ಹಾವೇರಿ: ಕೊರೊನಾ ಸೋಂಕಿಗೆ ಒಳಗಾದ ವ್ಯಕ್ತಿಯೋರ್ವ ತನ್ನನ್ನು ಆಸ್ಪತ್ರೆಗೆ ಕರೆದೊಯ್ಯಲು ಆ್ಯಂಬುಲೆನ್ಸ್ ಬಂದ ವೇಳೆ ತಪ್ಪಿಸಿಕೊಂಡು ಕಬ್ಬಿನ ಬೆಳೆಯಲ್ಲಿ ನುಸುಳಿ ಎಸ್ಕೇಪ್ ಆದ ಘಟನೆ ಹಾವೇರಿ ತಾಲೂಕಿನ ಕಬ್ಬೂರು ತಾಂಡಾದಲ್ಲಿ ನಡೆದಿದೆ.

40 ವರ್ಷದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದದ್ದು ದೃಢವಾದ ಹಿನ್ನೆಲೆ ಆರೋಗ್ಯ ಇಲಾಖೆ ಸಿಬ್ಬಂದಿ ಆತನನ್ನಿ ಕರೆದೊಯ್ಯಲು ಬಂದಿದ್ದಾರೆ. ಇವರು ನನ್ನನ್ನು ಆಸ್ಪತ್ರೆಗೆ ಸೇರಿಸಿದ್ರೆ ನಾನು ಸತ್ತುಹೋಗ್ತೇನೆಂದು ಆ ಸೋಂಕಿತ ಹೆದರಿದ್ದಾನೆ ಎನ್ನಲಾಗಿದೆ. ಹೀಗಾಗಿ ಭಯಗೊಂಡು ಆರೋಗ್ಯ ಸಿಬ್ಬಂದಿ ಕೈನಿಂದ ತಪ್ಪಿಸಿಕೊಂಡ ವ್ಯಕ್ತಿ ಕಬ್ಬಿನ ಬೆಳೆಯೊಳಗೆ ನುಸುಳಿದ್ದಾನೆ.

108 ಆ್ಯಂಬುಲೆನ್ಸ್​ ಡ್ರೈವರ್ ತೌಫೀಕ್ ಮತ್ತು ಶಂಕರ್ ಎಂಬುವವರು ಸೋಂಕಿತನನ್ನ ಅರ್ಧ ಗಂಟೆಕಾಲ ಹುಡುಕಾಡಿದ್ರೂ ಅವರ ಕೈಗೆ ಸಿಗದ ಸೋಂಕಿತ ಎಸ್ಕೇಪ್ ಆಗಿದ್ದಾನೆ. ಸೋಂಕಿತನ ವರ್ತನೆ ಕಂಡ ಗ್ರಾಮಸ್ಥರು ತಮ್ಮ ಮನೆಗಳ ಬಾಗಿಲು ಹಾಕಿಕೊಂಡಿದ್ದಾರೆ ಎನ್ನಲಾಗಿದೆ.

The post ‘ಆಸ್ಪತ್ರೆ ಸೇರಿದ್ರೆ ಸತ್ತು ಹೋಗ್ತೇನೆ’.. ಕಬ್ಬಿನ ಗದ್ದೆಗೆ ನುಗ್ಗಿದ ಸೋಂಕಿತ ಎಸ್ಕೇಪ್ appeared first on News First Kannada.

Source: newsfirstlive.com

Source link