ನುಸ್ರತ್ ಜಹಾನ್.. ಚಿಕ್ಕ ವಯಸ್ಸಿನಲ್ಲೇ ಸ್ಟಾರ್​ಡಮ್​ ಕಂಡ ಈಕೆ, 28 ಹರೆಯದಲ್ಲೇ ದೇಶದ ಲೋಕಸಭೆಯ ಸದಸ್ಯೆ ಕೂಡ ಆದ್ರು.. ಪಾರ್ಲಿಮೆಂಟ್​ನಲ್ಲಿ ಈಕೆಯನ್ನ ಕಂಡ ಅದೆಷ್ಟೋ ಜನ್ರು.. ಛೇ ನಮ್ಮ ಎಂಪಿ ಇವರೇ ಆಗ್ಬಾರ್ದಿತ್ತಾ? ಅಂತ ಅಂದುಕೊಂಡಿದ್ದೂ ಸುಳ್ಳಲ್ಲ. ಆದ್ರೆ.. ಇಂದು ಅವರ ಬಾಳಲ್ಲಿ ದೊಡ್ಡ ಬಿರುಗಾಳಿಯೇ ಎದ್ದಿದೆ..

ನುಸ್ರತ್ ಜಹಾನ್.. ಈ ಹೆಸರು ಕೇಳಿದ್ರೆ ಸಾಕು ಬಂಗಾಳಿಗಳ ಹೃದಯ ಮಾಡಿಫೈ ಮಾಡಿದ ಬುಲೆಟ್ ಬೈಕ್ನಂತೆ ಸದ್ದು ಮಾಡಲು ಆರಂಭಿಸುತ್ತೆ.. ಈಕೆಯ ನಗು ಕಂಡರೆ ಸಾಕು ಎಲ್ಲಿ ಮುತ್ತು ಉದುರುತ್ತವೋ ಅಂತ ಬೊಗಸೆಯೊಡ್ಡೋ ಪಡ್ಡೆ ಹುಡುಗ್ರ ದೊಡ್ಡ ಅಭಿಮಾನಿಪಡೆಯೇ ಈಕೆಗಿದೆ.. ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಸಕ್ಸೆಸ್ ಕಂಡ ನುಸ್ರತ್ ಜಹಾನ್ಗೆ ತೃಣ ಮೂಲ ಕಾಂಗ್ರೆಸ್ ಸುಪ್ರಿಮೋ ಮಮತಾ ಬ್ಯಾನರ್ಜಿ ಸಂಸತ್ತಿಗೆ ಕಳಿಸೋ ನಿರ್ಧಾರ ಮಾಡಿದಾಗ ಇದು ಸಹಜ ತೀರ್ಮಾನ ಅನ್ನೋಹಾಗೆ ಬಂಗಾಳಿಗಳು ಸ್ವೀಕರಿಸಿದ್ರು.. ಅಷ್ಟೇ ಅಲ್ಲ 2019 ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸಯಾಂತನ್ ಬಸು ವಿರುದ್ಧ ಬರೋಬ್ಬರಿ 3 ಲಕ್ಷ 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿ ಸಂಸತ್ತಿಗೆ ಕಳಿಸಿದ್ರು.. ಚಿಕ್ಕವಯಸ್ಸಿನಲ್ಲೇ ದೊಡ್ಡ ಯಶಸ್ಸು ಕಂಡ ನುಸ್ರತ್ ಬಾಳಿನಲ್ಲಿ ಇಂದು ದೊಡ್ಡ ಬಿರುಗಾಳಿಯೇ ಎದ್ದಿದೆ.

