ಸುದೀರ್ಘ ನಾಲ್ಕು ತಿಂಗಳ ಇಂಗ್ಲೆಂಡ್ ಪ್ರವಾಸಕ್ಕೆ ಟೀಮ್ ಇಂಡಿಯಾ, ಸಜ್ಜಾಗಿದೆ. ಇಂದು ಇಂಗ್ಲೆಂಡ್ ಫ್ಲೈಟ್ ಹತ್ತಲಿರುವ 20 ಸದಸ್ಯರ ಟೀಮ್ ಇಂಡಿಯಾ, ಜೂನ್ 18ರಿಂದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ನ ಫೈನಲ್​​ ಫೈಟ್​ನಲ್ಲಿ, ಕಿವೀಸ್​​​​​ ತಂಡವನ್ನ ಎದುರಿಸಲಿದೆ. ಬಳಿಕ ಅಗಸ್ಟ್​ 4ರಿಂದ ಆತಿಥೇಯ ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಸರಣಿಗೆ ಆಣಿಯಾಗಲಿದೆ. ಟೀಮ್ ಇಂಡಿಯಾಕ್ಕೆ ಪ್ರತಿಷ್ಠೆಯಾಗಿರುವ ಈ ಸರಣಿ, ಅಷ್ಟೇ ಚಾಲೆಂಜ್​ ಕೂಡ ಆಗಿದೆ. ಅಷ್ಟೇ ಅಲ್ಲ..! ಯುವ ಆಟಗಾರರಿಗೂ ಈ ಸರಣಿ ಮಹತ್ವದ ಸರಣಿಯೇ ಆಗಿದೆ. ಆದ್ರಲ್ಲೂ ಪ್ರಮುಖವಾಗಿ ಐವರು ಆಟಗಾರರಿಗೆ ಅಗ್ನಿಪರೀಕ್ಷೆಯೇ ಆಗಿದೆ..

ಗಿಲ್, ಮಯಾಂಕ್ ಭವಿಷ್ಯ ಇಂಗ್ಲೆಂಡ್ ಸರಣಿ ಮೇಲೆ..!
ಸದ್ಯ ಟೆಸ್ಟ್​ ಆರಂಭಿಕನಾಗಿರುವ ಶುಭ್​​ಮನ್​ ಗಿಲ್, ಬೆಂಚ್ ಕಾಯ್ತಿರುವ ಮಯಾಂಕ್ ಅಗರ್​ವಾಲ್ ಭವಿಷ್ಯ, ಇಂಗ್ಲೆಂಡ್ ಪ್ರವಾಸದ ಮೇಲೆಯೇ ನಿಂತಿದೆ.. ಹೌದು..! ಆಸಿಸ್​ ಸರಣಿಯಲ್ಲಿ ಆರಂಭಿಕನಾಗಿ ಡೆಬ್ಯು ಮಾಡಿದ್ದ ಶುಭ್​ಮನ್, ಅತ್ಯುತ್ತಮ ಪ್ರದರ್ಶನವನ್ನೇ ನೀಡಿದ್ರು. ಆದ್ರೆ ತವರಿನಲ್ಲಿ ನಡೆದ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಭಾರೀ ವೈಫಲ್ಯವನ್ನೇ ಅನುಭವಿಸಿದ್ದರು.. ಹಾಗಾಗಿ ಮಾಯಾಂಕ್ ಅಗರ್ವಾಲ್ ಸ್ಥಾನದಲ್ಲಿ ಇನ್ನಿಂಗ್ಸ್​ ಆರಂಭಿಸ್ತಿರೋ ಗಿಲ್, ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲೇಬೇಕೆಂದರೆ ಸವಾಲಿನ ಪಿಚ್​​​ನಲ್ಲಿ ಸಾಲಿಡ್ ಓಪನಿಂಗ್ ನೀಡಲೇಬೇಕಿದೆ. ಅಕಸ್ಮಾತ್​ ವೈಫಲ್ಯ ಮುಂದುವರಿದರೆ, ಸಂಕಷ್ಟಕ್ಕೆ ಸಿಲುಕೋದು ಪಕ್ಕ..!!! ಇದರಿಂದಾಗಿ ಜವಾಬ್ದಾರಿಯುತ ಪ್ರದರ್ಶನ, ಶುಭ್​ಮನ್​​ ಗಿಲ್ ನೀಡಬೇಕಿದೆ.

