ಬೆಂಗಳೂರು: ಕಳೆದ ರಾತ್ರಿ ನಗರದ ಮಹಾಲಕ್ಷ್ಮಿ ಲೇಔಟ್​ನ ಶ್ರೇಯಸ್ ಆಸ್ಪತ್ರೆಯ ಆಕ್ಸಿಜನ್ ಪ್ಲಾಂಟ್​​ನಲ್ಲಿ ಲೀಕೇಜ್​ ಉಂಟಾಗಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಬಾಲಿವುಡ್​ ನಟ ಸೋನು ಸೂದ್​ ಅವರ ತಂಡ ಸೂಕ್ತ ಸಮಯಕ್ಕೆ ಆಕ್ಸಿಜನ್ ಪೂರೈಕೆ ಮಾಡಿ ದೊಡ್ಡ ಅನಾಹುತವನ್ನ ತಪ್ಪಿಸಿದ್ದಾರೆ .

ಶ್ರೇಯಸ್ ಆಸ್ಪತ್ರೆಯ ಐಸಿಯುನಲ್ಲಿ 30ಕ್ಕೂ ಹೆಚ್ಚು ರೋಗಿಗಳಿದ್ರು. ಮಧ್ಯರಾತ್ರಿ 12 ಗಂಟೆ ಸುಮಾರಿಗೆ ದಿಢೀರನೆ ಆಕ್ಸಿಜನ್ ಕೊರತೆ ಎದುರಾಗಿತ್ತು. ಲೀಕೇಜ್​ ವಿಚಾರ ತಿಳಿಯುತ್ತಿದ್ದಂತೆ  ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ರು. ಎಸಿಪಿ ರೀನಾ ಸುವರ್ಣ ಮತ್ತು ಸೋನು ಸೂದ್ ಚಾರಿಟಬಲ್ ಟ್ರಸ್ಟ್  ಕೂಡ ಕೂಡಲೇ ಸ್ಥಳಕ್ಕಾಗಮಿಸಿತು.

ಸೂನುಸೂದ್ ಚಾರಿಟಬಲ್ ಟ್ರಸ್ಟ್ ತಕ್ಷಣ 6 ಜಂಬೋ ಸಿಲಿಂಡರ್ ತಂದು ಆಸ್ಪತ್ರೆಗೆ ಕೊಟ್ಟರು.  ಅಲ್ಲದೆ ಲೀಕೇಜ್ ಆಗ್ತಿದ್ದ ಆಕ್ಸಿಜನ್ ಪ್ಲಾಂಟ್​​ ರಿಪೇರಿಯನ್ನ ಕೂಡ​ ಟ್ರಸ್ಟ್​ನ ಸದಸ್ಯರು  ಮಾಡಿಸಿದರು.

 

ಸಮಯಕ್ಕೆ ಸರಿಯಾಗಿ ಆಪದ್ಬಾಂಧವರಂತೆ ಬಂದು ರೋಗಿಗಳ ಜೀವ ಉಳಿಸಲು ನೆರವಾಗಿದ್ದಕ್ಕೆ ಆಸ್ಪತ್ರೆಯವರು ಸೋನು ಸೂದ್ ಚಾರಿಟಬಲ್ ಟ್ರಸ್ಟ್ ಹಾಗೂ ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ.

 

The post ಆಸ್ಪತ್ರೆಯ ಆಕ್ಸಿಜನ್ ಪ್ಲಾಂಟ್​ನಲ್ಲಿ ಲೀಕೇಜ್.. ಆಪದ್ಬಾಂಧವರಂತೆ ಬಂದ ಸೋನು ಸೂದ್​ ಟೀಂ appeared first on News First Kannada.

Source: newsfirstlive.com

Source link