ಹೌದು.. ಬೆಂಗಾಳಿ ನಟಿ ನುಸ್ರತ್ ಜಹಾನ್ ಸಿನಿಮಾದಲ್ಲಿ ಎಷ್ಟು ಹೃದಯಗಳನ್ನು ಗೆದ್ದಿದ್ದರೋ.. ಅದಕ್ಕಿಂತ ಹೆಚ್ಚು ಮನುಸ್ಸುಗಳನ್ನು ಅವರು ರಾಜಕೀಯಕ್ಕೆ ಬಂದ ಬಳಿಕವೂ ಕದ್ದವರು. ಅಪಾರ ಫ್ಯಾನ್ ಫಾಲೋವಿಂಗ್, ಜನಪ್ರಿಯತೇ ಹೊಂದಿರೋ ನುಸ್ರತ್ ಜಹಾನ್ ಅವರು.. ನೇಮ್, ಫೇಮ್, ಅಧಿಕಾರ, ಹಣ ಎಲ್ಲ ಹೊಂದಿರೋ ಸಕ್ಸೆಸ್ ಫುಲ್ ಮಹಿಳೆ.. ಇಂಥ ಸಕ್ಸೆಸ್ಫುಲ್ ಮಹಿಳೆ ನುಸ್ರತ್ ವೈಯಕ್ತಿಕ ಬದುಕಿನಲ್ಲಿ ದೊಡ್ಡ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಅಷ್ಟೇ ಅಲ್ಲ.. ಪ್ರೆಗ್ನೆಂಟ್ ಆಗಿದ್ದಾರೆ ಎನ್ನಲಾಗ್ತಿರೋ ನುಸ್ರತ್ ಹೊಟ್ಟೆಯಲ್ಲಿರೋ ಮಗು ನನ್ನದಲ್ಲ ಅಂತ ಅವರ ಪತಿ ನಿಖಿಲ್ ಜೈನ್ ಹೇಳಿದ್ದಾರೆ.

ಸುರಸುಂದರಿ ಸಂಸದೆ ಮೇಲೆ ಇದೆಂಥ ಆರೋಪ
ಆಕೆ ಹೊಟ್ಟೆಯಲ್ಲಿರುವ ಮಗು ನನ್ನದಲ್ಲ ಅಂತಾ ಹೇಳಿದ್ಯಾಕೆ ಪತಿ?

ಹೌದು.. ನಟಿ ನಸ್ರತ್ ಜಹಾನ್ ಹಾಗೂ ನಿಖಿಲ್ ಜೈನ್ ಮದುವೆಯಾಗಿದ್ದರೂ ಕಳೆದ ಆರು ತಿಂಗಳಿಂದ ಜೊತೆಗಿಲ್ಲ. ಹೀಗಿದ್ದಾಗ ಇದು ತಮ್ಮ ಮಗು ಹೇಗಾಗುತ್ತೆ ಅಂತ ನಿಖಿಲ್ ಪ್ರಶ್ನಿಸಿದ್ದಾರೆ. ಇದರ ಜೊತೆಗೆ ಮತ್ತೊಂದು ಹೊಸ ವಿಚಾರ ಇದೀಗ ಬೆಳಕಿಗೆ ಬಂದಿದೆ. ಅದೆಂದರೆ ತಾವೇ ಪ್ರಕಟಣೆಯೊಂದನ್ನ ಪೋಸ್ಟ್ ಮಾಡಿರೋ ನುಸ್ರತ್, ನಾನು ಇಟಲಿಯಲ್ಲಿ ನಿಖಿಲ್ ಮದುವೆಯಾಗಿದ್ದೆ. ಹೀಗಾಗಿ, ಅದು ಭಾರತೀಯ ಕಾನೂನಿನ ಪ್ರಕಾರ ಮದುವೆಯಲ್ಲ. ನಾವು ಇಲ್ಲಿ ರೆಜಿಸ್ಟರ್ ಮಾಡಿಕೊಂಡಿಲ್ಲ. ಹೀಗಾಗಿ ಕಾನೂನಿನ ಪ್ರಕಾರ ನಮ್ಮದು ಲೀವ್ ಇನ್ ರಿಲೇಶನ್ಶಿಪ್ ಮಾತ್ರ ಆಗಲು ಸಾಧ್ಯ ಅಂತ ನುಸ್ರತ್ ಹೇಳಿದ್ದಾರೆ.

