ಟೀಮ್ ಇಂಡಿಯಾ ಸುದೀರ್ಘ ನಾಲ್ಕು ತಿಂಗಳ ಇಂಗ್ಲೆಂಡ್‌ ಪ್ರವಾಸ ಕೈಗೊಂಡಿದೆ. ಈ ಪ್ರವಾಸ ಟೀಮ್ ಇಂಡಿಯಾ ಓಪನರ್‌ ರೋಹಿತ್ ಶರ್ಮಾಗೆ, ಅಗ್ನಿ ಪರೀಕ್ಷೆ ಅಂತ ಹೇಳಲಾಗ್ತಿತ್ತು. ಆದ್ರೆ ಈ ಪ್ರವಾಸದಲ್ಲೇ ಟೀಮ್ ಇಂಡಿಯಾಕ್ಕೆ ಅಗ್ನಿಪರೀಕ್ಷೆಯಾದರು, ಸಕ್ಸಸ್​ ಕಾಣ್ತಾರೆ. ಎದುರಾಳಿಗಳಿಗೆ ಕಂಟಕವಾಗ್ತಾರೆ. ಓವರ್​​ಸೀಸ್ ಫ್ಲಾಪ್ ಸ್ಟಾರ್​ ಎಂಬ ಹಣ ಪಟ್ಟಿಯನ್ನೂ ಕಳಚುತ್ತಾರೆ.. ಈ ಆತ್ಮವಿಶ್ವಾಸದ ಮಾತುಗಳಿಗೆ ಕಾರಣ ಏನು ಅಂತೀರಾ…?

ಜೂನ್​.18ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್​​ಗೆ, ದಿನಗಣನೆ ಶುರುವಾಗಿದೆ. ನ್ಯೂಜಿಲೆಂಡ್ ವಿರುದ್ಧದ ಪ್ರತಿಷ್ಠಿತ ಪಂದ್ಯಕ್ಕಾಗಿ ಇಂಗ್ಲೆಂಡ್​ ತಲುಪಿರುವ ಟೀಮ್ ಇಂಡಿಯಾ, ಸದ್ಯ ಕ್ವಾರಂಟೀನ್​​ನಲ್ಲಿದೆ. ಮತ್ತೊಂದೆಡೆ ಆತಿಥೇಯ ಇಂಗ್ಲೆಂಡ್​ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ಸೆಣಸಾಡುತ್ತಿರುವ ಕಿವೀಸ್​, ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​ನ ಪೂರ್ವ ಸಿದ್ಧತೆಯಲ್ಲಿದ್ರೆ, ಇತ್ತ ಟೀಮ್ ಇಂಡಿಯಾ ಆಟಗಾರರು ಕೂಡ, ಪ್ರತಿಷ್ಠಿತ ಪಂದ್ಯಕ್ಕಾಗಿ ತಯಾರಿ ನಡೆಸ್ತಿದ್ದಾರೆ. ಅದ್ರಲ್ಲೂ ಟೀಮ್ ಇಂಡಿಯಾಕ್ಕೆ ಕಠಿಣ ಪ್ರವಾಸ ಅಂತಾನೇ ಬಿಂಬಿಂತವಾಗಿರೋ ಈ ಇಂಗ್ಲೆಂಡ್​ ಪ್ರವಾಸ, ಪ್ರತಿ ಆಟಗಾರನಿಗೂ ಅಗ್ನಿ ಪರೀಕ್ಷೆಯೇ ಆಗಿದೆ. ಆದ್ರೆ ಹಿಟ್​​​ಮ್ಯಾನ್ ರೋಹಿತ್ ಶರ್ಮಾಗೆ ಮಾತ್ರ, ಇದು ಮೋಸ್ಟ್​ ಚಾಲೆಂಜಿಂಗ್ ಸೀರಿಸ್.

