ಮೈಸೂರು: 25 ಕೋಟಿ ರೂಪಾಯಿ ಸಾಲಕ್ಕೆ ಶ್ಯೂರಿಟಿ ನೀಡುವ ವಂಚನೆ ಪ್ರಕರಣದ ಬಗ್ಗೆ ನಟ ದರ್ಶನ್ ಅವರು ಸ್ಪಷ್ಟನೆಯನ್ನು ನೀಡಿದ್ದು, ಆದರೆ ಅವರ ಸುದ್ದಿಗೋಷ್ಠಿಯ ಬಳಿಕವೂ ಹಲವು ಪ್ರಶ್ನೆಗಳಿಗೆ ಉತ್ತರ ಲಭಿಸಬೇಕಿದೆ. ಈ ನಡುವೆ ಮಹಿಳೆ ದರ್ಶನ್​ ಅವರನ್ನು ಭೇಟಿಯಗಿ ಸತ್ಯ ಒಪ್ಪಿಕೊಳ್ಳಲು ಮುಂದಾಗಿದ್ದರು ಎಂಬ ಅಂಶ ಸದ್ಯ ಕುತೂಹಲ ಮೂಡಿಸಿದೆ.

ಜೂನ್​​ 18 ರಂದು ಕರೆ ಮಾಡಿದ್ದ ಅರುಣಾ ಕುಮಾರಿ ಕರೆ ಮಾಡಿ ಸತ್ಯ ಹೇಳಬೇಕು ಎಂದು ಬಂದರು. ಅವತ್ತು ಮಗನೊಂದಿಗೆ ಮನೆಗೆ ಬಂದಿದ್ದ ಮಹಿಳೆಯನ್ನು ಸ್ವತಃ ದರ್ಶನ್​ ಅವರೇ ಮಾತನಾಡಿ ಸತ್ಯ ಹೇಳುವಂತೆ ಕೇಳಿದ್ದರು. ಆದರೆ ಮನೆಯಲ್ಲಿ ನಾಲ್ವರು ಗಂಡಸರೇ ಇದ್ದ ಕಾರಣ ಆಕೆ ನಮ್ಮ ಮೇಲೆ ಬೇರೆ ಏನಾದ್ರು ಆರೋಪ ಮಾಡಬಹುದು ಎಂದು ಕೇವಲ 15 ನಿಮಿಷದಲ್ಲಿ ಮಾತನಾಡಿ ಕಳುಹಿಸಿದ್ದಾಗಿ ಹೇಳಿದ್ದಾರೆ.

18ರ ಬೆಳಗ್ಗೆ ಮನೆಗೆ ಬಂದ ಮಹಿಳೆ, ಮೊದಲು ಮಲ್ಲೇಶ್​ ಎಂಬವವರು ಹೇಳಿದ್ದರು ಅಂತಾ ತಿಳಿಸಿದ್ದರು. ಆಗ ಆತನಿಗೆ ಕರೆ ಮಾಡಲು ಹೇಳಿದರೆ ಬೇರೆ ಯಾವುದೋ ಮಹಿಳೆಗೆ ಕರೆ ಹೋಗಿತ್ತು. ಆದರೂ ಈಕೆ 6 ವರ್ಷದಿಂದ ಪರಿಚಯ ಎಂದು ಹೇಳಿದ್ದರು. ಆಗ ಸತ್ಯ ಒಪ್ಪಿಕೊಳ್ಳುವಂತೆ ಹೇಳಿ, ಉಮಾಪತಿ ಕೊಟ್ಟ ದೂರಿನ ಪ್ರತಿಯನ್ನು ತೋರಿದ ವೇಳೆ ಆಕೆ ಶಾಕ್ ಆದ್ರು. ಆಗ ಇದಿಷ್ಟು ಮಾಡಿದ್ದು ಉಮಾಪತಿ ಅವರೇ ಎಂದು ಹೇಳಿದ್ದರು. ಆಗ ಮಹಿಳೆಯನ್ನು ಕಳುಹಿಸಿ ಉಮಾಪತಿ ಅವರಿಗೆ ಕರೆ ಮಾಡಿ ಇದನ್ನು ಕ್ಲೀಯರ್ ಮಾಡಿಕೊಳ್ಳಲು ಹೇಳಿದೆ.