ಅಷ್ಟೇ ಅಲ್ಲ ಕೆಲ ವಿಚಾರಗಳನ್ನೂ ನುಸ್ರತ್ ಜಹಾನ್ ಪಟ್ಟಿಮಾಡಿದ್ದಾರೆ. ಜೊತೆಗೆ ತಮಗೂ ನಿಖಿಲ್ಗೂ ಈಗ ಯಾವುದೇ ಸಂಬಂಧ ಇಲ್ಲ ಅಂತ ಅವರ ಹೆಸರು ಹೇಳದೇ ಸೂಕ್ಷ್ಮವಾಗಿ ವಿವರಿಸಿದ್ದಾರೆ. ವಿದೇಶಿ ನೆಲದಲ್ಲಿದ್ದಾಗ.. ಜೊತೆಗೆ ಟರ್ಕಿಶ್ ಮದುವೆ ಕಾನೂನಿನ ಪ್ರಕಾರ ಆದ ಮದುವೆ. ಭಾರತದಲ್ಲಿ ಮದುವೆ ಅಂತಾ ಪರಿಗಣಿತವಾಗಲ್ಲ. ಅಕ್ಕಿಂತ ಹೆಚ್ಚಾಗಿ ಇದು ಅಂತರ್ಧರ್ಮೀಯ ವಿವಾಹ. ಹೀಗಾಗಿ ಸ್ಪೆಷಲ್ ಮ್ಯಾರೇಜ್ ಆ್ಯಕ್ಟ್ ಅಡಿಯಲ್ಲಿ ಇದನ್ನು ನೋಂದಾಯಿಸಿಕೊಳ್ಳಬೇಕಾಗುತ್ತೆ. ಆದ್ರೆ ನಮ್ಮ ವಿಷಯದಲ್ಲಿ ಇದಾಗಿಲ್ಲ. ಹೀಗಾಗಿ ಕಾನೂನಿನ ಪ್ರಕಾರ ಈ ಮದುವೆ ಮದುವೆಯಲ್ಲ.. ಬದಲಿಗೆ ಲೀವ್ ಇನ್ ರಿಲೇಶನ್ಶಿಪ್ ಅಷ್ಟೇ.. ಹೀಗಾಗಿ ಡಿವೋರ್ಸ್ನ ಪ್ರಶ್ನೆಯೇ ಉದ್ಭವಿಸಲ್ಲ. ಇನ್ನು ನಾವಿಬ್ಬರೂ ಬಹಳ ಹಿಂದೆಯೇ ಬೇರೆಯಾಗಿದ್ದೇವೆ. ಆದ್ರೆ ನನ್ನ ವೈಯಕ್ತಿಕ ವಿಚಾರಗಳ ಬಗ್ಗೆ ನಾನು ಮಾತನಾಡಲು ಇಚ್ಛಿಸುವುದಿಲ್ಲ. ಹೀಗಾಗಿ ಈ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಹೀಗಾಗಿ ನನ್ನ ಬೇರೆಯಾದ ಆಧಾರದ ಮೇಲೆ ನನ್ನ ನಡೆಗಳನ್ನು ನನಗೆ ಸಂಬಂಧವಿಲ್ಲದ ಯಾರೂ ಪ್ರಶ್ನಿಸುವಂತಿಲ್ಲ. ಇನ್ನು ಆರೋಪಿತ ಮದುವೆ ಕಾನೂನು ಬಾಹಿರವಾಗಿದ್ದು, ಮುಂದುವರೆಯುವಂಥದ್ದಲ್ಲ. ಹೀಗಾಗಿ ಕಾನೂನಿನ ಕಣ್ಣಿನಲ್ಲಿ ಇದು ಮದುವೆಯೇ ಅಲ್ಲ.

