ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​​ಗೆ, ಕೇವಲ ವಾರವಷ್ಟೆ ಬಾಕಿಯಿದೆ. ಟೆಸ್ಟ್ ಚಾಂಪಿಯನ್​​​​​ ಪಟ್ಟದ ಮೇಲೆ ಕಣ್ಣಿಟ್ಟಿರುವ ಅಗ್ರ ಎರಡು ತಂಡಗಳು, ಮೈದಾನದಲ್ಲಿ ಗೆಲುವಿಗಾಗಿ ಹೋರಾಟ ನಡೆಸೋಕೆ ಸಕಲ ಸಿದ್ಧತೆ ನಡೆಸಿದೆ. ಅತ್ತ ನ್ಯೂಜಿಲೆಂಡ್ ತಂಡ ಟೆಸ್ಟ್ ಸರಣಿ ಆಡಿ ಚಾಂಪಿಯನ್​ಶಿಪ್​​ ಫೈನಲ್​ಗೆ ಸಜ್ಜಾಗುತ್ತಿದ್ರೆ, ಇತ್ತ ಟೀಮ್ ಇಂಡಿಯಾ ಕೂಡ ಸೌತ್ ಹ್ಯಾಂಪ್ಟನ್​ನಲ್ಲಿ ಇನ್ನಿಲ್ಲದ ಕಸರತ್ತನ್ನೇ ನಡೀಸ್ತಿದೆ.

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ ಹಾಗೂ ಇಂಗ್ಲೆಂಡ್ ಪ್ರವಾಸವನ್ನ ಸಿರೀಯಸ್ ಆಗಿ ತೆಗೆದುಕೊಂಡಿರುವ ವಿರಾಟ್ ಪಡೆ, ದಿಗ್ಗಜರ ನೆಗಟಿವ್ ವಿಶ್ಲೇಷಣೆಗಳ ಹೊರತಾಗಿ, ಆಂಗ್ಲರ ನಾಡಲ್ಲಿ ಇತಿಹಾಸ ಸೃಷ್ಟಿಸೋಕೆ ತುದಿಗಾಲಿನಲ್ಲಿ ನಿಂತಿದೆ. ಆದ್ರೆ ಅಗ್ನಿಪರೀಕ್ಷೆಯ ಈ ಪ್ರವಾಸದಲ್ಲಿ ಟೀಮ್ ಇಂಡಿಯಾಕ್ಕೆ ಆರಂಭಿಕರ ಒಂದು ಸ್ಲಾಟ್, ಗೊಂದಲಕ್ಕೆ ಕಾರಣವಾಗಿದೆ. ಇದಕ್ಕೆ ಕಾರಣ ಒಬ್ಬಬ್ಬ ದಿಗ್ಗಜ, ಒಬ್ಬೊಬ್ಬರ ಪರ ಬ್ಯಾಟ್ ಬೀಸುತ್ತಿರುವುದು..! ಈ ವಿಚಾರದಲ್ಲಿ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್, ಪಂಜಾಬಿ ಶುಭ್​​ಮನ್​​ ಗಿಲ್​​ ಪರ ನಿಂತ್ರೆ, ನ್ಯೂಜಿಲೆಂಡ್ ತಂಡದ ಮಾಜಿ ಕೋಚ್​​ ಮೈಕ್ ಹಸನ್, ಕನ್ನಡಿಗ ಮಯಾಂಕ್ ಪರ ಬ್ಯಾಟ್ ಬೀಸಿದ್ದಾರೆ..

ಬಹುಶಃ ತಂಡದ ಆಯ್ಕೆ ಸಮಿತಿ ರೋಹಿತ್ ಶರ್ಮಾ ಹಾಗೂ ಶುಭ್​​​​ಮನ್ ಗಿಲ್​​ರನ್ನ ಆರಂಭಿಕರಾಗಿ ಕಳುಹಿಸುತ್ತದೆ. ಆದರೆ ಮಯಾಂಕ್​​​ರನ್ನ ಪರಿಗಣಿಸಬೇಕು ಎಂದು ನನಗನ್ನಿಸುತ್ತೆ. ಯಾಕೆಂದರೆ ಅಗರ್ವಾಲ್​​​ಗೆ ನ್ಯೂಜಿಲೆಂಡ್ ತಂಡವನ್ನ ನ್ಯೂಜಿಲೆಂಡ್‌ನಲ್ಲಿ ಎದುರಿಸಿದ ಅನುಭವವಿದೆ.
ಮೈಕ್ ಹೆಸನ್, ನ್ಯೂಜಿಲೆಂಡ್ ಮಾಜಿ ಕೋಚ್

