ಆಹಾರ ಹುಡುಕಿ ಹೊರಟ ಹನಿ ಬ್ಯಾಡ್ಜರ್​​​ಗೆ ಸಿಕ್ಕಿದ್ದು ನಿಧಿ.. ಅದರಲ್ಲಿ ಏನಿತ್ತು ಗೊತ್ತಾ..?


ತೀವ್ರ ಹಸಿವಿನಿಂದ ಆಹಾರವನ್ನು ಹುಡುಕಲು ಹೊರಟ ಹನಿ ಬ್ಯಾಡ್ಜರ್​​ ಎಂಬ ಪ್ರಾಣಿಗೆ ಪ್ರಾಚೀನ ಕಾಲದ ರೋಮನ್​​ ನಾಣ್ಯಗಳು ಸಿಕ್ಕಿವೆ ಎಂದು ಸ್ಪೇನ್​​ ಪುರಾತತ್ವ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಹೌದು, ಹನಿ ಬ್ಯಾಡ್ಜರ್ ಎಂಬ ಪ್ರಾಣಿ ತೀವ್ರ ಹಸಿವಿನಿಂದ ಬಳಲುತ್ತಿತ್ತು. ಉತ್ತರ ಸ್ಪೇನ್​​ನ ಆಸ್ಟ್ರೀಯಾಸ್​​ ಎಂಬ ಪ್ರದೇಶದಲ್ಲಿರೋ ಹನಿ ಬ್ಯಾಡ್ಜರ್ ಆಹಾರಕ್ಕಾಗಿ ಹಿಮದಲ್ಲಿ ಹುಡುಕುತ್ತಾ ಹೊರಟಿತ್ತು. ಆಗ ಇಲ್ಲಿನ ಹಿಮಪ್ರದೇಶದಲ್ಲಿರೋ ಗುಹೆಯೊಂದರಲ್ಲಿ ಈ ಪ್ರಾಚೀನ ಕಾಲದ ರೋಮನ್​​ ನಾಣ್ಯಗಳು ಸಿಕ್ಕಿವೆ ಎಂದು ತಿಳಿದು ಬಂದಿದೆ.

ಇನ್ನು, ಸುದ್ದಿ ತಿಳಿದ ಕೂಡಲೇ ಸ್ಪೇನ್​​ ಪುರಾತತ್ವ ಇಲಾಖೆ ಅಧಿಕಾರಿಗಳ ತಂಡ ಸ್ಥಳಕ್ಕೆ ಧಾವಿಸಿ ಇಡೀ ಗುಹೆಯನ್ನು ಶೋಧಿಸಿದೆ. ಗುಹೆಯಲ್ಲಿ ನೆಲ ಅಗೆದಾಗ ಸುಮಾರು 209 ಪ್ರಾಚೀನ ಕಾಲದ ರೋಮನ್​​ ನಾಣ್ಯಗಳು ಸಿಕ್ಕಿವೆ. ಇವು ಭಾರೀ ಬೆಲೆ ಬಾಳುತ್ತವೆ ಎನ್ನಲಾಗಿದೆ. ಹೀಗಾಗಿ ಸ್ಪೇನ್​​ ಪುರಾತತ್ವ ಇಲಾಖೆ ಈ ಹನಿ ಬ್ಯಾಡ್ಜರ್​​ಗೆ ಥ್ಯಾಂಕ್ಸ್​ ಹೇಳಿದೆ.

News First Live Kannada


Leave a Reply

Your email address will not be published. Required fields are marked *