ಹೀಗೆ ನುಸ್ರತ್ ಜಹಾನ್ ಇಂದು ಇದ್ದಕ್ಕಿದ್ದಂತೆಯೇ ಘೋಷಣೆ ಮಾಡಿದ್ದಾದ್ರೂ ಯಾಕೆ? ಈ ವಿಚಾರವನ್ನ ಮೊದಲೇ ಹೇಳಬಹುದಿತ್ತು ಅಲ್ವಾ? ಅನ್ನೋ ಪ್ರಶ್ನೆಗಳೂ ಸಹಜವಾಗಿ ಮೂಡುತ್ತವೆ. ಇದಕ್ಕೂ ಕಾರಣಗಳು ಇಲ್ಲದೇ ಇಲ್ಲ.. ಒಂದು ಕಡೆ ನುಸ್ರತ್ರನ್ನು ಮದುವೆಯಾಗಿದ್ದ ನಿಖಿಲ್, ತಾವು ಶ್ರೀಮಂತರಾಗಿದ್ದು ಅದನ್ನು ನುಸ್ರತ್ ದುರಪಯೋಗ ಪಡಿಸಿಕೊಂಡಿದ್ದಾರೆ. ನನ್ನ ಹಣವನ್ನು ಈಗಲೂ ಖರ್ಚು ಮಾಡುತ್ತಿದ್ದಾರೆ.. ನನ್ನ ಕ್ರೆಡಿಟ್ ಕಾರ್ಡ್ ಕೂಡ ಅವರೇ ಬಳಸುತ್ತಿದ್ದಾರೆ. ನಾನೊಬ್ಬ ಸಾಮಾನ್ಯ ಪ್ರಜೆ.. ನನ್ನ ಬಳಿ ಅಧಿಕಾರ ಇಲ್ಲ ಅಂತಾ ಗಂಭೀರ ಆರೋಪ ಮಾಡಿದ್ದರು ಎನ್ನಲಾಗಿದೆ. ಅಷ್ಟೇ ಅಲ್ಲ.. ನುಸ್ರತ್ ಈಗ ಬಸುರಿ ಎನ್ನಲಾಗಿದ್ದು, ಅದಕ್ಕೂ ನಾನು ಕಾರಣವಲ್ಲ ಅಂತ ನಿಖಿಲ್ ಹೇಳಿದ್ದಾರಂತೆ.. ಹೀಗಾಗಿಯೇ ಇಂದು ಬಹಿರಂಗ ಹೇಳಿಕೆಯನ್ನ ನುಸ್ರತ್ ಬಿಡುಗಡೆ ಮಾಡಿದ್ದಾರೆ. ಜೊತೆಗೆ ಮೇಲ್ಕಾಣಿಸಿದ ಸಂಗತಿಯಲ್ಲದೇ ಮತ್ತಷ್ಟು ವಿಷಯಗಳನ್ನು ಅವರು ಬಹಿರಂಗ ಮಾಡಿದ್ದಾರೆ. ಜೊತೆಗೆ SOME ONE ಅಂತಾ ಹೆಸರು ಹೇಳದೆಯೇ ನಿಖಿಲ್ ಜೈನ್ ಉದ್ದೇಶಿಸಿ ಮಾತನಾಡಿದ್ದಾರೆ ಎಂದೂ ಹೇಳಲಾಗ್ತಿದೆ.

ನಾನು ಬ್ಯುಸಿನೆಸ್ ಅಥವಾ ಯಾವುದೇ ಕಾರಣಕ್ಕಾಗಿ ನಾನು ಎಲ್ಲಿಗೆ ಭೇಟಿ ನೀಡುತ್ತಿದ್ದೇನೆ. ಏನು ಮಾಡುತ್ತಿದ್ದೇನೆ ಅನ್ನೋದು ನನ್ನಿಂದ ಬೇರೆಯಾದ ವ್ಯಕ್ತಿಗೆ ಸಂಬಂಧವಿಲ್ಲ. SOME ONE ಹೇಳಿದಂತೆ ನಾನು ಯಾರ ಹಣವನ್ನೂ ಬಳಸುತ್ತಿಲ್ಲ.. ಬದಲಾಗಿ ನನ್ನ ಖರ್ಚನ್ನು ನಾನೇ ನೋಡಿಕೊಳ್ಳುತ್ತಿದ್ದೇನೆ. ಜೊತೆಗೆ ನನ್ನ ಕುಟುಂಬದ, ನನ್ನ ಸೋದರಿಯ ವಿದ್ಯಾಭ್ಯಾಸದ ಖರ್ಚನ್ನೂ ನಾನೇ ಮಾಡಿಕೊಂಡಿದ್ದೇನೆ. ನನಗೆ ಇನ್ನೊಬ್ಬರ ಕ್ರೆಡಿಟ್ ಕಾರ್ಡ್ ಇಟ್ಟುಕೊಳ್ಳುವ ಅವಶ್ಯಕತೆ ಇಲ್ಲ. ತನ್ನನ್ನು ತಾನು ಶ್ರೀಮಂತ ಮತ್ತು ನಾನು ಅವರನ್ನ ಬಳಸಿದೆ ಅಂತಾ ಹೇಳುವ ವ್ಯಕ್ತಿಯೇ.. ನನ್ನ ಹಣವನ್ನ ಕಾನೂನು ಬಾಹಿರವಾಗಿ ಬಳಸಿಕೊಂಡಿದ್ದಾರೆ. ಈ ಬಗ್ಗೆ ನಾನು ಪೊಲೀಸ್ ಕಂಪ್ಲೇಂಟ್ ಕೂಡ ದಾಖಲಿಸುತ್ತಿದ್ದೇನೆ. ಅಷ್ಟೇ ಅಲ್ಲ ನನ್ನ ಬ್ಯಾಗ್ಗಳು, ಬಟ್ಟೆ ಮತ್ತು ಆಭರಣಗಳೂ ಸಹ ಆ ವ್ಯಕ್ತಿ ಬಳಿಯೇ ಉಳಿದಿವೆ. ಕಾನೂನು ಬಾಹಿರವಾಗಿ ಅವರು ಅದನ್ನು ಇಟ್ಟುಕೊಂಡಿದ್ದಾರೆ.
ನುಸ್ರತ್ ಜಹಾನ್, ನಟಿ ಹಾಗೂ ಸಂಸದೆ

