ಬೆಂಗಳೂರು: ಸಾರಿಗೆ ಸಚಿವ ಲಕ್ಷ್ಮಣ್ ಸವದಿಯವರ ಪುತ್ರ ಚಿದಾನಂದ ಸವದಿ ಕಾರ್ ಡಿಕ್ಕಿಯಾಗಿ  ವ್ಯಕ್ತಿಯೋರ್ವ ಸಾವನ್ನಪ್ಪಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಲಕ್ಷ್ಮಣ ಸವದಿ.. ಆಕ್ಸಿಡೆಂಟ್ ಆದ ಕಾರ್​ನಲ್ಲಿ ಚಿದಾನಂದ ಇರಲಿಲ್ಲ.. ಬದಲಿಗೆ ಅವನ ಸ್ನೇಹಿತರು ಚಲಾಯಿಸುತ್ತಿದ್ದ ಕಾರ್ ಅಪಘಾತಕ್ಕೀಡಾಗಿದೆ ಎಂದಿದ್ದಾರೆ.

ಚಿದು ಆಸ್ಪತ್ರೆಗೆ ಭೇಟಿ ನೀಡಿ ನಂತರ ಊರಿಗೆ ಹೋಗಿದ್ದಾನೆ..
ಚಿದಾನಂದ ಮತ್ತು ಅವನ ಸ್ನೇಹಿತರು 8-9 ಮಂದಿ ಇದ್ದರು. ಇವರೆಲ್ಲ ಕೊಪ್ಪಳದ ಆಂಜನೇಯ ದೇವಸ್ಥಾನಕ್ಕೆ ಹೋಗಿ ವಾಪಸ್ ಬರುವಾಗ ಘಟನೆ ನಡೆದಿದೆ. ಈ ವೇಳೆ ಎರಡು ಕಾರ್​ಗಳಿದ್ದವು. ಒಂದರಲ್ಲಿ ಚಿದು ಇದ್ದ.. ಇನ್ನೊಂದರಲ್ಲಿ ಅವನ ಸ್ನೇಹಿತರು ಇದ್ದರು. ಚಿದು ಗಾಡಿ ಮುಂದೆ ಹೋಗಿತ್ತು. ಅವನ ಸ್ನೇಹಿತರ ಕಾರ್ ಹಿಂದೆ ಇತ್ತು. ರಸ್ತೆಯಲ್ಲಿ ಡಿವೈಡರ್ ಓಪನ್​ ಇತ್ತು. ಈ ಕಡೆಯಿಂದ ಬೈಕ್ ಪಾಸ್ ಆಗಿದೆ. ಆಗ ಗಾಡಿ ಕಂಟ್ರೋಲ್​ಗೆ ಸಿಕ್ಕಿಲ್ಲ. ಕಾರ್ ಬೈಕ್​ಗೆ ಡಿಕ್ಕಿ ಹೊಡೆದಿದೆ.. ಹೊಡೆದಾಗ ಫೋನ್ ಮಾಡಿದ್ದಾರೆ. ಆಗ ಚಿದು ವಾಪಸ್ ಹೋಗಿ ಆ್ಯಂಬುಲೆನ್ಸ್​ಗೆ ಕರೆ ಮಾಡಿ ಆ್ಯಂಬುಲೆನ್ಸ್ ಕರೆಸಿದ್ದಾರೆ. ಆ್ಯಂಬುಲೆನ್ಸ್ ಜೊತೆಗೂ ಕೆಲವರು ಹೋಗಿದ್ದಾರೆ. ಅವರನ್ನ ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ದಾರೆ. ಆಗ ಚಿದೂನು ಹೋಗಿ ನೋಡಿಕೊಂಡು ಊರಿಗೆ ಹೋಗಿದ್ದಾನೆ ಎಂದು ಸವದಿ ಹೇಳಿದ್ದಾರೆ.

