2016ರಲ್ಲಿ ಸ್ಯಾಂಡಲ್​ವುಡ್​ನಲ್ಲಿ ನಡೆದಂತ ಒಂದು ದುರಂತ ಇವತ್ತಿಗೂ ಹಸಿರಾಗಿಯೇ ಇದೆ. ಸ್ಟಂಟ್​ ಮಾಸ್ಟರ್​ ರವಿವರ್ಮಾ ಇದನ್ನ ತಮ್ಮ ಜೀವನದ ಕಪ್ಪು ಚುಕ್ಕೆ ಅಂತ ಹೇಳೋದರ ಜೊತೆಗೆ ತಮ್ಮ ಜೀವನಪರ್ಯಾಂತ ಇದನ್ನ ಮರೆಯೋದಕ್ಕೂ ಆಗಲ್ಲ ಅಂತಾರೆ. ಹೌದು.. ಖಳನಟರಾದ ಅನಿಲ್​-ಉದಯ್​ ಹೆಲಿಕಾಪ್ಟರ್​ ಸ್ಟಂಟ್​ ಮೂಲಕ ಕೆರೆಗೆ ಬಿದ್ದು ತಮ್ಮ ಪ್ರಾಣ ಕಳೆದುಕೊಂಡಿದ್ದರು. ದುನಿಯಾ ವಿಜಯ್​ ನಟನೆಯ ಮಾಸ್ತಿಗುಡಿ ಸಿನಿಮಾದ ಶೂಟಿಂಗ್​ ಸಂದರ್ಭದಲ್ಲಿ ಈ ದುರಂತ ನಡೆದಿದ್ದು, ಏಳು ಜನ ಸಾಯುವ ಜಾಗದಲ್ಲಿ ಮೂರು ಜನ ಕೊನೆಯುಸಿರೆಳೆದಿದ್ದರು ಅನ್ನೋ ವಿಚಾರವನ್ನ ಎಕ್ಸ್​​​ಕ್ಲೂಸಿವ್​ ಆಗಿ ಸ್ಟಂಟ್​ ರವಿವರ್ಮಾ ನ್ಯೂಸ್​ ಫಸ್ಟ್​ ಜೊತೆ ಮಾತನಾಡುತ್ತಾ ಹಂಚಿಕೊಂಡಿದ್ದಾರೆ.

ಹೌದು.. ಆದ್ರೆ ಇದು ರವಿವರ್ಮಾ ಮಾತನ್ನ. ಅಂದು ಘಟನೆ ನಡೆದ ಸ್ಥಳಕ್ಕೆ ದುರಂತ ನಡೆಯೋದಕ್ಕೂ ಮುನ್ನ ಭೇಟಿ ನೀಡಿದ್ದ ವಿನಯ್​ ಗುರೂಜಿಗೆ ಅಲ್ಲೇನೋ ಸರಿ ಇಲ್ಲ ಅನ್ನೋದು ಮೊದಲೇ ತಿಳಿದಿತ್ತು ಅಂತಾರೆ ರವಿವರ್ಮಾ. ಈ ದುರಂತದ ಬಳಿಕ, ಜೈಲುವಾಸ ಅನುಭವಿಸಿ ಬಂದಿದ್ದ ಸ್ಟಂಟ್​ ಮಾಸ್ಟರ್​ ರವಿವರ್ಮಾ, ವಿನಯ್​ ಗುರೂಜಿ ಬಳಿ ವಿಚಾರಿಸಿದಾಗ ಏಳು ಜನ ಆ ದಿನ ಪ್ರಾಣ ಕಳೆದುಕೊಳ್ಳಬೇಕಿತ್ತು, ಆದ್ರೆ ಅದು ಮೂರಕ್ಕೆ ಮುಕ್ತಾಯವಾಯ್ತು ಅನ್ನೋ ವಿಚಾರ ಗೊತ್ತಾಗಿತ್ತು. ಅನಿಲ್​-ಉದಯ್​ ಬಿಟ್ರೆ ಇನ್ಯಾರು ಅನ್ನೋ ಪ್ರಶ್ನೆ ಮೂಡೋದು ಸಹಜ. ಆ ಘಟನೆ ನೋಡಲು ಬಂದ ಒಬ್ಬರು ಅಲ್ಲೇ ಆ ದಿನ ನಿಧನರಾಗಿದ್ದರು ಅಂತ ರವಿವರ್ಮಾ ನೆನೆಪಿಸಿಕೊಂಡಿದ್ದಾರೆ.