ಒಂದು ಕಡೆ ಶುಭ್​​ಮನ್​​ ಗಿಲ್​​ ವೈಫಲ್ಯ, ಮಯಾಂಕ್​ ಅಗರ್ವಾಲ್​​ಗೆ ದಾರಿ ಮಾಡಿಕೊಡುತ್ತೆ ನಿಜ..! ಆದ್ರೆ ಮಯಾಂಕ್ ಮುಂದುವರಿಕೆ ನಿರ್ಧಾರ, ಇಂಗ್ಲೆಂಡ್​ನ ಅಗ್ರಗಣ್ಯ ಬೌಲರ್​ಗಳ ದಾಳಿಯನ್ನ ಮೆಟ್ಟಿ ನಿಲ್ಲುವ ಮೇಲೆಯೇ ನಿಂತಿದೆ. ಹಾಗಾಗಿ ಅವಕಾಶ ಸಿಕ್ಕರೆ, ಮಯಾಂಕ್ ಆಸ್ಟ್ರೇಲಿಯಾ ಸರಣಿಯಲ್ಲಿ ಮಾಡಿಕೊಂಡ ಯಟವಟ್ಟು, ರಿಪೀಟ್ ಆಗದಂತೆ ನೋಡಿಕೊಳ್ಳಬೇಕಿದೆ. ಅಷ್ಟೇ ಅಲ್ಲ..! ಮತ್ತೊಂದೆಡೆ ಗಿಲ್ ಅಬ್ಬರಿಸಿದ್ರೂ, ಮಯಾಂಕ್​ ಮತ್ತಷ್ಟು ಅಂತತ್ರಕ್ಕೆ ಸಿಲುಕೋದು ಗ್ಯಾರಂಟಿ…!

ಮ್ಯಾಚ್​ ಫಿನಿಷರ್ ನಂಬಿಕೆ ಉಳಿಸಿಕೊಳ್ಳಬೇಕು ಪಂತ್..!
ಯೆಸ್​..! ಆಸ್ಟ್ರೇಲಿಯಾ, ಇಂಗ್ಲೆಂಡ್ ಸರಣಿಯಲ್ಲಿ ಮೇನ್​ ರೋಲ್ ಪ್ಲೇ ಮಾಡಿದ್ದ ರಿಷಭ್ ಪಂತ್​, ಮ್ಯಾಚ್ ವಿನ್ನರ್ ಅಂತ ಈಗಾಗಲೇ ನಿರೂಪಿಸಿದ್ದಾಗಿದೆ. ಆದ್ರೆ ಇಂಗ್ಲೆಂಡ್​ನ ಪ್ರವಾಸದಲ್ಲೂ ಜವಾಬ್ದಾರಿಯುತ ಆಟದ ಮೂಲಕ, ತಂಡಕ್ಕೆ ಆಧಾರವಾಗಬೇಕು.. ಅಷ್ಟೇ ಅಲ್ಲ..! ಅಗ್ರ ಹಾಗೂ ಮಧ್ಯಮ ಕ್ರಮಾಂಕ ಕುಸಿದಾಗ, ತಡೆಗೋಡೆಯಾಗಿ ನಿಂತು ತಾನೂ ಅಗ್ರೆಸ್ಸಿವ್ ಆಟಕ್ಕೆ ಮಾತ್ರವಲ್ಲ..! ಟೆಸ್ಟ್​​​​​​​​​​​​​​​​​ನಲ್ಲಿ ಎದುರಾಳಿಯ ತಾಳ್ಮೆ ಪರೀಕ್ಷಿಸಬಲ್ಲೆ ಅನ್ನೋದನ್ನ ಫ್ರೂವ್​ ಮಾಡ್ಬೇಕಿದೆ. ಇದರೊಂದಿಗೆ ಯಾವುದೇ ನೆಲದಲ್ಲಿ ತಾನು ಹೀರೋ ಎಂಬ ನಂಬಿಕೆ ಉಳಿಸಿಕೊಳ್ಳಬೇಕು..!

