ಬೆಳಗಾವಿ: ಬೆಳಗಾವಿಯ ಆ ಒಬ್ಬ ನಾಯಕನಿಂದ ಕಾಂಗ್ರೆಸ್ಗೆ ನಿರಂತರ ಸೋಲಾಗಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಸತೀಶ್ ಜಾರಕಿಹೊಳಿ ಹೇಳಿಕೆ ಬೆನ್ನಲ್ಲೇ ಕೆಪಿಸಿಸಿ ಕಾರ್ಯಾಧ್ಯಕ್ಷರ ವಿರುದ್ಧ ಸತೀಶ್ ವಿರೋಧಿ ಬಣ ಆಕ್ಟೀವ್ ಆಗಿದೆ ಎನ್ನಲಾಗಿದೆ.
ಸತೀಶ್ ಜಾರಕಿಹೊಳಿ ಅವರ ಈ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಬೆಳಗಾವಿ ಪರಾಜಿತ ಮಾಜಿ ಶಾಸಕರ ಬೆಂಬಲಿಗರಿಂದ ಮಹಾಂತೇಶ ನಗರದ ಖಾಸಗಿ ಹೊಟೇಲ್ ನಲ್ಲಿ ಸಭೆ ನಡೆಸಿ ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ. ಸಭೆಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಬೆಂಬಲಿಗರು ಭಾಗಿಯಾಗಿದ್ದು ಈ ಕುರಿತು ಹೈಕಮಾಂಡ್ ಗೆ ದೂರು ನೀಡಲು ತೀರ್ಮಾನ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಸಭೆಯಲ್ಲಿ ಚರ್ಚೆಯಾಗಿವೆ ಎನ್ನಲಾದ ವಿಷಯಗಳು
- 2008ರಲ್ಲಿ ಸತೀಶ್ ಜಾರಕಿಹೊಳಿ ಜೆಡಿಎಸ್ ನಿಂದ ಕಾಂಗ್ರೆಸ್ ಬಂದ ನಂತರ ಕಾಂಗ್ರೆಸ್ ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ.
- ಜಿಲ್ಲೆಯ ಲಿಂಗಾಯತ ಹಾಗೂ ಮುಸ್ಲಿಂ ಸಮುದಾಯದ ನಾಯಕರನ್ನ ಉದ್ದೇಶಪೂರ್ವಕವಾಗಿ ಸೋಲಿಸಿದ್ದಾರೆ.
- ತಮ್ಮ ಬೆಂಬಲಿಗರಿಗೆ ಕಾಂಗ್ರೆಸ್ ನಲ್ಲಿ ಅವಕಾಶ ನೀಡಿ ಪ್ರಮಾಣಿಕ ಕಾರ್ಯಕರ್ತರನ್ನ ಹೊರಗಿಟ್ಟಿದ್ದಾರೆ.
- 2023ರ ಚುನಾವಣೆಯಲ್ಲಿ ಸತೀಶ್ ಜಾರಕಿಹೊಳಿಗೆ ನೀಡಿದರೆ ಕಾಂಗ್ರೆಸ್ ಇನ್ನಷ್ಟು ಹೀನಾಯ ಸ್ಥಿತಿ ತಲುಪಲಿದೆ ಈ ಕುರಿತು ಸಿದ್ಧರಾಮಯ್ಯ, ಡಿ.ಕೆ ಶಿವಕುಮಾರ್ ಹಾಗೂ ಸೋನಿಯಾ ಗಾಂಧಿಗೆ ಈ ಕುರಿತು ದೂರು ನೀಡಲು ನಿರ್ಧಾರ.