ಹೈವೋಲ್ಟೇಜ್​ ಟೆಸ್ಟ್​ ಚಾಂಪಿಯನ್​ಶಿಪ್​​ ಫೈನಲ್​​ಗೆ ಹತ್ತಿರವಾಗ್ತಿದೆ. ಕೇವಲ 4 ದಿನಗಳಲ್ಲಿ ಆರಂಭವಾಗಲಿರುವ ಈ ಐತಿಹಾಸಿಕ ಪಂದ್ಯಕ್ಕೆ ಟೀಮ್ ಇಂಡಿಯಾ ಸಜ್ಜಾಗ್ತಿದೆ. ಆ ಬಳಿಕ ಇಂಗ್ಲೆಂಡ್​ ವಿರುದ್ಧ 5 ಟೆಸ್ಟ್​ ಪಂದ್ಯಗಳನ್ನೂ ಭಾರತ ಆಡಬೇಕಿದೆ. ಇಂಗ್ಲೆಂಡ್ ಕಂಡೀಷನ್​​ನಲ್ಲಿ ನಡೆಯುತ್ತಿರುವ ಈ ಎರಡು ಮಹತ್ವದ ಸರಣಿಗಳೂ, ಟೀಮ್ ಇಂಡಿಯಾಗೆ ಅಗ್ನಿಪರೀಕ್ಷೆಯೇ ಆಗಿದೆ. ಅಷ್ಟೇ ಅಲ್ಲ..! ಟೀಮ್ ಇಂಡಿಯಾದಲ್ಲಿನ ಬಹುತೇಕ ಆಟಗಾರರಿಗೂ ಇದು ಅನ್ವಯವಾಗುತ್ತೆ. ಪ್ರಮುಖವಾಗಿ ವೈಸ್​ ಕ್ಯಾಪ್ಟನ್ ಅಜಿಂಕ್ಯಾ ರಹಾನೆ ಹಾಗೂ ಚೇತೇಶ್ವರ ಪೂಜಾರಾ ಪಾಲಿಗೆ ಇದು ಟೆಸ್ಟಿಂಗ್​ ಟೈಮ್​ ಆಗಿದೆ.

ಓವರ್​​ಸೀಸ್​ ಸರಣಿಗಳಲ್ಲಿ ಬೆಂಚ್ ಮಾರ್ಕ್ ಸೃಷ್ಟಿಸಿದ್ದ ರಾಹುಲ್​ ದ್ರಾವಿಡ್, ದೇಶ-ವಿದೇಶಗಳಲ್ಲಿ ಸಮಾನವಾಗಿ ರನ್​​ ಹೊಳೆ ಹರಿಸಿದ್ರು. ಸಂಕಷ್ಟದ ಸಮಯದಲ್ಲಿ ತಂಡದ ಕೈ ಹಿಡಿತಿದ್ದ ದ್ರಾವಿಡ್​, ಟೀಮ್ ಇಂಡಿಯಾದ ವಾಲ್​ ಅಂತಾನೇ ಗುರುತಿಸಿಕೊಂಡಿದ್ರು. ರಾಹುಲ್​ ನಿವೃತ್ತಿಯ ಬಳಿಕ ದಿಗ್ಗಜ ಆಟಗಾರನೊಂದಿಗೆ ಅಜಿಂಕ್ಯಾ ರಹಾನೆ, ಚೇತೇಶ್ವರ ಪೂಜಾರರನ್ನ ಹೋಲಿಸಲಾಗ್ತಿದೆ.! ಈ ಹೋಲಿಕೆಗೆ ರೆಡ್​ಬಾಲ್ ಕ್ರಿಕೆಟ್​ನಲ್ಲಿ ಚೇತೇಶ್ವರ ಪೂಜಾರ ನ್ಯಾಯ ಒದಗಿಸ್ತಾ ಇದ್ರೆ, ವೈಸ್​ ಕ್ಯಾಪ್ಟನ್ ರಹಾನೆ ತದ್ವಿರುದ್ದ ದಿಕ್ಕಲ್ಲಿ ಸಾಗ್ತಿದ್ದಾರೆ.