ಯೆಸ್​..! ಸದ್ಯ ಹಿಟ್​ಮ್ಯಾನ್ ಟೆಸ್ಟ್​ ಕ್ರಿಕೆಟ್​​ನಲ್ಲಿ ಸಕ್ಸಸ್​ ಕಾಣ್ತಿದ್ರೂ, ವಿದೇಶಿ ಪಿಚ್​​ಗಳಲ್ಲಿ ಫ್ಲಾಪ್​ಮ್ಯಾನ್ ಆಗಿಯೇ ಎಲ್ಲರಿಗೂ ಕಾಣ್ತಿದ್ದರು. ಇದಕ್ಕೆ ಕಾರಣ ಓವರ್​​ಸೀನ್​​ನಲ್ಲಿ ಹಿಂದಿನ ಟೆಸ್ಟ್​ ಬ್ಯಾಟಿಂಗ್ ರೆಕಾರ್ಡ್.. ಆದ್ರೀಗ ಇದೇ ರೋಹಿತ್ ಶರ್ಮಾ, ಇಂಗ್ಲೆಂಡ್ ಪ್ರವಾಸದಲ್ಲಿ ಟೀಮ್ ಇಂಡಿಯಾದ ಮ್ಯಾಚ್​ ವಿನ್ನರ್ ಆಗ್ತಾರೆ..!! ಬೌನ್ಸಿ ಟ್ರ್ಯಾಕ್​​ನಲ್ಲಿ ಎದುರಾಳಿಗಳಿಗೆ ಸುಲಭದ ತುತ್ತಾಗ್ತಾರೆ ಅಂತ ಹೇಳ್ತಿದ್ದವರು, ಇದೀಗ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್​​ ತಂಡವನ್ನ ಮುಂಬೈಕರ್​ ಕಾಡೋದು ಕನ್ಫರ್ಮ್ ಅಂತಿದ್ದಾರೆ​.

ಇಂಗ್ಲೆಂಡ್​​ನಲ್ಲಿ ನಡೆಯುತ್ತೆ ರೋಹಿತ್ ದರ್ಬಾರ್​..!
ಹಿಂದಿನ ಓವರ್​​​ಸೀಸ್​​ ಟೆಸ್ಟ್​ ಸರಣಿಗಳಲ್ಲಿ ರೋಹಿತ್ ಶರ್ಮಾ, ಫ್ಲಾಪ್ ಆಗಿದ್ದಾರೆ ನಿಜ.! ಆದ್ರೆ ಈಗಿನ ರೋಹಿತ್ ಶರ್ಮಾ ಸಂಪೂರ್ಣ ಢಿಪರೆಂಟ್… ಹಿಂದಿನ ವಿದೇಶಿ ಪ್ರವಾಸಗಳಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ಆಗಿದ್ದ ರೋಹಿತ್, 2019ರಿಂದ ಟೆಸ್ಟ್​ ಓಪನರ್​​ ಆಗಿ ಸಕ್ಸಸ್​​ ಕಂಡಿದ್ದಾರೆ. ಕಳೆದ ಆಸಿಸ್​ ಟೂರ್​​ನ ಕೊನೆಯ ಎರಡು ಟೆಸ್ಟ್​ ಪಂದ್ಯಗಳಲ್ಲಿ ಆಡಿದ್ದ ರೋಹಿತ್, ಗಮನಾರ್ಹ ಪ್ರದರ್ಶನವನ್ನೇ ನೀಡಿದ್ದಾರೆ. ಅಷ್ಟೇ ಅಲ್ಲ..! ಇಂಗ್ಲೆಂಡ್​​ ಪಿಚ್​ಗಳು ರೋಹಿತ್​ ಶರ್ಮಾರ ಹಾಟ್​​ ಫೇವ​ರಿಟ್​ ಕೂಡ. ಇದಕ್ಕೆ ಸಾಕ್ಷಿ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ.

