ಜಡೇಜಾ ಇಂಜುರಿಯಿಂದ ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಸ್ಥಾನ ಗಿಟ್ಟಿಸಿದ್ದ ಆಲ್​ರೌಂಡರ್ ಅಕ್ಷರ್ ಪಟೇಲ್, ಈಗ ಇಂಗ್ಲೆಂಡ್ ಪ್ರವಾಸಕ್ಕೆ ಸಜ್ಜಾಗುತ್ತಿದ್ದಾರೆ. ಆದ್ರೀಗ ಟೆಸ್ಟ್​ ತಂಡಕ್ಕೆ ಆಲ್​ರೌಂಡರ್​ ಜಡೇಜಾ, ಕಮ್​ಬ್ಯಾಕ್​ನಿಂದಾಗಿ ಪ್ಲೇಯಿಂಗ್ ಇಲೆವೆನ್​ನಲ್ಲಿ ಕಾಣಿಸಿಕೊಳ್ಳುವುದು ಅನುಮಾನ. ಆದ್ರೆ, 2014ರಲ್ಲಿ ಬಾಂಗ್ಲಾ ವಿರುದ್ಧದ ಏಕದಿನ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಅಕ್ಷರ್ ಪಟೇಲ್, ಇದುವರೆಗೂ 38 ಏಕದಿನ, 12 ಟಿ20, 3 ಟೆಸ್ಟ್​ ಪಂದ್ಯಗಳನ್ನೇ ಆಡಿದ್ದಾರೆ. ಆದ್ರೀಗ ಮೊದಲ ಬಾರಿಗೆ ಅವಕಾಶ ವಂಚಿತ ಬಗ್ಗೆ ಅಕ್ಷರ್​ ತುಟಿಬಿಚ್ಚಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅಕ್ಷರ್​ ಪಟೇಲ್, ಗಾಯದ ಸಮಸ್ಯೆಯಿಂದ ಏಕದಿನ ತಂಡದಲ್ಲಿ ಸ್ಥಾನ ಕಳೆದುಕೊಳ್ಳಬೇಕಾಯ್ತು. ಆದ್ರೆ, ಟೆಸ್ಟ್ ಫಾರ್ಮೆಟ್​ಗೆ ಬಂದರೆ ಜಡೇಜಾ ಹಾಗೂ ಅಶ್ವಿನ್ ತಂಡದಲ್ಲಿದ್ದರು, ಈ ಇಬ್ಬರೂ ಸಹ ಉತ್ತಮ ಪ್ರದರ್ಶನ ನೀಡುತ್ತಿದ್ದ ಕಾರಣ, ಟೆಸ್ಟ್​ ತಂಡದಲ್ಲಿ ಚಾನ್ಸ್ ಗಿಟ್ಟಿಸಿಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ. ಅದ್ರಲ್ಲೂ ಜಡೇಜಾರ ಅತ್ಯುತ್ತಮ ಪ್ರದರ್ಶನ ಕಾರಣ, ಇತರೆ ಲೆಫ್ಟ್​ ಆರ್ಮ್​ ಸ್ಪಿನ್ನರ್ಸ್​ಗೆ ತಂಡದಲ್ಲಿ ಅವಕಾಶ ಸಿಗೋದು ಕಷ್ಟವಾಗಿತ್ತು. ಯಾಕಂದ್ರೆ ಟೆಸ್ಟ್ ಕ್ರಿಕೆಟ್‍ನಲ್ಲಿ ಜಡೇಜಾ ಪ್ರದರ್ಶನ ಅಷ್ಟರಮಟ್ಟಿಗಿತ್ತು. ಈ ನಡುವೆ ನಾನು ಅವಕಾಶ ಸಿಕ್ಕಾಗ ಉತ್ತಮ ಪ್ರದರ್ಶನ ನೀಡವ ಬಗ್ಗೆ ಪ್ರಯತ್ನಿಸುತ್ತಿದ್ದೆ ಎಂದಿದ್ದಾರೆ.

The post ಆ ಕ್ರಿಕೆಟಿಗನಿಂದ ಎಡಗೈ​ ಸ್ಪಿನ್ನರ್​ಗಳಿಗೆ ತಂಡದಲ್ಲಿ ಸ್ಥಾನ ಸಿಗ್ತಿಲ್ಲ.. appeared first on News First Kannada.

Source: newsfirstlive.com

Source link