ಭಾರತ- ನ್ಯೂಜಿಲೆಂಡ್​ ನಡುವೆ ಜೂನ್​​ 18ರಂದು ನಡೆಯೋ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​​ ಫೈಟ್​​ನಲ್ಲಿ, ಉಭಯ ತಂಡಗಳು ರಣಕಹಳೆ ಮೊಳಗಿಸಿವೆ. ಅಂತಿಮ ಹಣಾಹಣಿಯಲ್ಲಿ ಪ್ರಶಸ್ತಿ ಗೆಲ್ಲೋಕೆ, ಉಳಿದಿರುವ 9 ದಿನಗಳಲ್ಲಿ ಮಾಸ್ಟರ್​​ ಪ್ಲಾನ್​​, ಗೇಮ್​​​ ಸ್ಟ್ರಾಟಜಿ ರೂಪಿಸುವಲ್ಲಿ ಎರಡೂ ತಂಡಗಳು, ಬ್ಯುಸಿಯಾಗಿವೆ. ಜೊತೆಗೆ ಮೊದಲ ಐಸಿಸಿ ಪ್ರಶಸ್ತಿಗೆ ಮುತ್ತಿಕ್ಕಲು ಉಭಯ ನಾಯಕರು, ಭಾರೀ ಕಸರತ್ತು ನಡೆಸ್ತಿದ್ದಾರೆ. ಆದರೆ ಟೀಮ್​ ಇಂಡಿಯಾಕ್ಕೆ ಹಿನ್ನಡೆ ಮೇಲೆ ಹಿನ್ನಡೆ ಎದುರಾಗ್ತಿದ್ದು, ಬ್ಲಾಕ್​​ಕ್ಯಾಪ್ಸ್​​ಗೆ ಹೆಚ್ಚು ವರದಾನವಾಗೋ ಸಾಧ್ಯತೆ ಇದೆ.

ಯೆಸ್​.!! ಇಂಗ್ಲೆಂಡ್​​ನಲ್ಲಿನ ವಾತಾವರಣದಿಂದ ಹಿಡಿದು, ಆಟಗಾರರ ಪರ್ಫಾರ್ಮೆನ್ಸ್​​ವರೆಗೂ ಟೀಮ್​ ಇಂಡಿಯಾಕ್ಕಿಂತ, ನ್ಯೂಜಿಲೆಂಡ್​​ ತಂಡಕ್ಕೇ ಹೆಚ್ಚು ಲಾಭ..! ಕಿವೀಸ್​ಗೆ ಹೋಲುವ ಇಂಗ್ಲೆಂಡ್​​ನ​ ಕಂಡೀಷನ್ಸ್, ಸ್ವಿಂಗ್​​ ಆ್ಯಂಡ್​ ಬೌನ್ಸಿ ಟ್ರ್ಯಾಕ್​​ಗಳು ಮತ್ತು ಕಿವೀಸ್​​ ವೇಗಿಗಳ ಎದುರು ಟೀಮ್ ಇಂಡಿಯಾ ಆಟಗಾರರ ವೈಫಲ್ಯ, ಹಾಗೂ ತಟಸ್ಥ ಸ್ಥಳದಲ್ಲಿ ಫೈನಲ್​​ ಪಂದ್ಯ..!!! ಹೀಗೆ ಹಲವು ಅಂಶಗಳಿಂದ ಭಾರತಕ್ಕೆ ಹಿನ್ನಡೆಯಾಗೋದೇ ಹೆಚ್ಚು, ಎನ್ನಲಾಗ್ತಿದೆ. ಮಾಜಿ ಕ್ರಿಕೆಟಿಗರು, ಪಂಡಿತರು ಕೂಡ ಇದನ್ನೇ ಹೇಳ್ತಿದ್ದಾರೆ. ಇದೀಗ ಮತ್ತೊಂದು ಸಮಸ್ಯೆ ಟೀಮ್​​ ಇಂಡಿಯಾ ಬ್ಯಾಟ್ಸ್​​ಮನ್​ಗಳಿಗೆ ಕಾಡ್ತಿದೆ. ಈ ಎಲ್ಲದರ ನಡುವೆ ಇಂಗ್ಲೆಂಡ್​​ ಪಿಚ್​​​ನಲ್ಲಿ ಯಾವೊಬ್ಬ ಬ್ಯಾಟ್ಸ್​ಮನ್​ ಕೂಡ, 40ರ ಬ್ಯಾಟಿಂಗ್ ಸರಾಸರಿ ತಲುಪದಿರೋದು, ಟೀಮ್​ ಮ್ಯಾನೇಜ್​​ಮೆಂಟ್​​​ ಅನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ.