ಟೆಸ್ಟ್​ ಕ್ರಿಕೆಟ್​​ನಲ್ಲಿ ರಹಾನೆಗೆ ಸಿಕ್ಕಿತ್ತು ಸಾಲಿಡ್ ಸ್ಟಾರ್ಟ್​..!
ಅಜಿಕ್ಯಾ ರಹಾನೆ, ಟೆಸ್ಟ್​ ಕ್ರಿಕೆಟ್​​ನ ಇಂಪ್ಯಾಕ್ಟಬಲ್ ಪ್ಲೇಯರ್​​ ಎನ್ನವುದರಲ್ಲಿ ಎರಡು ಮಾತಿಲ್ಲ..! 2013ರಲ್ಲಿ ಟೆಸ್ಟ್ ಕ್ರಿಕೆಟ್​ಗೆ ಎಂಟ್ರಿಕೊಟ್ಟಿದ್ದ ರಹಾನೆ, ಸೌತ್​ ಆಫ್ರಿಕಾ ಪ್ರವಾಸದಲ್ಲಿ ಸಾಲಿಡ್ ಪರ್ಪಾಮೆನ್ಸ್​ ನೀಡಿದ್ರು. ತಾವಾಡಿದ ಮೊದಲ 32 ಟೆಸ್ಟ್​ ಪಂದ್ಯಗಳಲ್ಲೇ 8 ಶತಕ ಸಿಡಿಸಿದ್ದ ರಹಾನೆ, ಕರಿಯರ್​​ನ ಮೊದಲ ಮೂರು ವರ್ಷ ಉತ್ತುಂಗದಲ್ಲಿದ್ರು. ಅದ್ರಲ್ಲೂ ರಹಾನೆ ದಾಖಲಿಸಿದ್ದ 8 ಶತಕಗಳ ಪೈಕಿ 1 ಏಷ್ಯಾ, ಉಳಿದ ನಾಲ್ಕು ಶತಕಗಳ ಸೇನಾ ರಾಷ್ಟ್ರಗಳಲ್ಲಿ ಮೂಡಿಬಂದಿದ್ವು. ಇದರೊಂದಿಗೆ ವಿದೇಶದಲ್ಲಿ ಓರ್ವ ಪರಿಣಾಮಕಾರಿ ಬ್ಯಾಟ್ಸ್​ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ರು.

ರಹಾನೆ ಮುಂದೆ ಮಂಕಾಗಿದ್ದ ಚೇತೇಶ್ವರ ಪೂಜಾರ..!
ಒಂದೆಡೆ ಆರಂಭದ ಕರಿಯರ್​ನಲ್ಲಿ ಅಜಿಂಕ್ಯಾ ರಹಾನೆ ಏರುಗತಿಯಲ್ಲಿ ಸಾಗ್ತಿದ್ರೆ. ಇತ್ತ 2010ರಲ್ಲಿ ಕರಿಯರ್ ಆರಂಭಿಸಿದ್ದ​ ಮಾಡಿದ್ದ ಪೂಜಾರ ವಿದೇಶದಲ್ಲಿ ಮಂಕಾಗಿದ್ರು. ಆರಂಭಿಕ 5 ವರ್ಷದಲ್ಲಿ 32 ಟೆಸ್ಟ್ ಪಂದ್ಯಗಳನ್ನಾಡಿದ್ದ ಚೇತೇಶ್ವರ್​ ಪೂಜಾರ, 7 ಶತಕ ದಾಖಲಿಸಿದ್ರು. ಈ ಪೈಕಿ 5 ಶತಕಗಳು ಸ್ವದೇಶದಲ್ಲೇ ಆಗಿದ್ದವು. ಹಾಗಾಗಿ ಪೂಜಾರಾಗೇ ಹೋಲಿಸಿದಾಗ ಟೆಸ್ಟ್ ತಂಡದ ಬಲವಾಗಿ ರಹಾನೆ ಮೊದಲ ಸ್ಥಾನದಲ್ಲಿ ನಿಲ್ಲುತ್ತಿದ್ದರು.. ಆದ್ರೆ, ಅದು ಪೂಜಾರ ವಿದೇಶದಲ್ಲಿ ಬ್ಯಾಟ್​ ಜಳಪಿಸುವರೆಗೆ ಮಾತ್ರವೇ ಆಗಿತ್ತು..!

