ಆ ಒಬ್ಬ ವ್ಯಕ್ತಿಯಿಂದ ನಿರಂತರ ಸೋಲಾಗ್ತಿದೆ, ಅದ್ಕೆ ನಾನೇ ರಂಗ ಪ್ರವೇಶ ಮಾಡ್ತೇನೆ- ಸತೀಶ್ ಆಕ್ರೋಶ


ಬೆಳಗಾವಿಯ ಆ ಒಬ್ಬ ನಾಯಕನಿಂದ ಕಾಂಗ್ರೆಸ್​ಗೆ ನಿರಂತರ ಸೋಲಾಗಿದೆ ಎಂದು ಕಾಂಗ್ರೆಸ್​ ಹಿರಿಯ ನಾಯಕ ಸತೀಶ್ ಜಾರಕಿಹೋಳಿ ಕಿಡಿಕಾರಿದ್ದಾರೆ. ಸತೀಶ್ ಜಾರಕಿಹೊಳಿ ಅವರ ಈ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಮಾಜಿ ಶಾಸಕ ಪೀರೋಜ್ ಸೇಠ್ ಹೆಸರು ಹೇಳದೇ ವಾಗ್ದಾಳಿ ನಡೆಸಿದ ಸತೀಶ್ ಜಾರಕಿಹೊಳಿ.. ಕಾಂಗ್ರೆಸ್ ಅಂದ್ರೆ ನಾನೇ ಅಧಿಪತಿಯಾಗಬೇಕು ಎಂದು ಆತ ಅಂದುಕೊಂಡಿದ್ದಾನೆ. ಮಗ, ಮೊಮ್ಮಗ ಕಾಂಗ್ರೆಸ್ ಪಕ್ಷವನ್ನು ಆಳಬೇಕೆಂಬ ಬಯಕೆ ಇದೆ. ಇದೇ ಕಾರಣಕ್ಕಾಗಿ ಕಳೆದ ಲೋಕಸಭಾ, ಮಹಾನಗರ ಪಾಲಿಕೆ‌ ಚುನಾವಣೆಯಲ್ಲಿ ಸೋಲಾಗಿದೆ. ಇದೇ ಕಾರಣಕ್ಕಾಗಿ ನಾನು ರಂಗಪ್ರವೇಶ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆ ವ್ಯಕ್ತಿಯಿಂದ ಯಾರೊಬ್ಬರೂ ಬೆಳೆಯಲು ಸಾಧ್ಯವಾಗುತ್ತಿಲ್ಲ. ಇದು ನಮಗೆ ಈಗಾಗಲೇ ಮನವರಿಕೆಯಾಗಿದೆ. ಕಾಂಗ್ರೆಸ್ ಪಕ್ಷದ‌ ಹಿತದೃಷ್ಟಿಯಿಂದ ನಮಗೆ ಯಾವುದೇ ದಾರಿ ಉಳಿದಿಲ್ಲ. ಸ್ವತಃ ನಾವೇ ಈಗ ಬೆಳಗಾವಿ ಮಹಾನಗರದ ಪಕ್ಷ ಸಂಘಟನೆಗಿಳಿದಿದ್ದೇವೆ. ಪಕ್ಷ ಉಳಿಸಲು ಅನ್ಯಮಾರ್ಗವಿಲ್ಲ, ನಾವೇ ಪಕ್ಷಕ್ಕೆ ಮರುಜೀವ ನೀಡುತ್ತೇವೆ ಅನ್ನೋ ವಿಶ್ವಾಸ ವ್ಯಕ್ತಪಡಿಸಿದರು.

News First Live Kannada


Leave a Reply

Your email address will not be published. Required fields are marked *