ಆ ಒಂದು ಮಾತಿಗೆ ಪ್ರೇಮ್​ ಕಾಲಿಗೆ ನಮಸ್ಕರಿಸಿದ ರಾಣ | Prem funny comment on Rana In Ek Love Ya Movie


ನಟಿ ರಕ್ಷಿತಾ (Rakshita) ಸಹೋದರ ರಾಣ ಅವರು ‘ಏಕ್​ ಲವ್​ ಯಾ’ ಚಿತ್ರದ (Ek Love Ya Movie) ಮೂಲಕ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ. ಇದು ಅವರ ಮೊದಲ ಸಿನಿಮಾ. ಪ್ರೇಮ್​ ಅವರು ಯಾರನ್ನಾದರೂ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ ಎಂದರೆ ಅವರ ಬಗ್ಗೆ ಅಭಿಮಾನಿಗಳಿಗೆ ಸಹಜವಾಗಿಯೇ ಹೆಚ್ಚು ನಿರೀಕ್ಷೆ ಇರುತ್ತದೆ. ಹೀಗಾಗಿ, ರಾಣ (Rana) ನಟನೆಯಲ್ಲಿ ಹೇಗೆ ಪಳಗಿದ್ದಾರೆ ಎಂಬುದನ್ನು ನೋಡಲು ಅಭಿಮಾನಿಗಳು ಕಾದಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್, ಟ್ರೇಲರ್​, ಸಾಂಗ್​​ಗಳು ಗಮನ ಸೆಳೆದಿವೆ. ಈ ಸಿನಿಮಾದ ಸುದ್ದಿಗೋಷ್ಠಿ ವೇಳೆ ಪ್ರೇಮ್​ ಅವರು ರಾಣ ಅವರ ಕಾಲೆಳಿದಿದ್ದಾರೆ. ಸಿನಿಮಾ ಆಫರ್​ಗಳು ಬರುತ್ತಿವೆಯೇ ಎನ್ನುವ ಬಗ್ಗೆ ಪ್ರಶ್ನೆ ಮಾಡಲಾಯಿತು. ಇದಕ್ಕೆ ಉತ್ತರಿಸಲು ರಾಣ ತೆರಳುತ್ತಿದ್ದಂತೆ, ‘ಮಾಡಿ, ಮಾಡಿ, ಆಮೇಲೇ ನಾವು ಕೇಳಿದಾಗ ಡೇಟ್​ ಕೊಡಲಿ’ ಎಂದರು ಪ್ರೇಮ್​. ಆಗ ಪ್ರೇಮ್​ ಕಾಲಿಗೆ ರಾಣ ನಮಸ್ಕರಿಸಿದರು.

TV9 Kannada


Leave a Reply

Your email address will not be published.