ಏಕದಿನ ವಿಶ್ವಕಪ್​​​ನಲ್ಲಿ ನಡೆದಿತ್ತು ಹಿಟ್​​ಮ್ಯಾನ್ ಶೋ..!
ಹಿಟ್​​ಮ್ಯಾನ್ ರೋಹಿತ್​ ಶರ್ಮಾಗೆ ಇಂಗ್ಲೆಂಡ್ ಅಚ್ಚಮೆಚ್ಚು ಅನ್ನೋದಕ್ಕೆ ಬೆಸ್ಟ್​ ಎಕ್ಸಾಂಪಲ್, 2019ರಲ್ಲಿ ನಡೆದ ಏಕದಿನ ವಿಶ್ವಕಪ್. ಟೂರ್ನಿಯುದ್ದಕ್ಕೂ ಅಬ್ಬರಿಸಿದ್ದ ರೋಹಿತ್, ಸೌತ್ ಆಫ್ರಿಕಾ, ಪಾಕಿಸ್ತಾನ, ಇಂಗ್ಲೆಂಡ್, ಬಾಂಗ್ಲ ಹಾಗೂ ಶ್ರೀಲಂಕಾ ರನ್​​ಮಳೆಯನ್ನೇ ಹರಿಸಿದರು. ಟೂರ್ನಿಯಲ್ಲಿ 5 ಶತಕ ಸಿಡಿಸಿದ ರೋಹಿತ್, ನಿಜಕ್ಕೂ ಸೂಪರ್​ ಹಿಟ್​ ಶೋ ತೋರಿದ್ದರು. ಆದ್ರೀಗ ಇದೇ ಇಂಗ್ಲೆಂಡ್​​ನಲ್ಲಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ನಡೀತಿದೆ. ಹಾಗಾಗಿ ರೋಹಿತ್​ ಶರ್ಮಾ ಸಿಡಿಯುವ ಸಾಧ್ಯತೆ ದಟ್ಟವಾಗಿದೆ.

ಸೌತಾಂಪ್ಟನ್​​​​ನಲ್ಲಿ ಮತ್ತೆ ಪಂದ್ಯ ಗೆಲ್ಲಿಸಿಕೊಡ್ತಾರಾ ರೋಹಿತ್.?
2019ರ ಏಕದಿನ ವಿಶ್ವಕಪ್​​ನ ಟೀಮ್ ಇಂಡಿಯಾ ಜರ್ನಿ ಶುರುವಾಗಿದ್ದೇ, ಸೌತಾಂಪ್ಟನ್​​ನಿಂದ.. ಸೌತ್​ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಬ್ಲಾಕ್ ಬಾಸ್ಟರ್​ ಪರ್ಫಾಮೆನ್ಸ್ ನೀಡಿದ್ದ ಹಿಟ್​ಮ್ಯಾನ್ ರೋಹಿತ್ ಶರ್ಮಾ, ಅಜೇಯ 122 ರನ್ ಸಿಡಿಸಿ ಟೀಮ್ ಇಂಡಿಯಾಕ್ಕೆ ಅಮೋಘ ಜಯ ತಂದಿಟ್ಟಿದ್ರು. ಆದ್ರೆ ಐಸಿಸಿಯ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ ಸಹ, ಈಗ ಸೌತಾಂಪ್ಟನ್​​​​ನಲ್ಲೇ ನಡೀತಿದೆ. ಅಲ್ಲಿ ಆಡಿದ ಅನುಭವ ಹೊಂದಿರುವ ರೋಹಿತ್, ಒಂದು ಒಳ್ಳೆ ಇನ್ನಿಂಗ್ಸ್ ಕಟ್ಟಲಿದ್ದಾರೆ. ಇದಕ್ಕೆ ಕಾರಣ ಸೌತಾಂಪ್ಟನ್​​ನಲ್ಲಿ ಟೀಮ್ ಇಂಡಿಯಾ ಎದುರಾಳಿ, ನ್ಯೂಜಿಲೆಂಡ್​.