‘ಅನಿಲ್​ ಮತ್ತು ಉದಯ್​​ ಬಿದ್ದ ತಕ್ಷಣ ಮುಳುಗಿದ್ದಾರೆ ಅಂತ ಎಲ್ಲರೂ ಅಂದುಕೊಂಡಿದ್ದಾರೆ. ಅವರು ಆಗಲೇ ಮುಳುಗಿಲ್ಲ. ಒಂದಷ್ಟು ದೂರ ಈಜಿಕೊಂಡು ಬಂದಿದ್ದಾರೆ. ಬ್ಯಾಡ್​ ಲಕ್​ ಏನು ಅಂದ್ರೆ, ಇದ್ದಂತ ಒಂದು ಮೋಟರ್​ ಬೋಟ್​ ಆಫ್​ ಆಗಿತ್ತು. ಸಂಜೆವರೆಗೂ ಅದನ್ನ ಹೊಡಿತಾನೇ ಇದ್ದಾರೆ. ಸ್ಟಾರ್ಟ್​​ ಆಗಿಲ್ಲ. ಅವರು ಬೀಳೋದಕ್ಕೂ ಮೋಟರ್ ಕೂಡ​ ಆಫ್​​ ಆಗಿದೆ. ಈ ಬಗ್ಗೆ ಹೀಗೇ ಒಂದು ಸಲ ವಿನಯ್​ ಗುರೂಜಿ ಹತ್ರ ಕೇಳಿದಾಗ, ದೊಡ್ಡ ಅನಾಹುತ ಆಗೋದು ತಪ್ಪಿತ್ತು ಆ ದಿನ, ಇಲ್ಲಾಂದ್ರೆ ಆ ದಿನ ಏಳು ಜನ ಹೋಗ್ಬೇಕಾಗಿತ್ತು ಅಂದ್ರು. ಇಲ್ಲಾಂದ್ರೂ ಮೂರಕ್ಕೆ ಮುಕ್ತಾಯವಾಗ್ತಿತ್ತು ಅಂದ್ರು. ಆದ್ರೆ ಅದು ನಿಜ.. ಇಬ್ಬರು ಮಾತ್ರ ಅಲ್ಲ. ಬಂದಿರೋ ಪಬ್ಲಿಕ್​​ನಲ್ಲಿ ಒಬ್ರು ಅಲ್ಲಿ ಆ ದಿನ ಸತ್ತೊದ್ರು. ಇದನ್ನೆಲ್ಲಾ ಹೇಗೆ ನಂಬೋದು ಗೊತ್ತಿಲ್ಲ.

ಒಂದು ಅದು ಪಾಚಿ ನೀರು. ಪಾಚಿ ನೀರು ತುಂಬಾ ದಪ್ಪ ಇರುತ್ತೆ. ಇವರಿಬ್ಬರು ಸಿಕ್ಸ್​​ ಪ್ಯಾಕ್​ ಮಾಡಿರೋದ್ರಿಂದ ಇವರಿಗೆ ಉಸಿರಾಟ ಸ್ವಲ್ಪ ಕಡಿಮೆ. ಆದ್ರೂ ಇಬ್ಬರೂ ಒಂದಷ್ಟು ದೂರ ಈಜಿಕೊಂಡು ಬಂದಿದ್ದಾರೆ. ನೀರು ಥಿಕ್​ ಆಗಿ ಇದ್ದಿದ್ರಿಂದ ವೇಗವಾಗಿ ಈಜೋಕೆ ಆಗಿಲ್ಲ. ದಡದಿಂದ ಸೆಟ್​​ ಹುಡುಗ ಒಬ್ಬ ಈಜಿಕೊಂಡೇ ಅವರತ್ತ ಹೋಗಿದ್ದಾನೆ. ದುನಿಯಾ ವಿಜಿ ಅವರನ್ನ ಕರೆದುಕೊಂಡು ಬಂದಿದ್ದಾನೆ. ಇನ್ನಿಬ್ಬರನ್ನ ಎಳೆಯೋ ಟೈಮ್​ನಲ್ಲೇ ಅವರು ಹೋಗಿರೋದು ಅಷ್ಟೆ. ಅದು ಬಿಟ್ರೆ ಬೇರೇನಿಲ್ಲ. ನಾನು ಸಾಯುವವರೆಗೂ ಇದನ್ನ ಮರೆಯೋಕೂ ಆಗಲ್ಲ, ಈ ಕಪ್ಪು ಚುಕ್ಕೆಯನ್ನ ನನ್ನ ಲೈಫ್​ನಿಂದ ಯಾರಿಂದಲೂ ತೆಗೆಯೋಕೂ ಆಗಲ್ಲ. ಇದು ಯಾವಾಗಲೂ ಇದ್ದೇ ಇರುತ್ತೆ’ ಅಂತ ಸ್ಟಂಟ್​​ ಮಾಸ್ಟರ್​ ರವಿವರ್ಮಾ ಬೇಸರ ವ್ಯಕ್ತ ಪಡಿಸಿದ್ದಾರೆ.

The post ‘ಆ ದಿನ ಏಳು ಜನ ಸಾಯೋ ಜಾಗದಲ್ಲಿ ಮೂರು ಜನ ಹೋಗ್ಬಿಟ್ರು​’- ಸ್ಟಂಟ್​ ರವಿವರ್ಮಾ appeared first on News First Kannada.

Source: newsfirstlive.com

Source link