ಕನ್ನಡ ಬಿಗ್ ಬಾಸ್ ಸೀಸನ್ 8ರ ಖ್ಯಾತಿಯ ನಟಿ ದಿವ್ಯಾ ಸುರೇಶ್ ತಮಗೆ ಅಪಘಾತ ಸಂಭವಿಸಿದ್ದು ಹೇಗೆ? ಎಂಬುದನ್ನು ನ್ಯೂಸ್ ಫಸ್ಟ್ಗೆ ವಿವರಿಸಿದ್ದಾರೆ.
ಕೋವಿಡ್ ಎರಡನೇ ಡೋಸ್ ವ್ಯಾಕ್ಸಿನ್ ತೆಗೆದುಕೊಂಡು ಸಂಜೆ 4.30ರ ಹೊತ್ತಿಗೆ ಮನೆಗೆ ಹೊಗುತ್ತಿದ್ದೆ. ಆಗ ಸ್ಕೂಟಿಯಲ್ಲಿ ಒಬ್ಬಳೆ ಹೋಗತ್ತಿದ್ದ ಸಂದರ್ಭದಲ್ಲಿ ನಾಲ್ಕು ಐದು ನಾಯಿಗಳು ಒಟ್ಟಿಗೆ ರೋಡ್ ಕ್ರಾಸ್ ಮಾಡುತ್ತಿದ್ದವು. ಕೂಡಲೇ ಗಾಬರಿಗೊಂಡು ನಾನು ಬ್ರೇಕ್ ಹಾಕಿದೆ. ತಕ್ಷಣವೇ ಬ್ರೇಕ್ ಹಾಕಿದರ ಪರಿಣಾಮ ಬ್ಯಾಲೆನ್ಸ್ ತಪ್ಪಿ ರಸ್ತೆಯಲ್ಲಿದ್ದ ಗುಂಡಿಗೆ ಬಿದ್ದಿರೋದಾಗಿ ತಿಳಿಸಿದ್ದಾರೆ.
ಇನ್ನು, ಅಪಘಾತದಲ್ಲಿ ಸಣ್ಣ ಪುಟ್ಟ ಗಾಯಗಳಾಗಿವೆ. ಸದ್ಯ ನಾನು ಚೇತರಿಸಿಕೊಳ್ಳುತ್ತಿದೇನೆ ಎಂದು ದಿವ್ಯಾ ಹೇಳಿದ್ದಾರೆ. ಬಿಗ್ಬಾಸ್ ಮನೆಯಿಂದ ಹೊರ ಬಂದ ನಂತರ ದಿವ್ಯಾ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.