ಟೆಸ್ಟ್​ ಫಾರ್ಮೆಟ್​ನಲ್ಲಿ ಕಿವೀಸ್​ ಎದುರು ರೋಹಿತ್ ಯಶಸ್ಸು..!
ಐಸಿಸಿ ಟೂರ್ನಿ ಹಾಗೂ ಏಕದಿನ, ಟಿ20 ಫಾರ್ಮೆಟ್​​ನಲ್ಲಿ ಕನ್ಸಿಸ್ಟೆನ್ಸಿ ಪರ್ಫಾಮೆನ್ಸ್ ನೀಡೋ ರೋಹಿತ್, ಟೆಸ್ಟ್​ ಫಾರ್ಮೆಟ್​ನ ಮಧ್ಯಮ ಕ್ರಮಾಂಕದಲ್ಲಿ ಹೆಚ್ಚು ಯಶಸ್ಸು ಕಾಣದಿದ್ದರೂ, ನ್ಯೂಜಿಲೆಂಡ್ ವಿರುದ್ಧ ಅತ್ಯುತ್ತಮ ಬ್ಯಾಟಿಂಗ್ ಟ್ರ್ಯಾಕ್ ರೆಕಾರ್ಡ್​ ಹೊಂದಿದ್ದಾರೆ. ಹಾಗಾಗಿಯೇ ಸೌತಾಂಪ್ಟನ್​ನಲ್ಲಿ ರೋಹಿತ್, ಟೀಮ್ ಇಂಡಿಯಾ ಕೈ ಹಿಡಿತಾರೆ ಎಂಬ ಆತ್ಮವಿಶ್ವಾಸಕ್ಕೂ ಕಾರಣ.

ಕಿವೀಸ್ ವಿರುದ್ಧ ರೋಹಿತ್

  • ಪಂದ್ಯ-05
  • ರನ್ 360
  • ಸರಾಸರಿ 60.00
  • ಅರ್ಧಶತಕ 04

ನ್ಯೂಜಿಲೆಂಡ್ ವಿರುದ್ಧ ಐದು ಟೆಸ್ಟ್ ಪಂದ್ಯಗಳನ್ನಾಡಿರುವ ರೋಹಿತ್ ಶರ್ಮಾ, 60ರ ಸರಾಸರಿಯಲ್ಲಿ 360 ರನ್ ಗಳಿಸಿದ್ದಾರೆ. ಈ ಪೈಕಿ ನಾಲ್ಕು ಅರ್ಧಶತಕಗಳು ಒಳಗೊಂಡಿವೆ. ಮೇಲಿನ ಅಂಕಿಅಂಶ ನೋಡಿದರೇ ಗೊತ್ತಾಗುತ್ತೆ. ನ್ಯೂಜಿಲೆಂಡ್ ಎದುರು ರೋಹಿತ್ ಆರ್ಭಟಿಸುತ್ತಾರೆ ಅನ್ನೋದನ್ನ. ಇನ್ನು ರೋಹಿತ್ ಶರ್ಮಾರ ಬ್ಯಾಟಿಂಗ್ ವಿಚಾರವಾಗಿ ಮಾತನಾಡಿರುವ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಠೋರ್‌, ಮೆಚ್ಚುಗೆಯ ಮಾತುಗಳನ್ನ ಆಡಿದ್ದಾರೆ.

ರೋಹಿತ್ ಬದಲಾಗಿದ್ದಾರೆ..!
ರೋಹಿತ್‌ ತಮ್ಮ ಮೇಲೆ ನಿಯಂತ್ರಣ ಹೊಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ರೋಹಿತ್​ಗೆ, ತಮ್ಮ ಗೇಮ್​​ಪ್ಲಾನ್‌ ಬಗ್ಗೆ ಸ್ಪಷ್ಟತೆ ಇದೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಇನಿಂಗ್ಸ್‌ ಆರಂಭಿಸಲು ಆರಂಭಿಸಿದ ನಂತರ ರೋಹಿತ್ ಆಟವೇ, ಬದಲಾಗಿದೆ. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅದ್ಭುತವಾಗಿ ರನ್‌ ಗಳಿಸಿದ್ದಾರೆ. ಆದರೆ ಟೆಸ್ಟ್‌ನಲ್ಲಿ ಹೆಚ್ಚು ಅವಕಾಶ ಲಭ್ಯವಾಗಿರಲಿಲ್ಲ. ಈಗ ತಮ್ಮ ಶ್ರೇಷ್ಠ ಲಯ ಕಂಡುಕೊಂಡಿದ್ದಾರೆ. ತಮ್ಮ ಆಟವನ್ನ ನಿರಂತರ ಸುಧಾರಿಸಿಕೊಳ್ಳುತ್ತಿದ್ದಾರೆ. ತಮ್ಮ ಇನಿಂಗ್ಸ್‌ ಆರಂಭದಲ್ಲಿ ನಿಧಾನವಾಗಿ ಆಟವಾಡಿ ಕ್ರೀಸ್‌ಗೆ ಭದ್ರವಾಗಿ ನೆಲೆನಿಂತ ಬಳಿಕ ರೋಹಿತ್, ಏನು ಮಾಡಬಲ್ಲರು ಎಂಬುದು ಎಲ್ಲರಿಗೂ ಗೊತ್ತು. ವಿಶ್ವದ ಯಾವುದೇ ತಂಡದ ಬೌಲಿಂಗ್‌ ದಾಳಿಯನ್ನು ಧೂಳೀಪಟ ಮಾಡಬಲ್ಲರು.

