ಹುಬ್ಬಳ್ಳಿ: ನಗರದ ಆಸ್ಪತ್ರೆಯೊಂದರಲ್ಲಿ ನೂರು ವರ್ಷಕ್ಕೂ ಹಳೆಯದಾದ ಲಾಕರ್ ಒಂದು ಪತ್ತೆಯಾಗಿದ್ದು ಸಾಕಷ್ಟು ಕೂತಹಲ ಮೂಡಿಸಿದೆ.
ನಗರದ ಪ್ರತಿಷ್ಠಿತ ಚಿಟಗುಪ್ಪಿ ಆಸ್ಪತ್ರೆಯ ನವಿಕರಣ ಕಾಮಗಾರಿ ವೇಳೆ ಲಾಕರ್ ಬೆಳಕಿಗೆ ಬಂದಿದ್ದು ನೂರು ವರ್ಷಕ್ಕೂ ಹಳೆಯದು ಎನ್ನಲಾಗಿದೆ. ಸದ್ಯ ಲಾಕರ್ನ್ನ ಸಿದ್ದೆಶ್ವರ ಕಂಪನಿಯ ಕಾರ್ಮಿಕರ ಸಹಾಯದಿಂದ ಪೊಲೀಸ್ರ ಸಮ್ಮುಖದಲ್ಲಿ ಓಪನ್ ಮಾಡಲಾಗಿದೆ. ಈ ವೇಳೆ ಲಾಕರ್ನಲ್ಲಿ 1950 ಮತ್ತು 1952 ರನಡುವೆ ನಡೆದಿದ್ದ ಅಂಚೆ ಕಚೇರಿಗೆ ಸಂಬಂಧಿಸಿದ ಪಾಸ್ಬುಕ್, ಕೀ ಗೊಂಚಲು, ಹಳೆ ಕಾಲದ ಪೈಸೆ ಮೌಲ್ಯದ ನಾಣ್ಯಗಳು ಪತ್ತೆಯಾಗಿವೆ.