ಗಾಡಿಗೆ ನಂಬರ್ ಪ್ಲೇಟ್ ತೆಗೆದು ಮುಚ್ಚಿಕೊಳ್ಳಲು ಆಗಲ್ಲ..
ಊರಿಗೆ ಹೋದ್ಮೇಲೆ ರಾತ್ರಿ ಬೈಕ್​ ಸವಾರನ ಡೆತ್ ಆಗಿದೆ. ಆಕ್ಸಿಡೆಂಟ್ ಆದ ಗಾಡಿಗೆ ನಂಬರ್ ಪ್ಲೇಟ್ ತೆಗೆದು ಮುಚ್ಚಿಕೊಳ್ಳಲು ಆಗಲ್ಲ. ಅದ್ಯಾವುದಕ್ಕೂ ಆಧಾರವಿಲ್ಲ. ಮಗನ ಜೊತೆಗೆ ಮಾತಾಡಿ ವಿಚಾರ ತಿಳಿದುಕೊಂಡಿದ್ದೇನೆ, ತಿಳಿದುಕೊಂಡೇ ಮಾತಾಡ್ತಿದ್ದೇನೆ. ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅಪಘಾತದಿಂದ ಸಾವನ್ನಪ್ಪಿದ ವ್ಯಕ್ತಿಯ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ನನ್ನ ಕೈಲಾದ ಸಹಾಯ ಮಾಡ್ತೇನೆ ಎಂದಿದ್ದಾರೆ.

ಚಿದುಗೆ ಹನುಮಂತ ಅಂತ ಡ್ರೈವರ್ ಇದಾನೆ
ಚಿದು ಡ್ರೈವಿಂಗ್ ಮಾಡಲ್ಲ, ಅವನಿಗೆ ಹನುಮಂತ ಅಂತ ಡ್ರೈವರ್ ಇದಾನೆ.. ಅವನೇ ಮೊದಲಿಂದಲೂ ಪರ್ಮನೆಂಟ್ ಡ್ರೈವರ್ ಆಗಿದ್ದಾನೆ. ಈ ಡ್ರೈವರ್ ಕೂಡ ಅಲ್ಲಿ ಹಾಜರಾಗಿದ್ದಾನೆ. ಮಂತ್ರಿ ಮಗನ ಹೆಸರು ಕೇಳಿಬಂದಾಗ ಕೆಲವು ಚರ್ಚೆಗಳು ಆಗ್ತಾವೆ, ಆದ್ರೆ ಅದೆಲ್ಲ ಸುಳ್ಳು. ಚಿದಾನಂದ ಮುಂದೆ ಫಾರ್ಚೂನರ್ ಗಾಡಿಯಲ್ಲಿದ್ದ. ಹಿಂದೆ ಅವನ ಗೆಳೆಯರು ಇನ್ನೊಂದು ಗಾಡಿಯಲ್ಲಿದ್ರು. ಚಿದಾನಂದ ಸ್ಥಳದಲ್ಲಿ ಇದ್ದ ಅಂತ ಹೇಳೋದ್ರಲ್ಲಿ ತಪ್ಪೇನಿದೆ. ಇದ್ದದ್ದು ಇದ್ದಂಗೆ ಹೇಳ್ಬೇಕಲ್ಲ ಪೊಲೀಸ್ ತನಿಖೆ ನಡೆಯುತ್ತಿದೆ ನೋಡೋಣ. ಕುಟುಂಬಸ್ಥರ ಮನೆಗೆ ಖುದ್ದಾಗಿ ಹೋಗಿ ಸಾಂತ್ವನ ಹೇಳ್ತೇನೆ. ಇವತ್ತು ಮೈಸೂರು ಹೋಗ್ತಿದ್ದೇನೆ. ನಾಳೆ ಗುಲ್ಬರ್ಗಾಗೆ ಹೋಗಿ ಅಲ್ಲಿಂದ ಅವರ ಮನೆಗೆ ಭೇಟಿ ನೀಡ್ತೇನೆ ಎಂದು ಇದೇ ವೇಳೆ ಲಕ್ಷ್ಮಣ ಸವದಿ ತಿಳಿಸಿದ್ರು.

The post ಆ್ಯಕ್ಸಿಡೆಂಟ್ ಆದ ಕಾರ್​ನಲ್ಲಿ ನನ್ನ ಮಗ ಇರಲಿಲ್ಲ.. -ಸಚಿವ ಸವದಿ appeared first on News First Kannada.

Source: newsfirstlive.com

Source link