೆಕ್ಟ್ ಹೋಗಿ ಒಂದೊಂದು ಪೇಷೆಂಟ್​ನೂ ಕೇಳಿ ನೋಡಿದ್ರೆ ಏನು ಮಾಡ್ತಾರೆ.. ಹೆಂಗಿದಾರೆ ಅಂತ ಗೊತ್ತಾಗುತ್ತೆ. ದುಡ್ಡು ಬೇಕಾದ್ರೆ ಫೋನ್ ಮಾಡ್ತಾರೆ.. ಒಂದು ದಿನ ಐಸಿಯುಗೆ 40,000- 50,000 ಕೇಳ್ತಾರೆ. ಅದುಬಿಟ್ರೆ ಮೆಡಿಸಿನ್, ಲ್ಯಾಬ್​ಗೆ ಸಪರೇಟ್ ದುಡ್ಡು.. ನಾನು ಎಲ್ಲಾ ಸೇರಿ 4,80,000 ಕಟ್ಟಿದ್ದೀನಿ. ನನ್ನ ವೈಫ್​ದು ತಾಳಿ ಚೈನ್ ಅಡ ಮಡಗಿಬಿಟ್ಟು ಹಣ ಕಟ್ಟಿದ್ದೀನಿ ಎಂದೂ ಅವರು ದುಃಖ ಹಂಚಿಕೊಂಡಿದ್ದಾರೆ.

 

The post ‘ಆಸ್ಪತ್ರೆಗೆ ₹5 ಲಕ್ಷ ಕಟ್ಟಿದ್ದೀನಿ.. ಹೆಂಡ್ತಿ ಮಾಂಗಲ್ಯ ಅಡ ಇಟ್ಟಿದ್ದೀನಿ.. ಆದ್ರೂ ಅಪ್ಪ ಉಳಿಯಲೇ ಇಲ್ಲ’ appeared first on News First Kannada.

Source: newsfirstlive.com

Source link