ಪಿತ್ತ ರೋಗ ಸಾಮಾನ್ಯವಾಗಿ ಹಲವರಲ್ಲಿ ಕಂಡುಬರುವ ಸಮಸ್ಯೆಯಾಗಿದೆ. ನಮ್ಮ ಆಹಾರಕ್ರಮಗಳ ಬದಲಾವಣೆಯಿಂದ ದೇಹವನ್ನು ಬಾಧಿಸುವ ಈ ಪಿತ್ತದ ಸಮಸ್ಯೆ ಯಿಂದಾಗಿ ದೇಹ ಅನಾರೋಗ್ಯಕ್ಕೆ ಈಡಾಗುತ್ತದೆ.

ಪಿತ್ತದ ಸಮಸ್ಯೆ ಇರುವವರು ತಮ್ಮ ಆಹಾರ ಕ್ರಮಗಳಲ್ಲಿ ಸ್ಪಲ್ಪ ಬದಲಾವಣೆಗಳನ್ನು ಮಾಡಿಕೊಂಡರೂ ಅಜೀರ್ಣ, ಎದೆ ಮತ್ತು ಗಂಟಲಿನಲ್ಲಿ ಉರಿ ಅನುಭವ, ತಲೆ ಸುತ್ತು, ಹುಳಿತೇಗು, ವಾಂತಿ ಮುಂತಾದ ವಿವಿಧ ಬಗೆಯ ಸಮಸ್ಯೆಗಳಿಂದ ಬಳಲುತ್ತಾರೆ.

ಪಿತ್ತದ ಸಮಸ್ಯೆಗೆ ಪರಿಹಾರಗಳೇನು.

ನಮ್ಮ ದೇಹದಲ್ಲಿನ ಪ್ರತಿಯೊಂದು ಸಮಸ್ಯೆಗಳಿಗೆ ನೈಸರ್ಗಿಕವಾಗಿ ಸಿಗುವ ವಸ್ತುಗಳಲ್ಲಿ ಪರಿಹಾರಗಳಿದ್ದು, ಈ ನಡುವೆ  ಪಿತ್ತದ ಸಮಸ್ಯೆಗೂ ಹಲವು ನೈಸರ್ಗಿಕ ಪರಿಹಾರಗಳಿವೆ. ಇವುಗಳನ್ನು ಸೇವನೆ ಮಾಡುವುದರಿಂದ ಶೀಘ್ರವಾಗ ನಮ್ಮ ಆರೋಗ್ಯವನ್ನು ಸರಿಪಡಿಸಿಕೊಳ್ಳಬಹುದಾಗಿದೆ.

ಇದನ್ನೂ ಓದಿ:ತನ್ನ “ಪ್ಲೇ ಮ್ಯೂಸಿಕ್” ಸೇವೆಯನ್ನು ಕೊನೆಗೊಳಿಸಲಿದೆ ಗೂಗಲ್

  1. ನೆಲ್ಲಿ ಕಾಯಿ ಚೂರ್ಣವನ್ನು ಅಥವಾ ನೆಲ್ಲಿಕಾಯಿಯ ರಸವನ್ನು ಸೇವನೆ ಮಾಡುವುದರಿಂದ ಪಿತ್ತದ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳಬಹುದಾಗಿದೆ.
  2. ಕಡಲೆಕಾಯಿ ಸಿಪ್ಪೆಯ ಚೂರ್ಣವನ್ನು ತಯಾರಿಸಿಕೊಂಡು ಅದಕ್ಕೆ ಸಕ್ಕರೆ ಬೆರೆಸಿ, ತುಪ್ಪದಲ್ಲಿ ಕಲಸಿ ಸೇವಿಸಿದರೆ ಪಿತ್ತದ ಸಮಸ್ಯೆ ಶಮನವಾಗುತ್ತದೆ.( ಎರಡು ವಾರ  ಎರಡು ಹೊತ್ತು )
  3. ಅಮೃತ ಬಳ್ಳಿಯ ರಸವನ್ನು ಸೇವಿಸುವುದು ಪಿತ್ತ ಸಮಸ್ಯೆ ದೂರವಾಗುತ್ತದೆ.

ಈ ಎಲ್ಲಾ ವಸ್ತುಗಳಷ್ಟೇ ಅಲ್ಲದೆ, ದಾಳಿಂಬೆ ರಸ, ಬೇಲದ ಹಣ್ಣಿನ ರಸ, ಲಿಂಬೆ ರಸ, ಹೇರಳೆ ಹಣ್ಣಿನ(ಕಂಚಿಕಾಯಿ)ರಸವನ್ನು ಸೇವಿಸುವುದರಿಂದಲೂ ಪಿತ್ತದ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.

ಆರೋಗ್ಯ – Udayavani – ಉದಯವಾಣಿ
Read More