ಹೀಗೆ ಟೀಮ್ ಇಂಡಿಯಾ ಆರಂಭಿಕರು ಯಾರು ಆಗ್ತಾರೆ, ಅನ್ನೋ ಚರ್ಚೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಕ್ರಿಕೆಟ್ ಎಕ್ಸ್​ಪರ್ಟ್ ತಮ್ಮ ತಮ್ಮ ಅಭಿಪ್ರಾಯ ಮಂಡಿಸುತ್ತಾ, ರೋಹಿತ್​ಗೆ ಶುಭ್​ಮನ್​ ಗಿಲ್ ಪರ್ಫೆಕ್ಟ್​ ಪೇರ್​​ ಅಂದ್ರೆ, ಮತ್ತೊಬ್ಬರು ಹಿಟ್​ಮ್ಯಾನ್ ಜೊತೆ ಮಯಾಂಕ್ ಇನ್ನಿಂಗ್ಸ್ ಆರಂಭಿಸಿದ್ರೆ, ಸೂಪರ್ ಹಿಟ್ ಆಗುತ್ತೆ ಅಂತ ಹೇಳಿದ್ದಾರೆ..

ರೋಹಿತ್​ಗೆ ಸಾಥ್​​ ನೀಡೋದು ಗಿಲ್ ಅಥವಾ ಮಯಾಂಕ್..?

ಸದ್ಯ ಇಂಗ್ಲೆಂಡ್ ಪ್ರವಾಸಕ್ಕೆ ಪ್ರಕಟಿಸಿರುವ ಭಾರತ ತಂಡದಲ್ಲಿ, ಹಿಟ್​​ಮ್ಯಾನ್ ರೋಹಿತ್ ಶರ್ಮಾ, ಶುಭ್​​ಮನ್​ ಗಿಲ್, ಮಯಾಂಕ್ ಅಗರ್ವಾಲ್ ಜೊತೆಗೆ ಕನ್ನಡಿಗ ಕೆ.ಎಲ್.ರಾಹುಲ್​ ಸ್ಥಾನ ಪಡೆದಿದ್ದಾರೆ. ಆದ್ರೆ ಇವರಲ್ಲಿ ಹಿಟ್​​ಮ್ಯಾನ್ ರೋಹಿತ್ ಜೊತೆ ಇನ್ನಿಂಗ್ಸ್​ ಆರಂಭಿಸುವ ರೇಸ್​​ನಲ್ಲಿ ಶುಭ್​​ಮನ್ ಗಿಲ್, ಮಯಾಂಕ್ ಮುಂದಿದ್ದಾರೆ. ಈ ಇಬ್ಬರ ನಡುವೆಯೇ ಈಗ ತೀವ್ರ ಪೈಪೋಟಿ ನಡೀತಿದೆ.

ಹಿಟ್​​​ಮ್ಯಾನ್ ಜೊತೆ ಇನ್ನಿಂಗ್ಸ್​ ಆರಂಭಿಸಲಿದ್ದಾರೆ ಗಿಲ್..!

ಹಿಟ್​​ಮ್ಯಾನ್ ಜೊತೆ ಶುಭ್​​ಮನ್ ಗಿಲ್ ಇನ್ನಿಂಗ್ಸ್ ಆರಂಭಿಸುವುದು, ಬಹುತೇಕ ಪಕ್ಕ.! ಇದಕ್ಕೆ ಕಾರಣ ಆಸ್ಟ್ರೇಲಿಯಾ ಸರಣಿ..!! ಹೌದು..! ಆಸಿಸ್ ಸರಣಿಯಲ್ಲಿ ಸಿಕ್ಕ ಅವಕಾಶ ಬಳಸಿಕೊಂಡಿದ್ದ ಶುಭ್​ಮನ್​ ಗಿಲ್​, ಸಂಕಷ್ಟ, ಒತ್ತಡದ ಪರಿಸ್ಥಿತಿಯಲ್ಲಿ ಉತ್ತಮ ಪ್ರದರ್ಶನ ಹೊರಹಾಕಿದ್ರು. ಆ ಮೂಲಕ ಬಾರ್ಡರ್​-ಗವಾಸ್ಕರ್ ಟ್ರೋಫಿ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದರು. ಇದರೊಂದಿಗೆ ಕನ್ನಡಿಗ ಮಯಾಂಕ್ ಸ್ಥಾನವನ್ನೇ ಕಸಿದುಕೊಂಡ ಶುಭ್​ಮನ್​​, ಈಗ ಟೀಮ್ ಮ್ಯಾನೇಜ್​​​ಮೆಂಟ್​ನ ಫಸ್ಟ್​ ಚಾಯ್ಸ್ ಓಪನರ್ ಆಗಿದ್ದಾರೆ. ಅಗ್ರಗಣ್ಯ ಬೌಲರ್​ಗಳ ಎದುರು ಗಿಲ್, ನಿರ್ಭೀತಿಯಿಂದ ಬ್ಯಾಟ್​ ಬೀಸಿದ್ದು ಒಂದೆಡೆಯಾದರೆ, ಮಯಾಂಕ್ ಅಗರ್ವಾಲ್​​ಗಿಂತ ಟೆಕ್ನಿಕಲಿ ಶುಭ್​​ಮನ್ ಸೌಂಡೆಡ್ ಬ್ಯಾಟ್ಸ್​ಮನ್ ಅಂತಾನೇ ನಿರೂಪಿಸಿದ್ದರು. ಹಾಗಾಗಿಯೇ ಈಗ ವಿರಾಟ್​ ಆ್ಯಂಡ್ ಮ್ಯಾನೇಜ್​​ಮೆಂಟ್​ ಕಣ್ಣು, ಹೆಚ್ಚು ಗಿಲ್​ ಮೇಲೆನೇ ಇದೆ.

