ಬೆಂಗಳೂರು: ಪುನೀತ್ ಅಕಾಲಿಕ ನಿಧನದಿಂದ ಅಪ್ಪು ಅಭಿಮಾನಿಗಳ ಸರಣಿ ಆತ್ಮಹತ್ಯೆ ಮುಂದುವರೆದಿದೆ. ಇದು ದೊಡ್ಮನೆ ಕುಟುಂಬಕ್ಕೆ ಭಾರೀ ನೋವು ತಂದಿದೆ. ಅಭಿಮಾನಿಗಳ ಸಾವಿನಿಂದ ನೊಂದಿರುವ ಅಪ್ಪು ಪತ್ನಿ ಅಶ್ವಿನಿ ತುಂಬ ನೊಂದಿದ್ದಾರೆ ಎಂದು ರಾಘವೆಂದ್ರ ರಾಜ್ಕುಮಾರ್ ತಿಳಿಸಿದ್ದಾರೆ
ಅಪ್ಪು ಅಭಿಮಾನಿಗಳ ಸರಣಿ ಆತ್ಮಹತ್ಯೆ ಕುರಿತು ಬೇಸರ ವ್ಯಕ್ತಪಡಿಸಿದ ರಾಘಣ್ಣ ನಿಮ್ಮ ಮನೆಯಲ್ಲಿ ಯಾರಾದರು ಸತ್ತರೆ ನೀವು ಸಾಯಬೇಕೆಂದು ಹೇಳಿ ಕೊಡ್ತಾರಾ? ನಾಳೆ ನಿಮ್ಮ ಮನೆಯವರು ಅಪ್ಪು ಸಾವಿನಿಂದ ಹೀಗಾಯ್ತು ಅಂತ ಮಾತಾಡ್ತಾರೆ. ಅದರಿಂದ ನಮಗೂ ಒಳ್ಳೆದಾಗಲ್ಲ. ಈಗಾಗಲೇ ನೋವಿನಲ್ಲಿದ್ದೀವಿ, ದಯವಿಟ್ಟು ಮತ್ತೆ ನಮಗೆ ನೋವು ಕೊಡಬೇಡಿ ಎಂದಿದ್ದಾರೆ.
ಇನ್ನು 12 ಅಭಿಮಾನಿಗಳ ಸಾವಿಗೆ ನನ್ನ ಪತಿ ಕಾರಣ ಅಂತ ಪುನೀತ್ ಪತ್ನಿ ಅಶ್ವಿನಿ ಬೇಸರ ಮಾಡ್ಕೊಂಡಿದ್ದಾರೆ. ಹೀಗಾಗಿ ಅವರು ನಾ ಹೊರಗಡೆ ಬರಲ್ಲ ರಾಘಣ್ಣ ಎಂದು ಹೇಳುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ನಿಮ್ಮ ಪಾದಕ್ಕೆ ನಮಸ್ಕಾರ ಮಾಡ್ತೀನಿ ಯಾರು ದಯವಿಟ್ಟು ಆತ್ಮಹತ್ಯೆಯಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ ಎಂದು ರಾಘಣ್ಣ ಬೇಡಿಕೊಂಡಿದ್ದಾರೆ.
ಮರೆಯಾದ ಯುವರತ್ನ: ಅಪ್ಪುಗೆ ನ್ಯೂಸ್ಫಸ್ಟ್ ಗೀತ ನಮನ
https://www.youtube.com/watch?v=4bxvqcmZw4o