ಬೆಂಗಳೂರು: ಮೊನ್ನೆ ಮೊನ್ನೆಯಷ್ಟೇ ಅಂಬೇಡ್ಕರ್​ ಮೆಡಿಕಲ್​ ಕಾಲೇಜು, ಆಸ್ಪತ್ರೆ ರೋಗಿಗಳನ್ನ ಒಳಗೆ ಬಿಟ್ಟು ಬೀಗ ಜಡಿದು ದೊಡ್ಡ ಯಡವಟ್ಟು ಮಾಡ್ಕೊಂಡಿತ್ತು. ಇದ್ರಿಂದ ಸಾರ್ವಜನಿಕರ ಕೆಂಗಣ್ಣಿಗೂ ಗುರಿಯಾಗಿತ್ತು. ಈ ಘಟನೆ ನಡೆದು ಇನ್ನೂ ಒಂದು ವಾರವು ಕಳೆದಿಲ್ಲ. ಅಷ್ಟರಲ್ಲೇ ಆಸ್ಪತ್ರೆ ಮತ್ತೊಂದು ಯಡವಟ್ಟು ಮಾಡ್ಬಿಟ್ಟಿದೆ.

ಈಗ ಇದೇ ಆಸ್ಪತ್ರೆ ಮೃತದೇಹ ಬದಲಾವಣೆ ಮಾಡಿ ಮತ್ತೊಂದು ಯಡವಟ್ಟು ಮಾಡ್ಕೊಂಡ್ಬಿಟ್ಟಿದೆ. ಡಾ.ಅಂಬೇಡ್ಕರ್ ಮೆಡಿಕಲ್‌ ಕಾಲೇಜು.. ನಗರದ ಪ್ರತಿಷ್ಟಿತ ಆಸ್ಪತ್ರೆ.. ಯಾಕೋ ಗೊತ್ತಿಲ್ಲ ಈ ಆಸ್ಪತ್ರೆ ಒಂದಲ್ಲೊಂದು ಯಡವಟ್ಟು ಮಾಡಿಕೊಳ್ತಾನೆ ಇದೆ. ನಿನ್ನೆ ಶವಾಗಾರದಲ್ಲಿ ಇಟ್ಟಿದ್ದ ಪಾರ್ಥಿವ ಶರೀರ ಇವತ್ತು ಬೆಳಗ್ಗೆ ಬೇರೆ ಕುಟುಂಬಕ್ಕೆ ಹಸ್ತಾಂತರಿಸಿ ಆಸ್ಪತ್ರೆ ಬೇಜವಾಬ್ದಾರಿತನ ತೋರಿದೆ.

ಬನ್ನೇರುಘಟ್ಟ ರಸ್ತೆಯ ಬೇಗೂರು ಸಮೀಪದ ನಿವಾಸಿಯಾಗಿರೋ ಅನುಸೂಯಮ್ಮ ಕೊರೊನಾ ಸೋಂಕಿನಿಂದಾಗಿ ಕಳೆದ ವಾರ ಅಂಬೇಡ್ಕರ್​ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಉಸಿರಾಟದ ಸಮಸ್ಯೆಯಿಂದ ನಿನ್ನೆ ರಾತ್ರಿ 9:45ಕ್ಕೆ ಕೊನೆಯುಸಿರೆಳೆದಿದ್ದರು. ಮೃತರ ಕುಟುಂಬಕ್ಕೆ ಆಸ್ಪತ್ರೆಯ ಆಡಳಿತ ಮಂಡಳಿಯವರು ಮಾಹಿತಿ ನೀಡಿದ್ರು. ಹೀಗಾಗಿ ಕುಟುಂಬಸ್ಥರು‌ ಇವತ್ತು ಬೆಳಗ್ಗೆ ಆ್ಯಂಬುಲೆನ್ಸ್ ಸಮೇತ ಅಸ್ಪತ್ರೆಗೆ ತೆರಳಿದ್ರು. ಅನುಸೂಯಮ್ಮನ ಮೃತದೇಹ ಕೇಳಿದಾಗ ಆಸ್ಪತ್ರೆ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ. ಬಳಿಕ ಆಡಳಿತ ಮಂಡಳಿ ಕುಟುಂಬಸ್ಥರಿಗೆ ಮೃತದೇಹ ಇಲ್ಲವೆಂದು ತಿಳಿಸಿದೆ.ನಮ್ಮವರ ಪಾರ್ಥಿವ ಶರೀರವನ್ನು ನೀಡಿ ಎಂದು ಕುಟುಂಬಸ್ಥರು ಆಗ್ರಹಿಸಿದ್ರು

ಬಳಿಕ ಆ ಮೃತದೇಹ ತೆಗೆದುಕೊಂಡು ಹೋದ ವ್ಯಕ್ತಿಯನ್ನ ಅಲ್ಲಿಗೆ ಕರೆಸಲಾಯಿತು. ಆದ್ರೆ, ಅಷ್ಟರಲ್ಲಾಗಲೇ ಆ ವ್ಯಕ್ತಿ ಮೃತದೇಹವನ್ನ ತನ್ನ ಪತ್ನಿಯ ಮೃತದೇಹವೆಂದು ಅಂತ್ಯಕ್ರಿಯೆ ಮಾಡಿದ್ದ. ಕೊನೆಗೆ ಪೊಲೀಸರ ಸಮ್ಮುಖದಲ್ಲಿ ಭಸ್ಮವನ್ನ ಮನೆಯವ್ರಿಗೆ ಕೊಡಿಸಲಾಯ್ತು. ಮೃತದೇಹಕ್ಕೆ ಕಾದ್ರೂ ಕೊನೆಗೂ ಮೃತದೇಹ ಸಿಗ್ಲಿಲ್ಲ. ಉಳಿಸಿಕೊಳ್ಳೋಕಂತೂ ಆಗ್ಲಿಲ್ಲ, ಅಂತ್ಯಸಂಸ್ಕಾರವಾದ್ರೂ ಮಾಡೋಣ ಅಂತಾ ಬಂದಿದ್ದ ಮನೆಯವ್ರಿಗೆ ಅದು ಸಾಧ್ಯವಾಗ್ಲಿಲ್ಲ. ಆದ್ರೆ, ಆಸ್ಪತ್ರೆಯ ಈ ಬೇಜವಾಬ್ದಾರಿತನ ನಿಜಕ್ಕೂ ಖಂಡನೀಯ..

ಮಧುಸೂದನ್​, ನ್ಯೂಸ್​ಫಸ್ಟ್​​, ಬೆಂಗಳೂರು

The post ಆಸ್ಪತ್ರೆ ಯಡವಟ್ಟು; ಸೋಂಕಿತೆಯ ಸಂಬಂಧಿಕರಿಗೆ ಮೃತದೇಹದ ಬದಲಿಗೆ ಸಿಕ್ಕಿದ್ದು ಭಸ್ಮ appeared first on News First Kannada.

Source: newsfirstlive.com

Source link