ಆಸಿಸ್ ಪ್ರವಾಸದಲ್ಲಿ ಮಯಾಂಕ್, ಗಿಲ್

ಮಯಾಂಕ್                           ಗಿಲ್
06            ಇನ್ನಿಂಗ್ಸ್           06
78             ರನ್               259
13.00         ಸರಾಸರಿ           51.80
38             ಬೆಸ್ಟ್                91

ಕಾಂಗರೂ ನಾಡಿನ ಬೌನ್ಸಿ & ಫಾಸ್ಟ್​ ಟ್ರ್ಯಾಕ್​ನಲ್ಲಿನ ಶುಭ್​ಮನ್ ನೀಡಿದ್ದ ಈ ಪ್ರದರ್ಶನವೇ ಈಗ ಕೈಹಿಡಿಯಲಿದೆ.

ಮತ್ತೆ ಬೆಂಚ್ ಕಾಯಬೇಕಾಗುತ್ತೆ ಮಯಾಂಕ್

2019ರ ಸ್ವದೇಶದಲ್ಲಿ ಅಬ್ಬರಿಸಿದ್ದ ಮಯಾಂಕ್, 2020ರಲ್ಲಿ ನ್ಯೂಜಿಲೆಂಡ್, ಆಸ್ಟ್ರೇಲಿಯಾ ಪ್ರವಾಸದಲ್ಲಿ ಬ್ಯಾಕ್ ಟು ಬ್ಯಾಕ್ ಫ್ಲಾಪ್ ಪರ್ಫಾಮೆನ್ಸ್ ನೀಡಿದ್ದರು. ಒಂದೆಡೆ ನ್ಯೂಜಿಲೆಂಡ್ ವಿರುದ್ಧದ ಪ್ರದರ್ಶನ ಪರವಾಗಿಲ್ಲ ಎನಿಸಿದರೂ, ಆಸಿಸ್ ಟೂರ್​ನಲ್ಲಿ ಸ್ಥಾನ ಕಳೆದುಕೊಂಡರು. ಹೀಗಾಗಿಯೇ ಸ್ವದೇಶದಲ್ಲಿ ನಡೆದ ಇಂಗ್ಲೆಂಡ್ ಟೆಸ್ಟ್​ ಸರಣಿ ಪೂರ್ತಿ ಬೆಂಚ್​ ಬಿಸಿಯನ್ನೇ ಮಾಡಬೇಕಾಯ್ತು… ಈಗ ಇದೇ ಪರಿಸ್ಥಿತಿ. ಮಯಾಂಕ್​ಗೆ ಇಂಗ್ಲೆಂಡ್ ಪ್ರವಾಸದಲ್ಲೂ ಎದುರಾಗೋದು ಕನ್ಫರ್ಮ್..! ಹಾಗಾಗಿ ಟೀಮ್ ಮ್ಯಾನೇಜ್​​ಮೆಂಟ್, ಶುಭ್​ಮನ್​​ ಗಿಲ್​​ಗೆ ಫಸ್ಟ್ ಪ್ರಿಫರೆನ್ಸ್ ನೀಡಲಿದೆ.

ಒಟ್ನಲ್ಲಿ.. ಇಂಗ್ಲೆಂಡ್​​ ಪ್ರವಾಸದಲ್ಲಿ ಯಾರು ಇನ್ನಿಂಗ್ಸ್​ ಆರಂಭಿಸುತ್ತಾರೆ ಅನ್ನೋ ಪ್ರಶ್ನೆ ಹುಟ್ಟುಹಾಕಿದ್ದು, ಇದಕ್ಕೆ ಟೀಮ್ ಮ್ಯಾನೇಜ್​ಮೆಂಟ್ ಯಾವ ಉತ್ತರ ನೀಡುತ್ತೆ ಅನ್ನೋದು ಕಾದುನೋಡಬೇಕಷ್ಟೇ..!

The post ಇಂಗ್ಲೆಂಡ್​ ಟೂರ್​​ನಲ್ಲಿ ಕನ್ನಡಿಗ ಮಯಾಂಕ್ ಅಗರ್ವಾಲ್​ಗೆ ಇಲ್ಲ ಸ್ಥಾನ..?​​ appeared first on News First Kannada.

Source: newsfirstlive.com

Source link

Leave a comment