ಇಂಗ್ಲೆಂಡ್ ಪ್ರವಾಸಕ್ಕಾಗಿ ಭರ್ಜರಿ ಸಿದ್ಧತೆ.. ಜಿಮ್​ನಲ್ಲಿ ಬೆವರಿಳಿಸಿದ ವನಿತೆಯರು

ಇಂಗ್ಲೆಂಡ್ ಪ್ರವಾಸಕ್ಕಾಗಿ ಭರ್ಜರಿ ಸಿದ್ಧತೆ.. ಜಿಮ್​ನಲ್ಲಿ ಬೆವರಿಳಿಸಿದ ವನಿತೆಯರು

ಇಂಗ್ಲೆಂಡ್​​ ಪ್ರವಾಸದ ಹಿನ್ನೆಲೆಯಲ್ಲಿ ಟೀಮ್​ ಇಂಡಿಯಾ ಮಹಿಳೆಯರ ತಂಡ ಕ್ವಾರಂಟೀನ್​ಗೆ ಒಳಗಾಗಿದೆ. ಮುಂಬೈನ ಖಾಸಗಿ ಹೋಟೆಲ್​ನಲ್ಲಿ ಟೀಮ್​ ಇಂಡಿಯಾ ವನಿತೆಯರು 8 ದಿನಗಳ ಕಠಿಣ ಕ್ವಾರಂಟೀನ್​ಗೆ ಒಳಗಿದ್ದಾರೆ. ಈ ಕಠಿಣ ಕ್ವಾರಂಟೀನ್​ ಅವಧಿಯಲ್ಲಿ ವನಿತೆಯರ ಪಡೆ ಜಿಮ್​ನಲ್ಲಿ ಬೆವರು ಹರಿಸಿದೆ. ಬಿಸಿಸಿಐ ವುಮೆನ್ಸ್​ ತಂಡದ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಮಿಥಾಲಿ ರಾಜ್​ ಪಡೆ ಜಿಮ್​ನಲ್ಲಿ ವರ್ಕೌಟ್​​​ ಮಾಡುತ್ತಿರುವ ವಿಡಿಯೋವನ್ನ ಪೋಸ್ಟ್​ ಮಾಡಿದೆ.

ಕ್ವಾರಂಟೀನ್​ ಅವಧಿಯಲ್ಲಿ ತಂಡ 3 ಬಾರಿ ಕೊರೊನಾ ಪರೀಕ್ಷೆಗೆ ಒಳಗಾಗಲಿದ್ದು, ಆ ಮೂರು ಬಾರಿಯ ಟೆಸ್ಟ್​ನಲ್ಲಿ ನೆಗೆಟಿವ್​ ರಿಪೋರ್ಟ್​ ಬಂದ ಬಳಿಕ ತಂಡ ಇಂಗ್ಲೆಂಡ್​ಗೆ ಪ್ರಯಾಣಿಸಲಿದೆ. ಮಹಿಳೆಯರ ತಂಡದವರು ಜೂನ್ 16ರಿಂದ ನಡೆಯಲಿರುವ ಏಕೈಕ ಟೆಸ್ಟ್ ಪಂದ್ಯದೊಂದಿಗೆ ಅಭಿಯಾನ ಆರಂಭಿಸಲಿದ್ದಾರೆ. ಟೆಸ್ಟ್‌ ನಂತರ ತಲಾ ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ಟಿ20 ಸರಣಿಗಳು ನಡೆಯಲಿವೆ. ಟೆಸ್ಟ್​​ ತಂಡಕ್ಕೆ ಮಿಥಾಲಿ ರಾಜ್​ ಸಾರಥ್ಯ ವಹಿಸಲಿದ್ರೆ, ಏಕದಿನ ಹಾಗೂ ಟಿ20 ಸರಣಿಯಲ್ಲಿ ಹರ್ಮನ್​ಪ್ರೀತ್​ ಕೌರ್​ ತಂಡವನ್ನ ಮುನ್ನಡೆಸಲಿದ್ದಾರೆ.

The post ಇಂಗ್ಲೆಂಡ್ ಪ್ರವಾಸಕ್ಕಾಗಿ ಭರ್ಜರಿ ಸಿದ್ಧತೆ.. ಜಿಮ್​ನಲ್ಲಿ ಬೆವರಿಳಿಸಿದ ವನಿತೆಯರು appeared first on News First Kannada.

Source: newsfirstlive.com

Source link