ಚಾನ್ಸ್​ ಸಿಕ್ಕರೆ ಮತ್ತೊಮ್ಮೆ ಸಿಡಿಯಬೇಕು ಸುಂದರ್..!
ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಸುಂದರ್​ಗೆ, ಇಂಗ್ಲೆಂಡ್ ಪ್ರವಾಸದಲ್ಲಿ ಆಡೋ ಅವಕಾಶ ಸಿಗೋದು ಡೌಟು.. ಆದ್ರೆ ಆಸಿಸ್ ಹಾಗೂ ಇಂಗ್ಲೆಂಡ್ ವಿರುದ್ಧ ಸಿಕ್ಕ ಅವಕಾಶ ಬಳಸಿಕೊಂಡಂತೆ, ಇಂಗ್ಲೆಂಡ್ ಪ್ರವಾಸದಲ್ಲಿ ಅಂಥದ್ದೊಂದು ಚಾನ್ಸ್​ ಸಿಕ್ಕರೆ, ಬೌನ್ಸಿ ಟ್ರ್ಯಾಕ್​​ನಲ್ಲಿ ಬ್ಯಾಟಿಂಗ್​​ನಲ್ಲಿ ಸಿಡಿಯೋದರ ಜೊತೆಗೆ ಬೌಲಿಂಗ್​​ನಲ್ಲಿ ವಿಕೆಟ್​ ಬೇಟೆಯಾಡ್ತಿನಿ ಅನ್ನೋದನ್ನ ಫ್ರೂವ್ ಮಾಡಬೇಕಿದೆ. ಇದನ್ನ ಮಾಡದಿದ್ರೆ, ತಂಡದ ಬೆಂಚ್​ ಕಾಯ್ತಾನೇ, ಪ್ಲೇಯಿಂಗ್ ಇಲೆವೆನ್​ನಿಂದ ದೂರ ಉಳಿಯೋ ಪರಿಸ್ಥಿತಿ ಎದುರಾದರು ಅಚ್ಚರಿ ಇಲ್ಲ..!

ಇಂಗ್ಲೆಂಡ್​​ನಲ್ಲಿ ಸಿರಾಜ್ ಆಗಬೇಕು ವಿಕೆಟ್ ಟೇಕರ್..!
ಯೆಸ್​..! ಆಸ್ಟ್ರೇಲಿಯಾ ಪ್ರವಾಸದಲ್ಲಿ ಅನಾನುಭವಿಯಾಗಿ ಕಣಕ್ಕಿಳಿದ್ದ ಸಿರಾಜ್, ಐತಿಹಾಸಿಕ ಬಾರ್ಡರ್​-ಗವಾಸ್ಕರ್ ಟೆಸ್ಟ್​ ಸರಣಿ ಗೆಲುವಿನಲ್ಲಿ, ಮಹತ್ವದ ಪಾತ್ರವನ್ನೇ ನಿಭಾಯಿಸಿದ್ದರು. ಆದ್ರೀಗ ಅನುಭವಿಗಳ ಉಪಸ್ಥಿತಿಯಲ್ಲಿ ಚಾನ್ಸ್​ ಸಿಗೋ ಸಾಧ್ಯತೆ ಕಡಿಮೆಯೇ ಆಗಿದ್ರೂ, ಬೆಂಚ್​​ಗೆ ಮಾತ್ರ ಸೀಮಿತವಾಗಲ್ಲ ಅನ್ನೋದು ಕೂಡ ಕನ್ಫರ್ಮ್,. ಆದ್ರೆ ಪೇಸ್, ಬೌನ್ಸ್, ಸ್ವಿಂಗ್​​​, ಲೈನ್ ಆ್ಯಂಡ್ ಲೆನ್ತ್​​ನಲ್ಲಿ ಬೌಲಿಂಗ್​ ಮಾಡೋ ಸಿರಾಜ್​, ಇಂಗ್ಲೆಂಡ್ ಕಂಡೀಷನ್​​ಗೆ ಹೇಳಿ ಮಾಡಿಸಿರೋ ಬೌಲರ್, ಹಾಗಾಗಿ ಇಲ್ಲಿ ಸಿರಾಜ್ ಕಮಾಲ್ ಮಾಡಿದ್ದೇ ಆದರೆ, ಟೀಮ್ ಇಂಡಿಯಾ ವೇಗದ ಡಿಪಾರ್ಟ್ಮೆಂಟ್​​ನಲ್ಲಿ, ಪ್ರಮುಖ ವೇಗಿ ಆಗಿ ಗುರುತಿಸಿಕೊಳ್ಳೋದು ಗ್ಯಾರಂಟಿ…