ಇಂಗ್ಲೆಂಡ್​​ ನೆಲದಲ್ಲಿ ಟೆಸ್ಟ್​ ದಿಗ್ಗಜರ ಡಿಸಾಸ್ಟರ್​ ಪರ್ಫಾರ್ಮೆನ್ಸ್​​..!
ಕ್ರಿಕೆಟ್​ ಉದಯಿಸಿದ ನಾಡಿನಲ್ಲಿ ಪ್ರಸ್ತುತ ಆ್ಯಕ್ಟೀವ್​ ಆಟಗಾರರು, ಡಿಸಾಸ್ಟರ್​ ಬ್ಯಾಟಿಂಗ್​ಪರ್ಫಾರ್ಮೆನ್ಸ್​ ತೋರಿದ್ದಾರೆ. ವಿರಾಟ್​ ಕೊಹ್ಲಿ, ಕೆ.ಎಲ್​.ರಾಹುಲ್​, ಅಜಿಂಕ್ಯಾ ರಹಾನೆ ಮತ್ತು ಚೇತೇಶ್ವರ ಪೂಜಾರ ಹೀಗೆ ಪ್ರಮುಖ ಆಟಗಾರರು, ಇಲ್ಲಿ ಬ್ಯಾಟಿಂಗ್​ ಸರಾಸರಿ 40ಕ್ಕಿಂತ ಕಡಿಮೆ ಹೊಂದಿರೋದು, ತಂಡವನ್ನ ಚಿಂತೆಗೆ ದೂಡಿದೆ. ದಿ ಬೆಸ್ಟ್​​ ಆಟಗಾರರಿಂದಲೇ ಇಂತಹ ವರ್ಸ್ಟ್​​ ಪರ್ಫಾರ್ಮೆನ್ಸ್​ ಹೊರ ಬಂದಿರೋದು, ಕಿವೀಸ್​ ತಂಡಕ್ಕೇ ಹೆಚ್ಚು ಬೆನಿಫಿಟ್​ ಎನ್ನಲಾಗ್ತಿದೆ. ಹಾಗಾಗಿ​ ಇಂಗ್ಲೆಂಡ್​​ನಲ್ಲಿ ಟೀಮ್​ ಇಂಡಿಯಾ, ಘರ್ಜಿಸೋದು ಡೌಟ್​​ ಅನ್ನೋ ಅನುಮಾನ ಹುಟ್ಟು ಹಾಕಿದೆ.

