ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಇಹಲೋಕ ತ್ಯಜಿಸಿದ್ದರು ಅವರು ಅಭಿಮಾನಿಗಳು ಹಾಗೂ ತಮ್ಮ ಸ್ನೇಹಿತರ ಮನಸ್ಸಿನಲ್ಲಿ ಅಜರಾಮರರಾಗಿ ಉಳಿದಿದ್ದಾರೆ. ವಿಜಯ್ ಬಗ್ಗೆ ಅವರ ಯಾರೇ ಸ್ನೇಹಿತರನ್ನ ಕೇಳಿದ್ರೂ ಒಂದೊಂದು ಸ್ವಾರಸ್ಯಕರ ಕಥೆ ಹೇಳುತ್ತಾ ವಿಜಯ್​ಗೆ ಎಂಥ ಒಳ್ಳೆ ಮನಸ್ಸಿತ್ತು ಅನ್ನೋದನ್ನ ನೆನಪಿಸಿಕೊಳ್ತಾರೆ. ನಟ ನೀನಾಸಂ ಸತೀಶ್​ ನ್ಯೂಸ್​​ಫಸ್ಟ್​ ಸಂದರ್ಶನದಲ್ಲಿ ತಮ್ಮ ಆತ್ಮೀಯ ಸ್ನೇಹಿತ ವಿಜಯ್​ ಬಗ್ಗೆ ಮಾತನಾಡಿದ್ದು, ಹಲವು ವಿಚಾರಗಳನ್ನ ಹಂಚಿಕೊಂಡ್ರು.

ನಾವೆಲ್ಲಾ ಒಮ್ಮೆ ಆಟವಾಡುವಾಗ ವಿಜಯ್​ಗೆ ಇಷ್ಟವಾಗದೇ ಅರ್ಧಕ್ಕೆ ಎದ್ದು ಹೀಗಿದ್ದ. ಆಮೇಲೆ ಕರೆ ಮಾಡಿ ಬೇಜಾರಾಯಿತಾ ಅಂತ ವಿಚಾರಿಸಿದ್ದ.  ಒಂದು ಸಣ್ಣ ವಿಚಾರವಾದ್ರೂ ಯಾರಿಗಾದ್ರೂ ನನ್ನಿಂದ ಬೇಜಾರಾಯಿತಾ ಅಂತ ಯೋಚ್ನೆ ಮಾಡೋ ಕ್ಯಾರೆಕ್ಟರ್ ಅದು. ಅವನಿಗೆ ಆಗಿರೋ ಎಷ್ಟೋ ನೋವುಗಳನ್ನ ಪ್ರತಿಭಟಿಸದೇ ಒಳಗೆ ಇಟ್ಟುಕೊಂಡು ಇಲ್ಲಿವರೆಗೂ ಬಂದವನು. ಅವನ ಬಗ್ಗೆ ಮಾತಾಡಲು ಗಂಟೆಗಳಲ್ಲ, ದಿನಗಳೂ ಸಾಲಲ್ಲ ಅಂತಂದ್ರು ಸತೀಶ್​.

ವಿಜಯ್ ಅವರ ಕೊನೇ ದಿನಗಳನ್ನ ಸ್ಮರಿಸಿದ ಸತೀಶ್​​, ಆಗ ಎಕ್ಸ್​​​ಟ್ರೀಮ್ ಖುಷಿ ಇತ್ತು ಅಂದ್ರು. ನನ್ನ ಆಫೀಸ್​ಗೆ ಬಂದ್ರೆ ಒಬ್ಬನೇ ಇರ್ತಿದ್ದ ಅಂದ್ರು. ವಿಜಯ್ ತುಂಬಾ ಒಳ್ಳೆಯವನು. ಯಾರಾದ್ರೂ 10 ಜನ ನನ್ನ ಮಾತಾಡಿಸಿದ್ರೆ ಒಂದಿಬ್ರಾದ್ರೂ ಇವನು ಸರಿಯಿಲ್ಲ ಅನ್ನಬಹುದು. ಆದ್ರೆ ವಿಜಯ್​ಗೆ 10 ಜನ ಸಿಕ್ಕರೆ ಹತ್ತೂ ಜನ ಅವನ ಬಗ್ಗೆ ಒಳ್ಳೆ ಮಾತಾಡ್ತಿದ್ರು.