ಇನ್ನು ಬೌಲಿಂಗ್ ಆಲ್​ರೌಂಡರ್ ಶಾರ್ದೂಲ್ ಠಾಕೂರ್, ಟೆಸ್ಟ್ ಕರಿಯರ್​​ನ ಭದ್ರಬುನಾದಿಗೆ, ಇಂಗ್ಲೆಂಡ್ ಪ್ರವಾಸ ಬಹುಮುಖ್ಯ.. ಈಗಾಗಲೇ ಮಧ್ಯಮ ವೇಗಿಯ ಆಲ್​ರೌಂಡರ್ ಕೊರತೆ ಟೀಮ್ ಇಂಡಿಯಾಕ್ಕೆ ಕಾಡ್ತಿದೆ. ಇಂಥಹ ಸಂದರ್ಭದಲ್ಲೇ ಆಸಿಸ್​ ಸರಣಿಯಲ್ಲಿ ಶಾರ್ದೂಲ್​ಗೆ, ಅದೃಷ್ಟದ ಬಾಗಿಲು ಬಡಿದಿತ್ತು. ಸಿಕ್ಕ ಆ ಒಂದು ಚಾನ್ಸ್​ನಲ್ಲೇ ಬ್ಯಾಟಿಂಗ್, ಬೌಲಿಂಗ್​ನಲ್ಲಿ ಮಿಂಚಿದ್ಧ ಶಾರ್ದೂಲ್, ಇಂಗ್ಲೆಂಡ್​ ಸರಣಿಯಲ್ಲೂ ಅವಕಾಶ ಸಿಕ್ಕಿದ್ದೇ ಆದರೆ, ಎರಡೂ ಕೈಗಳಿಂದ ಬಾಚಿಕೊಳ್ಳಲೇಬೇಕಿದೆ. ಅದ್ರಲ್ಲೂ ಆಸಿಸ್​ ಸರಣಿಯ ಅಂತಿಮ ಪಂದ್ಯದಲ್ಲಿ ಕೆಳ ಕ್ರಮಾಂಕದಲ್ಲಿ ದಿಟ್ಟ ಹೋರಾಟ ನಡೆಸಿದ್ದ ಶಾರ್ದೂಲ್, ಅಂಥಹ ಪ್ರದರ್ಶನ ನೀಡಿದ್ರೇನೆ ಟೆಸ್ಟ್​ ತಂಡದಲ್ಲಿ ಉಳಿಗಾಲ ಅನ್ನೋದನ್ನ, ಮನಗಾಣಬೇಕಿದೆ.

ಒಟ್ನಲ್ಲಿ… ಚೊಚ್ಚಲ ಅವಕಾಶದಲ್ಲೇ ಗಮನಾರ್ಹ ಪ್ರದರ್ಶನ ನೀಡಿದ್ದ ಈ ಯಂಗ್ ಸ್ಟರ್ಸ್​ಗೆ, ಇಂಗ್ಲೆಂಡ್ ಪ್ರವಾಸ ಕಠಿಣ ಪ್ರವಾಸವೇ ಆಗಿದೆ ನಿಜ..! ಆದ್ರೆ ಭವಿಷ್ಯದ ರೂಪಿಸುವ ಸರಣಿಯೂ ಅನ್ನೋದನ್ನ ಮರೆಯುವಂತಿಲ್ಲ..!!!

The post ಇಂಗ್ಲೆಂಡ್​ನಲ್ಲಿ ಟೀಮ್ ಇಂಡಿಯಾ ಯುವ ಕ್ರಿಕೆಟಿಗರಿಗೆ ಅಗ್ನಿಪರೀಕ್ಷೆ appeared first on News First Kannada.

Source: newsfirstlive.com

Source link