
ಸಂತ್ರಸ್ತ ಯುವತಿ
ಯುವತಿಯ ಆರೋಗ್ಯ ಏರುಪೇರಾಗಿದ್ದು ತೀವ್ರ ಜ್ವರ ಮತ್ತು ಬಾಡಿಯಲ್ಲಿ ಇನ್ಫೆಕ್ಷನ್ ಕಂಡುಬಂದಿದೆ. ಹೀಗಾಗಿ ಹಾಸ್ಪಿಟಲ್ ಸಿಬ್ಬಂದಿ ಯುವತಿಯನ್ನು ಮತ್ತೆ ICU ಗೆ ಶಿಫ್ಟ್ ಮಾಡಿ ಆಕ್ಸಿಜನ್ ಸಪೋರ್ಟ್ ನಿಂದ ಚಿಕಿತ್ಸೆ ನೀಡುತ್ತಿದ್ದಾರೆ.
ಬೆಂಗಳೂರು: ಮಾಡಬಾರದ್ದು ಮಾಡಿದ್ರೇ ಆಗಬಾರದ್ದು ಆಗುತ್ತೇ ಅಂತಾರೆ. ಆದರೆ ಪ್ರೇಮ (ಆ್ಯಸಿಡ್ ಅಟ್ಯಾಕ್ ಯುವತಿ) ಯುವತಿ ಏನು ತಪ್ಪು ಮಾಡಿಲ್ಲ. ಆದರೆ ಓರ್ವ ಕಿರಾತಕ ಮಾಡಿದ ತಪ್ಪಿನಿಂದಾಗಿ (ಆ್ಯಸಿಡ್ ದಾಳಿ) ನಿಂದಾಗಿ ಕಳೆದ ಸರಿಸುಮಾರು 28 ದಿನಗಳಿಂದ ಹಾಸ್ಪಿಟಲ್ ನಲ್ಲಿ ಸಾವು ಬದುಕಿನ ನಡುವೆ ಫೈಟ್ ಮಾಡುತ್ತಿದ್ದಾಳೆ. ಅಷ್ಟಕ್ಕೂ ಆಸಿಡ್ ದಾಳಿಗೆ ಒಳಗದ ಯುವತಿಯ ಪರಿಸ್ಥಿತಿ ಈಗ ಹೇಗಿದೆ ಎನ್ನುವ ಬಗ್ಗೆ ಒಂದು ವರದಿ ಇಲ್ಲಿದೆ.
ಏಪ್ರಿಲ್ 28 ರಂದು ಪ್ರೇಮ ಎನ್ನುವ ಯುವತಿಯ ಮೇಲೆ ನಾಗೇಶ್ ಎನ್ನುವ ಕಿರಾತಕ ಆ್ಯಸಿಡ್ ಹಾಕಿದ್ದ. ಯುವತಿ ಮೇಲೆ ಆ್ಯಸಿಡ್ ಹಾಕಿ ಬೇರೆ ರಾಜ್ಯಕ್ಕೆ ಹೋಗಿ ತಲೆಮರಸಿಕೊಂಡಿದ್ದ. ಸುಮಾರು ಹದಿನೈದು ದಿನಗಳ ಬಳಿಕ ನಾಗೇಶ್ ನನ್ನು ತಮಿಳುನಾಡಿನ ಒಂದು ಆಶ್ರಮದಲ್ಲಿ ಪೋಲಿಸರು ಬಂಧಿಸಿದ್ದರು. ಇನ್ನೂ ಅಲ್ಲಿಂದ ನಾಗೇಶ್ ನನ್ನು ಪೋಲಿಸರು ಕರೆದುಕೊಂಡು ಬರುವಾಗ ಪೋಲಿಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿ ಪೋಲಿಸರಿಂದ ಗುಂಡಿನ ದಾಳಿಗೆ ಒಳಗಾಗಿ ವಿಕ್ಟೋರಿಯಾ ಹಾಸ್ಪಿಟಲ್ ನಲ್ಲಿ ನಾಗೇಶ್ ಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಆ್ಯಸಿಡ್ ದಾಳಿಗೆ ಒಳಗಾದ ಯುವತಿ ಪರಿಸ್ಥಿತಿ ಒಂದೊಂದು ದಿನ ಒಂದೊಂದು ರೀತಿಯಲ್ಲಿದೆ. ಹಾಸ್ಪಿಟಲ್ನಲ್ಲಿ ಸಾವು- ಬದುಕಿನ ನಡುವೆ ಹೋರಾಟ ಮಾಡ್ತಿದ್ದಾಳೆ. ಆ್ಯಸಿಡ್ ಯುವತಿಯ ಮೇಲೆ ಶೇಕಡಾ 1/3rd (36%) ರಷ್ಟು ಶರೀರದ ಮೇಲೆ ಡೀಪ್ ಅಟ್ಯಾಕ್ ಆಗಿರುವುದರಿಂದಾಗಿ ಯುವತಿಗೆ ಸರ್ಜರಿ ಮಾಡುವಾಗ ಇನ್ಫೆಕ್ಷನ್ ಕಂಡು ಬರುತ್ತಿದೆ. ಅದರಿಂದಾಗಿ ಯುವತಿಯ ಪೋಷಕರ ಆತಂಕಕ್ಕೆ ಕಾರಣವಾಗುತ್ತಿದೆ.