ಮಿರಾಕಲ್​​ಗೋಸ್ಕರ ಕಾಯುತ್ತಿದ್ವಿ
ಅವತ್ತು ಆಸ್ಪತ್ರೆಗೆ ಹೋದಾಗ ಅವನು ಇನ್ನೂ ಉಸಿರಾಡ್ತಿದ್ದ. ಆದ್ರೆ ಉಳಿಯಲ್ಲ ಅಂತ ಗೊತ್ತಿತ್ತು. ಉಳಿಯುವ ಚಾನ್ಸ್ 1 ಪರ್ಸೆಂಟ್​ ಇತ್ತು. ಮೆದುಳು ಒಂದು ಇಂಚು ಶಿಫ್ಟ್​ ಆಗಿತ್ತು. ಅದನ್ನ ಕೂರಿಸಿದ್ದರು. ನನ್ನ ಅಣ್ಣನಿಗೂ ಒಮ್ಮೆ ಅದೇ ರೀತಿ ಆಗಿತ್ತು. ಆಗ ಆಪರೇಷನ್ ಸಕ್ಸಸ್​ ಆದ್ರು ಮುಂದೆ ನಮ್ಮ ಕೈಯಲ್ಲಿ ಏನೂ ಇಲ್ಲ ಅಂತ ವೈದ್ಯರು ಹೇಳಿದ್ದರು. ವಿಜಿ ವಿಚಾರದಲ್ಲಿ ಆಗಿದ್ದು ನಮ್ಮ ಅಣ್ಣನಿಗಿಂತ ಇಪತ್ತು ಪರ್ಸೆಂಟ್​ ಜಾಸ್ತಿ ಇತ್ತು. ವೈದ್ಯರ ಜೊತೆ ಮಾತಾಡ್ತಿದ್ದಂತೇ ತುಂಬಾ ಡೌಟ್​ ಅಂತ ನನಗೆ ಗೊತ್ತಾಗಿತ್ತು. ಆದ್ರೆ ಪವಾಡಕ್ಕೋಸ್ಕರ ಕಾಯುತ್ತಿದ್ವಿ. ವಿಜಯ್ ಡೇಂಜರ್ ಝೋನ್​ನಲ್ಲಿ ಇದ್ದಾನೆ ಅಂತ ಆಚೆ ಬಂದು ಹೇಳೋಕೆ ನನಗೆ ಮನಸ್ಸಾಗಿರಲಿಲ್ಲ. ಆತ ಉಸಿರಾಡ್ತಿದ್ದ. ಕಿಡ್ನಿ, ಎದೆಭಾಗ, ಹೃದಯ ಎಲ್ಲಾ ಚೆನ್ನಾಗಿತ್ತು. ವಿಜಿ ವಿಜಿ ಎದ್ದೇಳು ವಿಜಿ ಅಂತ ನಾನು ಮಾತಾಡಿಸಿದೆ. ನಮಗೆ ಗೊತ್ತಿದ್ರೂ ಆ ನೋವು ತಡೆದುಕೊಂಡು ಇರಬೇಕಿತ್ತು. ಮಿರಾಕಲ್ ಆಗಲಿ ಅಂತಲೇ ಕಾಯುತ್ತಿದ್ವಿ ಅಂದ್ರು.

The post ಆ ಮೂವರು ನನ್ನ ಮಕ್ಕಳೇ, ನನಗೆ ಮದುವೆನೇ ಬೇಡ ಅಂತಿದ್ದ ವಿಜಯ್ -ಸತೀಶ್ ಭಾವುಕ ನುಡಿ appeared first on News First Kannada.

Source: newsfirstlive.com

Source link