ಹೀಗೆ ಗಂಭೀರವಾದ ಸಾಲು ಸಾಲು ಆರೋಪಗಳನ್ನು ನುಸ್ರತ್ ಜಹಾನ್ ಮಾಡಿದ್ದಾರೆ. ಹಾಗೆ ನೋಡಿದ್ರೆ, ನುಸ್ರತ್ ಜಹಾನ್ ತುಂಬಾ ಇಷ್ಟಪಟ್ಟೇ ನಿಖಿಲ್ ಜೈನ್ರನ್ನು ಮದುವೆಯಾಗಿದ್ರು. ನುಸ್ರತ್ ಹಾಗೂ ನಿಖಿಲ್ 2018ರಲ್ಲಿ ಪರಿಚಿತರಾಗಿದ್ರು.. ಬಳಿಕ ಇಬ್ಬರ ನಡುವೆ ಪ್ರೇಮಾಂಕುರವಾಗಿ 2019ರಲ್ಲಿ ಟರ್ಕಿಯಲ್ಲಿ ಹಸೆಮಣೆ ಏರಿದ್ದರು. ಬಳಿಕ ನುಸ್ರತ್ ಜಹಾನ್, ಸಿಂಧೂರ ಧರಿಸಿ ಧಾರ್ಮಿಕ ಪೂಜೆಗಳಲ್ಲಿ ಕೂಡ ಪಾಲ್ಗೊಂಡಿದ್ದರು.

ಇದು ಹಲವು ಕಟ್ಟಾ ಸಂಪ್ರದಾಯವಾದಿಗಳ ಕಣ್ಣನ್ನು ಕೆಂಪು ಮಾಡಿತ್ತು. ಹೀಗೆ ಅತ್ಯಂತ ಅನ್ಯೋನ್ಯವಾಗಿದ್ದ ಈ ಜೋಡಿ ಹೀಗೆ ಬೇರೆ ಬೇರೆ ಯಾಗಿದ್ದು ಯಾಕೆ? ಒಬ್ಬರ ಮೇಲೆ ಒಬ್ಬರು ಇಷ್ಟು ಗಂಭೀರ ಆರೋಪಗಳನ್ನು ಮಾಡಿಕೊಳ್ತಿರೋದಾದ್ರೂ ಯಾಕೆ? ಅನ್ನೋ ಪ್ರಶ್ನೆಗೆ ಸ್ಪಷ್ಟ ಉತ್ತರವಂತೂ ಸಿಕ್ಕಿಲ್ಲ. ಆದ್ರೆ ಪತಿ, ಪತ್ನಿ ನಡುವೆ ಮತ್ತೊಬ್ಬ ವ್ಯಕ್ತಿ ಪ್ರವೇಶವಾಗಿರೋದು ಮಾತ್ರ ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಚರ್ಚೆಯಾಗ್ತಿದೆ.

ನುಸ್ರತ್ ಬಾಳಲ್ಲಿ ಮತ್ತೊಬ್ಬನ ಪ್ರವೇಶ?
ಟಿಎಂಸಿ ನಾಯಕಿ ಜೊತೆಯಾದನಾ ಬಿಜೆಪಿ ನಾಯಕ?