ಆಂಗ್ಲರ ನಾಡಲ್ಲಿ ಉಳಿದವರಿಗಿಂತ ಕೊಹ್ಲಿಯೇ ಬೆಟರ್​​​​​..!
ರನ್​ ಸಾಮ್ರಾಟ, ರನ್​ ಮಷಿನ್​ ವಿರಾಟ್​ ಕೊಹ್ಲಿ, ಸದ್ಯ ನ್ಯೂಜಿಲೆಂಡ್​ ತಂಡಕ್ಕೆ ವಿಲನ್​ ಆಗೋಕೆ ತಯಾರಿ ನಡೆಸ್ತಿದ್ದಾರೆ. ಆದರೆ ಇಂಗ್ಲೆಂಡ್​​​ ನೆಲದಲ್ಲಿ ಕೊಹ್ಲಿ, ಟ್ರ್ಯಾಕ್​ ರೆಕಾರ್ಡ್​ ಹೇಳಿಕೊಳ್ಳುವಂತಿಲ್ಲ ಅನ್ನೋದು ಟೀಮ್​ ಹಿನ್ನಡೆಗೆ ಕಾರಣವಾಗಿದೆ..! ಆದರೆ ರಹಾನೆ, ಪೂಜಾರ, ರಾಹುಲ್​​​ಗೆ ಹೋಲಿಸಿದ್ರೆ, ಇಂಗ್ಲೆಂಡ್​ ಪಿಚ್​​ನಲ್ಲಿ ಕೊಹ್ಲಿಯೇ ಬೆಟರ್​​. ಕೊಹ್ಲಿ ಬ್ಯಾಟಿಂಗ್​ ಸರಾಸರಿ 30ಕ್ಕಿಂತ ಹೆಚ್ಚಿದ್ರೆ, ಉಳಿದವರ ಪರಿಸ್ಥಿತಿ ಸರಾಸರಿ ಅದಕ್ಕಿಂತ ಘನಘೋರವಾಗಿದೆ

ಇಂಗ್ಲೆಂಡ್​​ನಲ್ಲಿ​ ಕೊಹ್ಲಿ ಪ್ರದರ್ಶನ
ಪಂದ್ಯ            10
ರನ್              727
ಸರಾಸರಿ        36.35

ಆಂಗ್ಲರ ನಾಡಲ್ಲಿ ವಿರಾಟ್​ ಕೊಹ್ಲಿ ಆದ್ರು 36ರ ಸರಾಸರಿ ಹೊಂದಿದ್ದಾರೆ. ಆದ್ರೆ ಕೆ.ಎಲ್​​.ರಾಹುಲ್,​​ 30ರ ಸರಾಸರಿ ತಲುಪೋಕು ವಿಫಲರಾಗಿದ್ದಾರೆ.

ಇಂಗ್ಲೆಂಡ್​​ನಲ್ಲಿ​ ರಾಹುಲ್​​ ಪ್ರದರ್ಶನ
ಪಂದ್ಯ             05
ರನ್              299
ಸರಾಸರಿ        29.90

ಇನ್ನು ಕೊಹ್ಲಿ-ರಾಹುಲ್​​ ಪ್ರದರ್ಶನ ಇಷ್ಟಾದ್ರೆ, ರಹಾನೆ ಪರ್ಫಾಮೆನ್ಸ್​ ಅದಕ್ಕಿಂತ ಕಳಪೆಯಾಗಿದೆ. ಟೀಮ್​​ ಇಂಡಿಯಾದ ಟೆಸ್ಟ್​ ತಂಡದ ನಂಬಿಕಸ್ಥ ಬ್ಯಾಟ್ಸ್​ಮನ್​​ ಎನಿಸಿಕೊಂಡಿರುವ ರಹಾನೆ, ಇಂಗ್ಲೆಂಡ್​ ನೆಲದಲ್ಲಿ ಕಳಪೆ ಬ್ಯಾಟಿಂಗ್​ ಪ್ರದರ್ಶನ​​ ಮತ್ತಷ್ಟು ಒತ್ತಡಕ್ಕೆ ದೂಡಿದೆ.

ಇಂಗ್ಲೆಂಡ್​​ನಲ್ಲಿ​ ರಹಾನೆ​​ ಪ್ರದರ್ಶನ
ಪಂದ್ಯ            10
ರನ್              556
ಸರಾಸರಿ       29.26

ಟೆಸ್ಟ್​ಗೆ ಹೇಳಿ ಮಾಡಿಸಿದ ಬ್ಯಾಟ್ಸ್​ಮನ್​ ಚೇತೇಶ್ವರ ಪೂಜಾರ.!! ಕ್ರೀಸ್​​ನಲ್ಲಿ ಕಚ್ಚಿನಿಂತು ಏಕಾಂಗಿಯಾಗಿ ತಂಡಕ್ಕೆ ಗೆಲುವು ತಂದುಕೊಟ್ಟ ಈ ಬ್ಯಾಟ್ಸ್​​ಮನ್​​​, ಅದ್ಯಾಕೋ ಇಂಗ್ಲೆಂಡ್​​ನಲ್ಲಿ ಫುಲ್​​ ಸೈಲೆಂಟ್​ ಆಗಿದ್ದಾರೆ.