ವಿಕ್ರಮ್ ರಾಠೋರ್‌, ಬ್ಯಾಟಿಂಗ್ ಕೋಚ್

ಹೌದು..! ಬ್ಯಾಟಿಂಗ್ ಕೋಚ್​ ಹೇಳಿದಂತೆ ರೆಡ್​​ ಬಾಲ್​​ನಲ್ಲಿ ಆರಂಭಿಕನಾಗಿ ಸೆಕೆಂಡ್ ಇನ್ನಿಂಗ್ಸ್​ ಆರಂಭಿಸಿದ ಹಿಟ್​ಮ್ಯಾನ್, ಕಂಪ್ಲೀಟ್ ಬದಲಾಗಿದ್ದಾರೆ. ಟೆಸ್ಟ್​ ಕ್ರಿಕೆಟ್​​ನಲ್ಲಿ ಆರಂಭಿಕನಾಗಿ ಹೊಸ ಕ್ರಾಂತಿಯೇ ಸೃಷ್ಟಿಸಿದ್ದಾರೆ. ಜಸ್ಟ್​ 11 ಇನ್ನಿಂಗ್ಸ್​ಗಳಲ್ಲಿ 1000ಕ್ಕೂ ಅಧಿಕ ರನ್ ಸಿಡಿಸಿರೋ ಹಿಟ್​ಮ್ಯಾನ್, ಈಗ ಇಂಗ್ಲೆಂಡ್ ಪ್ರವಾಸದ ಅಗ್ನಿಪರೀಕ್ಷೆಯಲ್ಲಿ ಗೆದ್ದು, ಟೀಕಾಕಾರರಿಗೆ ಉತ್ತರ ನೀಡಬೇಕಿದೆ.

ಒಟ್ಟಿನಲ್ಲಿ ವಿಶ್ವ ಕ್ರಿಕೆಟ್​ನ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿರುವ ರೋಹಿತ್, ಐತಿಹಾಸಿಕ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ನಲ್ಲಿ ಅಬ್ಬರಿಸಿ ಚಾಂಪಿಯನ್​ಶಿಪ್ ಮುಕುಟಕ್ಕೆ ಟೀಮ್ ಇಂಡಿಯಾ​ ಮುತ್ತಿಡುವಂತೆ ಮಾಡಲಿ ಅನ್ನೋದೇ, ಕ್ರಿಕೆಟ್ ಅಭಿಮಾನಿಗಳ ಆಶಯ.

The post ಇಂಗ್ಲೆಂಡ್​​ನಲ್ಲಿ ನಡೆಯುತ್ತೆ ರೋಹಿತ್ ದರ್ಬಾರ್​- ಟೆಸ್ಟ್​ನಲ್ಲಿ ಕಿವೀಸ್​ ಎದುರು ಹಿಟ್​​ಮ್ಯಾನ್ ಶೋ appeared first on News First Kannada.

Source: newsfirstlive.com

Source link