ಸೆಕೆಂಡ್ ಹಾಫ್​ನಲ್ಲಿ ಪೂಜಾರ ರೋರಿಂಗ್.. ರಹಾನೆ ಸೈಲೆಂಟ್!
ಇಂಗ್ಲೆಂಡ್​ನಲ್ಲಿ ಸಮತೂಕದ ಪ್ರದರ್ಶನ ನೀಡಿರುವ ಉಭಯ ಆಟಗಾರರು, ಸದ್ಯ ತಂಡದ ಆಧಾರ ಸ್ಥಂಭವೂ ಆಗಿದ್ದಾರೆ. ಆದ್ರೆ, ಈ ಇಬ್ಬರ ಸೆಕೆಂಡ್ ಆಫ್ ಕ್ರಿಕೆಟ್ ಜರ್ನಿ ಮಾತ್ರ ಡಿಫರೆಂಟ್ ಆಗಿದೆ. ಸೌತ್​ ಆಫ್ರಿಕಾ, ವೆಸ್ಟ್​ ಇಂಡೀಸ್, ನ್ಯೂಜಿಲೆಂಡ್​ ನೆಲದಲ್ಲಿ ರೆಡ್​​ ಹಾಟ್​ ಫಾರ್ಮ್​​ನಲ್ಲಿದ್ದ​ ಮುಂಬೈಕರ್ ಪರ್ಫಾಮೆನ್ಸ್​​ ಹಠಾತಾನೇ ಡಲ್​ ಆಯ್ತು. ಅತ್ತ ಪೂಜಾರ ಪರ್ಫಾಮೆನ್ಸ್​​ ಏರುಗತಿಯಲ್ಲಿ ಸಾಗ್ತು.

2018ರ ಆಸ್ಟ್ರೇಲಿಯಾ ಸರಣಿಯಲ್ಲಿ ಮೇನ್​​ ರೂಲ್ ಪ್ಲೇ ಮಾಡಿದ್ದ ಪೂಜಾರ, 521 ರನ್ ಕಲೆ ಹಾಕಿದರು. ಸಧ್ಯ ತನ್ನ ಅನ್​​ ಆರ್ಥೋಡಾಕ್ಸ್​​ ಬ್ಯಾಟಿಂಗ್​ ಶೈಲಿಯಿಂದ ಪೂಜಾರ ಮ್ಯಾಚ್ ವಿನ್ನರ್ ಪರ್ಫಾಮರ್​ ಎನಿಸಿದ್ದಾರೆ. ಆದ್ರೆ, ಅತ್ತ ಸೌತ್ ಆಫ್ರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ ನೆಲದಲ್ಲಿ ರಹಾನೆ, ಕರಿಯರ್​ ಡಿಫೆಡಿಂಗ್ ಪ್ರದರ್ಶವನ್ನನ ನೀಡ್ತಾನೇ ಇಲ್ಲ..!

ಸರಣಿಯಿಂದ ಸರಣಿಗೆ ಕುಸಿದ ರಹಾನೆ ಪ್ರದರ್ಶನ
ವರ್ಷ                   ಸರಣಿ                  ರನ್
2014                 ಇಂಗ್ಲೆಂಡ್               299
2014/15           ಆಸ್ಟ್ರೇಲಿಯಾ           399
2015/16          ಸೌತ್​ ಆಫ್ರಿಕಾ          266
2016/17          ನ್ಯೂಜಿಲೆಂಡ್           347
2019               ವೆಸ್ಟ್​ ಇಂಡೀಸ್        271
2020/21          ಆಸ್ಟ್ರೇಲಿಯಾ           268