ಹೌದು.. ಸದ್ಯಕ್ಕೆ ಈ ಪ್ರಶ್ನೆ ಪಶ್ಚಿಮ ಬಂಗಾಳದಲ್ಲಿ ಜೋರಾಗಿಯೇ ಕೇಳಿ ಬರ್ತಿದೆ. ನುಸ್ರತ್ ಬಾಳಲ್ಲಿ ಮತ್ತೊಬ್ಬನ ಪ್ರವೇಶ? ಟಿಎಂಸಿ ನಾಯಕಿ ಜೊತೆಯಾದನಾ ಬಿಜೆಪಿ ನಾಯಕ? ಅಂತ ಬಂಗಾಳದ ಗಲ್ಲಿ ಗಲ್ಲಿಯಲ್ಲಿ ಬಿಸಿ ಬಿಸಿ ಸುದ್ದಿ ಹರಿದಾಡುತ್ತಿದೆ. 2020ರಲ್ಲಿ ನುಸ್ರತ್ ಜಹಾನ್ ವ್ಯಕ್ತಿಯೊಬ್ಬನ ಜೊತೆ ಚಿತ್ರವೊಂದರಲ್ಲಿ ನಟಿಸಿದ್ರು. ಆ ವ್ಯಕ್ತಿ ಬೇರೆ ಯಾರೂ ಅಲ್ಲ ಆತನ ಸದ್ಯ ಬಿಜೆಪಿ ನಾಯಕನಾಗಿರೋ.. ಬೆಂಗಾಲಿ ನಟ ಯಶ್ ದಾಸ್ ಗುಪ್ತಾ.. 2020ರಲ್ಲಿ ಒಟ್ಟಿಗೇ ಚಿತ್ರವೊಂದರಲ್ಲಿ ನುಸ್ರತ್ ಹಾಗೂ ಯಶ್ ದಾಸ್ ಕೆಲಸ ಮಾಡುತ್ತಿದ್ದಾಗ.. ಅವರಿಬ್ಬರು ಹತ್ತಿರವಾಗಿದ್ರೂ ಅಂತ ಸಾಕಷ್ಟು ಗಾಸಿಪ್ ಸುದ್ದಿಗಳು ಹರಿದಾಡಿದ್ದವು. ಅದೂ ಎಷ್ಟರ ಮಟ್ಟಿಗೆ ಅಂದ್ರೆ ನುಸ್ರತ್ ಹಾಗೂ ಯಶ್ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದಾರೆ.. ಮುಂಬರೋ ದಿನಗಳಲ್ಲಿ ಒಟ್ಟಿಗೇ ಇರಲಿದ್ದಾರೆ ಅಂತಲೂ ಅಲ್ಲಿನ ಗಾಸಿಪ್ ಕಾಲಮ್ಗಳಲ್ಲಿ ಕಿಕ್ ಏರಿಸುವಂಥ ಸುದ್ದಿಗಳು ಪ್ರಕಟವಾಗಿದ್ದವು. ಹೀಗಾಗಿ, ಸದ್ಯದ ಪರಿಸ್ಥಿತಿಯಲ್ಲಿ ಇದೇ ನಿಜನಾ? ಇದೇ ಕಾರಣದಿಂದಾಗಿ ನುಸ್ರತ್ ಹಾಗೂ ನಿಖಿಲ್ ದೂರಾದ್ರಾ? ಅನ್ನೋ ಪ್ರಶ್ನೆ ಜೀವಂತವಾಗಿ ಬಿಟ್ಟಿದೆ.

ಒಟ್ಟಿನಲ್ಲಿ ಸಂಸದೆ ಕೂಡ ಆಗಿರೋ ನುಸ್ರತ್ ಜಹಾನ್ ಅವರ ಪ್ರತಿ ಹೆಜ್ಜೆಯೂ ಸಾಕಷ್ಟೂ ಚರ್ಚೆಯಂತೂ ಆಗುತ್ತೆ. ನಿಜಕ್ಕೂ ಮೂರನೇ ವ್ಯಕ್ತಿಯಿಂದ ನುಸ್ರತ್ ಹಾಗೂ ನಿಖಿಲ್ ಬೇರೆ ಯಾಗ್ತಿದ್ದಾರಾ? ಅಥವಾ ಇದು ತಾತ್ಕಾಲಿಕ ವೈಮನಸ್ಸಾ? ಇಲ್ಲವೇ ಬೇರೆ ಏನಾದ್ರೂ ಕಾರಣದಿಂದ ಇಬ್ಬರೂ ಬೇರೆಯಾಗಿದ್ದಾರಾ? ಅನ್ನೋ ಪ್ರಶ್ನೆಗಳಿಗೆ ಉತ್ತರ ಸಿಗುತ್ತಾ? ಅನ್ನೋದು ಸದ್ಯದ ಪ್ರಶ್ನೆಯಾಗಿದೆ.

The post ‘ಆ ಮಗು ನನ್ನದಲ್ಲ’ ಅಂದ ಪತಿ.. ಸುಂದರಿಯ ಬಾಳಲ್ಲಿ ಬಿರುಗಾಳಿ ಶುರುವಾಗಿದ್ದೆಲ್ಲಿ..? appeared first on News First Kannada.

Source: newsfirstlive.com

Source link