ಇಂಗ್ಲೆಂಡ್ ಅಂಡರ್-19 ತಂಡದಲ್ಲಿ ಟೀಂ ಇಂಡಿಯಾ ಮಾಜಿ ವೇಗಿ ಆರ್​ಪಿ ಸಿಂಗ್ ಪುತ್ರನಿಗೆ ಸ್ಥಾನ | Indian former cricketer rp singh son selected in england under 19 team


80ರ ದಶಕದಲ್ಲಿ ಭಾರತ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದ ಕ್ರಿಕೆಟಿಗ ಆರ್.ಪಿ.ಸಿಂಗ್ ಅವರ ಪುತ್ರ ಹ್ಯಾರಿ ಸಿಂಗ್ ಇಂಗ್ಲೆಂಡ್ ಅಂಡರ್-19 ತಂಡಕ್ಕೆ ಆಯ್ಕೆಯಾಗಿದ್ದಾರೆ.

80ರ ದಶಕದಲ್ಲಿ ಭಾರತ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದ ಕ್ರಿಕೆಟಿಗ ಆರ್.ಪಿ.ಸಿಂಗ್ ಅವರ ಪುತ್ರ ಹ್ಯಾರಿ ಸಿಂಗ್ ಇಂಗ್ಲೆಂಡ್ ಅಂಡರ್-19 ತಂಡಕ್ಕೆ ಆಯ್ಕೆಯಾಗಿದ್ದಾರೆ. ಶ್ರೀಲಂಕಾ ವಿರುದ್ಧದ ಸರಣಿಗೆ ಅವರು ಇಂಗ್ಲೆಂಡ್ ತಂಡದಲ್ಲಿ ಆಯ್ಕೆಯಾಗಿದ್ದಾರೆ. ಆರ್‌ಪಿ ಸಿಂಗ್ ಉತ್ತರ ಪ್ರದೇಶದವರಾಗಿದ್ದು ಭಾರತಕ್ಕಾಗಿ ಕೆಲವು ODI ಪಂದ್ಯಗಳನ್ನು ಆಡಿದ್ದಾರೆ. ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನವನ್ನು ಹೆಚ್ಚು ಸಮಯ ಆಡದ ನಂತರ, ಆರ್‌ಪಿ ಸಿಂಗ್ ಅವರು ಇಂಗ್ಲೆಂಡ್‌ಗೆ ಹೋಗಿ ಅಲ್ಲಿ ಕೋಚಿಂಗ್ ಕೋರ್ಸ್ ಮುಗಿಸಿ, ಕ್ಲಬ್ ಕ್ರಿಕೆಟ್‌ನಲ್ಲಿ ತರಬೇತುದಾರರಾಗಿ ಕೆಲಸ ಮಾಡಲು ಪ್ರಾರಂಭಿಸಿದರು.

ಆರ್‌ಪಿ ಸಿಂಗ್ ಅವರ ಮಗ ಮತ್ತು ಮಗಳು ಇಂಗ್ಲೆಂಡ್‌ನಲ್ಲಿ ಬೆಳೆದಿದ್ದು, ಇಬ್ಬರಿಗೂ ಕ್ರಿಕೆಟ್‌ನಲ್ಲಿ ಆಸಕ್ತಿ ಇದೆ. ಹೀಗಾಗಿ ಆರ್​ಪಿ ಸಿಂಗ್ ಅವರ ಮಗ ಲಂಕಾಶೈರ್‌ ತಂಡದಲ್ಲಿ ಸ್ಥಾನ ಪಡೆದಿದ್ದಾನೆ. ಆರ್‌ಪಿ ಸಿಂಗ್ ಅವರ ಪುತ್ರಿ ಲಂಕಾಶೈರ್‌ನ 19 ವರ್ಷದೊಳಗಿನವರ ತಂಡವನ್ನೂ ಪ್ರತಿನಿಧಿಸಿದ್ದಾರೆ. ಆದರೆ ನಂತರ ಅವರು ತಮ್ಮ ಅಧ್ಯಯನದತ್ತ ಗಮನ ಹರಿಸಲು ನಿರ್ಧರಿಸಿ ಕ್ರಿಕೆಟ್ ತೊರೆದಿದ್ದಾರೆ.

ಹ್ಯಾರಿ ಆಲ್ ರೌಂಡರ್

ಆರ್‌ಪಿ ಸಿಂಗ್ ಅವರ ಮಗ ಇಂಗ್ಲೆಂಡ್ ರಾಷ್ಟ್ರೀಯ ತಂಡದೊಂದಿಗೆ ಆಡಲು ಸಮಯ ಹತ್ತಿರವಾದಂತೆ ಕಾಣುತ್ತಿದೆ. ಅವರ ಮಗ ಹ್ಯಾರಿ ಬಗ್ಗೆ ಮಾತನಾಡುವುದಾದರೆ, ಆರ್‌ಪಿ ಸಿಂಗ್ ದಿ ಇಂಡಿಯನ್ ಎಕ್ಸ್‌ಪ್ರೆಸ್‌ ಜೊತೆ ಮಾತನಾಡಿದ್ದು, ತಮ್ಮ ಮಗ ಓಪನರ್ ಆಗಿದ್ದು, ಅವನು ಆಫ್‌ಸ್ಪಿನ್ ಕೂಡ ಮಾಡುವ ಸಾಮಥ್ಯ್ರ ಹೊಂದಿದ್ದಾನೆ ಎಂದು ಹೇಳಿದರು. ಆರ್ಪಿ ಪ್ರಕಾರ, ಹ್ಯಾರಿ ಆರಂಭದಲ್ಲಿ ವೇಗದ ಬೌಲಿಂಗ್ನಲ್ಲಿ ಆಸಕ್ತಿ ಹೊಂದಿದ್ದರು, ಆದರೆ ನಂತರ ನೀನು ಬ್ಯಾಟಿಂಗ್ ಕಡೆ ಗಮನಹರಿಸು ಎಂದು ಸ್ವತಃ ಆರ್​ಪಿ ಸಿಂಗ್ ಅವರೆ ಹೇಳಿದರಂತೆ. ಇಂತಹ ಪರಿಸ್ಥಿತಿಯಲ್ಲಿ ವೇಗದ ಬೌಲಿಂಗ್ ಮಾಡಲು ಕಷ್ಟವಾದರೆ, ಆಲ್ ರೌಂಡರ್ ಆಗಲು ಸ್ಪಿನ್ ಬೌಲಿಂಗ್​ನತ್ತ ಗಮನ ಹರಿಸುವಂತೆ ಸೂಚಿಸಿದರಂತೆ.

ಕ್ರಿಕೆಟ್​ನಲ್ಲಿ ಇಬ್ಬರು ಆರ್​ಪಿ ಸಿಂಗ್

TV9 Kannada


Leave a Reply

Your email address will not be published. Required fields are marked *