ಆರಂಭದ 32 ಪಂದ್ಯಗಳಲ್ಲಿ 8 ಶತಕ ಸಿಡಿಸಿದ್ದ ರಹಾನೆ, ವಿದೇಶದಲ್ಲೇ 5 ಶತಕ ಸಿಡಿಸಿದ್ದರು. ಆದ್ರೆ, ಇದಾದ ಬಳಿಕ ಓವರ್​ಸೀಸ್​ನಲ್ಲಿ ರಹಾನೆ ಸಿಡಿಸಿದ್ದು, ಕೇವಲ ಮೂರು ಶತಕಗಳು ಮಾತ್ರ.. ಆದ್ರೆ, ಆರಂಭದಲ್ಲಿ ಪರದಾಡಿದ್ದ ಪೂಜಾರ, ಇದಕ್ಕೆ ತದ್ವಿರುದ್ಧ.. ಆರಂಭಿಕ 32 ಪಂದ್ಯಗಳಲ್ಲಿ ವಿದೇಶದಲ್ಲಿ 2 ಶತಕ ದಾಖಲಿಸಿದ್ದ ಪೂಜಾರ, ನಂತರದ ಅವಧಿಯಲ್ಲಿ ದಾಖಲಿಸಿದ ಶತಕಗಳು ಆರಾಗಿವೆ..

ಈ ಎಲ್ಲಾ ಅಂಕಿ-ಅಂಶಗಳನ್ನ ಗಮನಿಸಿದ್ರೆ ರಹಾನೆ ಕರಿಯರ್​​​ ಅಂತ್ಯದ ಹಾದಿಯಲ್ಲಿ ಸಾಗ್ತಿರೋದು ಗೋಚರಿಸ್ತಾ ಇದೆ. ಹೀಗಾಗಿ ರಹಾನೆ, ಪೂಜಾರ ಬ್ಯಾಟಿಂಗ್​ ಶೈಲಿ ಹಾಗೂ, ಕೌಶಲ್ಯಗಳನ್ನ ಅಡಾಫ್ಟ್​ ಮಾಡಿಕೊಳ್ಳಬೇಕು ಅನ್ನೋದು ಹಲವರ ವಾದವಾಗಿದೆ. ಬ್ಯಾಡ್​​ ಬಾಲ್​ಗಳನ್ನ ದಂಡಿಸೋ ಹಾಗೂ ಉತ್ತಮ ಎಸೆತಗಳನ್ನ ಬಿಟ್ಟು ಬಿಡುವ ಪೂಜಾರರ ಪರಿಪಾಠ ರಹಾನೆಯ ಬ್ಯಾಟಿಂಗ್​ ಕೌಶಲ್ಯವನ್ನ ಹೆಚ್ಚಿಸಲೂಬಹುದು.

ಒಟ್ಟಿನಲ್ಲಿ ಸದ್ಯದ ಫಾರ್ಮ್​​ ರಹಾನೆ ಪಾಲಿಗಂತೂ ಎಚ್ಚರಿಕೆಯ ಕರೆಗಂಟೆಯಾಗಿದೆ. ಹಾಗಾಗಿ ಅಗ್ನಿಪರೀಕ್ಷೆಯ ಇಂಗ್ಲೆಂಡ್​ ಟೂರ್​ನಲ್ಲಿ ಮುಂಬೈಕರ್​, ಮತ್ತೆ ಆರಂಭಿಕ ದಿನಗಳನ್ನ ನೆನೆಪಿಸುವಂತ ಆಟ ಆಡಬೇಕಿದೆ. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಉಪನಾಯಕ ಸಂಕಷ್ಟಕ್ಕೆ ಸಿಲುಕಿದರು ಅಚ್ಚರಿ ಇಲ್ಲ.!

The post ಇಂಗ್ಲೆಂಡ್​​ನಲ್ಲಿ ಉಪನಾಯಕ ಅಜಿಂಕ್ಯಾ ರಹಾನೆ ಮುಂದಿದೆ ಸಾಲು ಸಾಲು ಸವಾಲು..! appeared first on News First Kannada.

Source: newsfirstlive.com

Source link