ಇಂಗ್ಲೆಂಡ್​​ನಲ್ಲಿ​ ರಹಾನೆ​​ ಪ್ರದರ್ಶನ
ಪಂದ್ಯ            09
ರನ್              500
ಸರಾಸರಿ        29.41

ಕೇವಲ ಇವರಷ್ಟೇ ಅಲ್ಲ..!!! ಕಳೆದೆರಡು ಸರಣಿಗಳಲ್ಲಿ ಮ್ಯಾಚ್​ ವಿನ್ನಿಂಗ್​ ಪರ್ಫಾಮೆನ್ಸ್​ ನೀಡಿದ್ದ ರಿಷಭ್​ ಪಂತ್ ಕೂಡ​, ಇಂಗ್ಲೆಂಡ್​​ನಲ್ಲಿ ಫುಲ್​ ಡಲ್​..! ಹಾಗೆಯೇ ಓಪನರ್​​ ರೋಹಿತ್​ ಶರ್ಮಾರಿಂದ ಕೂಡ, ಅಷ್ಟಾಗಿ ಪ್ರದರ್ಶನ ಮೂಡಿ ಬಂದಿಲ್ಲ. ಪಂತ್​ 3 ಟೆಸ್ಟ್​ಗಳಲ್ಲಿ 27ರ ಸರಾಸರಿಯಲ್ಲಿ 162ರನ್​ ಸಿಡಿಸಿದ್ರೆ, ರೋಹಿತ್​ ಒಂದು ಪಂದ್ಯವಾಡಿ 34ರನ್​ ಅಷ್ಟೆ ಗಳಿಸಿದ್ದಾರೆ. ಇನ್ನು ಗಿಲ್​ ಇದೇ ಮೊದಲ ಬಾರಿಗೆ ಇಂಗ್ಲೆಂಡ್​ ಪಿಚ್​​​ನಲ್ಲಿ ಆಡುವ ಸಾಧ್ಯತೆ ಇದೆ.

ಇಂಗ್ಲೆಂಡ್​ ಪಿಚ್​ಗಳಲ್ಲಿ ಈಗಾಗಲೇ ಹಲವು ಅಂಶಗಳಿಂದ ಹಿನ್ನಡೆ ಅನುಭವಿಸಿರುವ ಟೀಮ್​ ಇಂಡಿಯಾ, ಇದೀಗ ಈ ಕಾರಣದಿಂದಲೂ ಕೂಡ ಹಿಂದೆ ಉಳಿದಿರೋದು, ತಂಡವನ್ನ ಸಂಕಷ್ಟಕ್ಕೆ ತಳ್ಳಿದೆ. ಹಾಗಾಗಿ ಇಂಗ್ಲೆಂಡ್​​ ಪಿಚ್​​ನಲ್ಲಿ ಶತಾಯಗತಾಯ ಕೊಹ್ಲಿ, ಪೂಜಾರ, ರಹಾನೆ ಬೆಸ್ಟ್​ ಪರ್ಫಾಮೆನ್ಸ್​ ನೀಡಲೇಬೇಕಿದೆ. ಹಾಗಿದ್ದರೆ ಮಾತ್ರ ಕಿವೀಸ್​​ ವಿರುದ್ಧ ಗೆಲ್ಲೋಕೆ ಸಾಧ್ಯ…

The post ಇಂಗ್ಲೆಂಡ್​ನಲ್ಲಿ ಟೀಮ್ ಇಂಡಿಯಾ ಬ್ಯಾಟ್ಸ್​ಮನ್​ಗಳಿಗೆ ‘ಟೆಸ್ಟಿಂಗ್ ಟೈಮ್’..? appeared first on News First Kannada.

Source: newsfirstlive.com

Source link