ನಿನ್ನೆ ಕೂಡ ನಾನು ಇದನ್ನೂ ಉಮಾಪತಿ ಅವರಿಗೆ ಹೇಳಿದ್ದೇನೆ. ನಾನು ಇದರಲ್ಲಿ ಹರ್ಷ ಆದರೂ, ಉಮಾಪತಿ ಅವರೂ ಅಥವಾ ಬೇರೆ ಯಾರೇ ಆದರೂ ಅವರನ್ನು ಬಿಡೋದಿಲ್ಲ. ಸದ್ಯ ಮಹಿಳೆ ನಿನ್ನೆ ಉಮಾಪತಿ ಅವರೇ ಮಾಡಿದ್ದರೆ ಎಂದು ಹೇಳಿದ್ದಾರೆ. ಈಗ ಉಮಾಪತಿ ಅವರು ಮಹಿಳೆಯೊಂದಿಗೆ ಮಾಡಿದ್ದ ವಾಟ್ಸಾಪ್ ಮೆಸೇಜ್​ ಕೂಡ ಮಾಡಿದ್ದಾರೆ. ಈ ಬಗ್ಗೆ ಕೇಳಿದರೇ ಉಮಾಪತಿ ಅವರು ಫೇಸ್​ಬುಕ್​ ಫ್ರೆಂಡ್​ ಆಗಿದ್ರು, ಕಾಲ್ ಮಾಡಿದ ಬಳಿಕವಷ್ಟೇ ಮೆಸೇಜ್ ಮಾಡಿದ್ದೆ ಎಂದು ಹೇಳಿದ್ದಾರೆ ಎಂದರು.

ಆದರೆ ನಿನ್ನೆ ಉಮಾಪತಿ ಅವರು ಹೆದರಿಸಿದ್ದರು ಅದಕ್ಕೆ ಮಾಡಿದ್ದೆ ಎಂದು ನಿನ್ನೆ ಅರುಣಾ ಕುಮಾರಿ ಆರೋಪಿಸಿದ್ದಾರೆ. ಈ ಎಲ್ಲದರ ನಡುವೆಯೂ ಕೊರೊನಾ ಸಂದರ್ಭದಲ್ಲಿ ರಾಬರ್ಟ್​ ಸಿನಿಮಾ ಮಾತ್ರ ದುಡ್ಡು ಮಾಡಿತ್ತು. ಈಗ ಅವರಿಗೆ ಎರಡು ಸಿನಿಮಾಗೆ ಡೇಟ್​ ಕೂಡ ಕೊಟ್ಟಿದ್ದೀನಿ. ಇಂತಹ ಸಂದರ್ಭದಲ್ಲಿ ಅವರ ಬಗ್ಗೆ ಅನುಮಾನ ಪಡೆದೋದು ಏಕೆ..? ನಾನು ಇಲ್ಲಿ ಇಬ್ಬರನ್ನ ಮಿರರ್​ ಥರ ಇಟ್ಟಿದ್ದೀನಿ. ಈ ಚೆಂಡು ಉಮಾಪತಿ ಅವರ ಕೋರ್ಟ್​​ನಲ್ಲಿದೆ. ಅವರು ಎಲ್ಲಿಗೆ ಒದೆಯುತ್ತಾರೆ ಅಂತಾ ನೋಡಬೇಕು ಎಂದು ತಿಳಿಸಿದರು.

The post ‘ಆ ಲೇಡಿ ಸತ್ಯ ಹೇಳ್ಬೇಕು ನಿಮ್ಮ ಹತ್ರ ಅಂದ್ಲು’ -ದರ್ಶನ್​ ಮನೆಗೆ ಅರುಣಾ ಕುಮಾರಿ ಬಂದಾಗ ಆಗಿದ್ದೇನು? appeared first on News First Kannada.

Source: newsfirstlive.com

Source link