ಭಾರತ – ಪಾಕಿಸ್ತಾನ ನಡುವಿನ ಪಂದ್ಯದಂತೆ, ಮತ್ತೊಂದು ಹೈವೋಲ್ಟೇಜ್​ ಪಂದ್ಯ ಅಂದರೆ, ಅದು ಇಂಡೋ – ಇಂಗ್ಲೆಂಡ್​ ಕದನ. ಈ ದಾಯಾದಿ ತಂಡಗಳ ನಡುವೆ ಕ್ರಿಕೆಟ್ ಸರಣಿಯನ್ನ ಕಣ್ತುಂಬಿಕೊಳ್ಳಲು, ಅಭಿಮಾನಿಗಳು ತುದಿಗಾಲಲ್ಲಿ ನಿಂತಿರುತ್ತಾರೆ..! ಸರಣಿ ಪ್ರಾರಂಭಕ್ಕೆ ಹಲವು ತಿಂಗಳುಗಳೇ ಇದ್ದರೂ, ಅದಾಗಲೇ ಆಯಾ ದೇಶಗಳ ಫ್ಯಾನ್ಸ್​ ಮಧ್ಯೆ ವಾರ್​ ಸ್ಟಾರ್ಟ್​ ಆಗಿರುತ್ತೆ. ಇದೀಗ ಭಾರತ-ಇಂಗ್ಲೆಂಡ್​ ಟೆಸ್ಟ್​ ಸರಣಿಗೂ ಮುನ್ನ ಆಗಿರೋದು, ಅದೇ..! ಸರಣಿ ಆರಂಭಕ್ಕೆ ಇನ್ನೂ ಎರಡು ತಿಂಗಳು ಬಾಕಿ ಇರೋವಾಗಲೇ ಫ್ಯಾನ್ಸ್​ ಮಧ್ಯೆ ಜಟಾಪಟಿ ನಡೆದಿದೆ.

ಆಗಸ್ಟ್​ 4ರಿಂದ ಇಂಡೋ-ಇಂಗ್ಲೆಂಡ್​​ ಕದನ ಶುರು..!
ಆಗಸ್ಟ್​​ 4ರಿಂದ ಪ್ರಾರಂಭವಾಗುವ 5 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಭಾರತ ಮತ್ತು ಇಂಗ್ಲೆಂಡ್​​ ತಂಡಗಳು ಪರಸ್ಪರ ಸೆಣಸಲಿವೆ. ಈ ಮೊದಲು ಫೆಬ್ರವರಿ-ಮಾರ್ಚ್​​​ನಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ಇಂಗ್ಲೆಂಡ್,​​ ಮೂರು ಫಾರ್ಮೆಟ್​ನಲ್ಲೂ ಹೀನಾಯ ಸೋಲು ಕಂಡಿತ್ತು. ಇದೀಗ ಭಾರತ, ಇಂಗ್ಲೆಂಡ್​ ಪ್ರವಾಸಕ್ಕೆ ಸಿದ್ಧಗೊಂಡಿದ್ದು, ಈ ಟೆಸ್ಟ್​ ಸರಣಿ ಗೆದ್ದು ಇಂಗ್ಲೆಂಡ್​ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.

ಪಾಕ್​ನಂತೆ ಇಂಗ್ಲೆಂಡ್​ ಕೂಡ ಬದ್ಧ ವೈರಿ..!
ಪಾಕಿಸ್ತಾನ ಕೇವಲ ಕ್ರಿಕೆಟ್​​ ಮಾತ್ರವಲ್ಲ, ಬೇರೆ ಯಾವುದೇ ವಿಷಯಕ್ಕೆ ಬಂದರೂ ಭಾರತಕ್ಕೆ ಸಾಂಪ್ರಾದಾಯಿಕ ಎದುರಾಳಿಯೇ. ಹಾಗೆಯೇ ಭಾರತವನ್ನ 200 ವರ್ಷಗಳ ಕಾಲ ಆಳ್ವಿಕೆ ನಡೆಸಿದ ಇಂಗ್ಲೆಂಡ್​ ಕೂಡ, ಬದ್ಧ ವೈರಿ ತಂಡವೇ ಆಗಿದೆ. ಆದರೆ ಇಂಗ್ಲೆಂಡ್​​ಗಿಂತ ಪಾಕಿಸ್ತಾನದ ಎದುರೇ ಹೈವೋಲ್ಟೇಜ್​ ತುಸು ಜಾಸ್ತಿ ಇರುತ್ತೆ..!!

ಭಾರತೀಯರನ್ನು ಕೆಣಕ್ಕಿದ ಇಂಗ್ಲೆಂಡ್​ ಫ್ಯಾನ್ಸ್​..!
ಉಭಯ ತಂಡಗಳ ನಡುವೆ ಯಾವ ಟೂರ್ನಿ ನಡೆದ್ರೂ, ಅದು ಎರಡು ದೇಶಗಳಿಗೂ ಪ್ರತಿಷ್ಠೆಯ ಕಣವೇ ಆಗಿರುತ್ತೆ. ಸದ್ಯ ಸಿರೀಸ್​ ಪ್ರಾರಂಭಕ್ಕೂ ಮುನ್ನವೇ ಟೀಮ್​ ಇಂಡಿಯಾ ಮತ್ತು ಇಂಗ್ಲೆಂಡ್​ ಅಭಿಮಾನಿಗಳ ಟ್ವೀಟ್​​ ವಾರ್​​ ಶುರುವಾಗಿದೆ. ಯಾವುದೇ ಸರಣಿ ಸೋತರೂ ತಾಳ್ಮೆಯ ನಡೆ ಅನುಸರಿಸುವ ಭಾರತೀಯ ಅಭಿಮಾನಿಗಳು, ಬೇರೊಂದು ತಂಡವನ್ನು ಗೇಲಿ ಮಾಡೋಕೆ ಹೋಗೋದಿಲ್ಲ.!! ಆದರೆ ಇಂಗ್ಲೆಂಡ್​ ಅಭಿಮಾನಿಗಳು, ಭಾರತೀಯ ಅಭಿಮಾನಿಗಳ ತಾಳ್ಮೆ ಪರೀಕ್ಷೆ ನಡೆಸಿ, ತಕ್ಕ ಶಾಸ್ತಿ ಮಾಡಿಸಿಕೊಂಡಿದ್ದಾರೆ.

ಒಂದಷ್ಟು ದಿನ ತಣ್ಣಗಿದ್ದ ಈ ವಾರ್, ಪುನಃ ಕೇಳಿ ಬರುತ್ತಿರೋದಕ್ಕೆ ಕಾರಣ ಒಂದು ಟ್ವೀಟ್. ಹೌದು, ಇಂಗ್ಲೆಂಡ್​ ಬಾರ್ಮಿ ಆರ್ಮಿ ಮಾಡಿದ ಒಂದೇ ಒಂದು ಟ್ವೀಟ್, ಭಾರತ ಹಾಗೂ ಇಂಗ್ಲೆಂಡ್​​ ಅಭಿಮಾನಿಗಳ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ. ಅದೇನೆಂದ್ರೆ ಇಂಗ್ಲೆಂಡ್​ನ​ ಬಾರ್ಮಿ ಆರ್ಮಿ, ತನ್ನ ಟ್ವಿಟ್​​ನಲ್ಲಿ ವಿರಾಟ್​​ ಕೊಹ್ಲಿ, ಅಜಿಂಕ್ಯಾ ರಹಾನೆಯನ್ನ ಜಿಮ್ಮಿ ಆ್ಯಂಡರ್ಸನ್​​ ಇನ್​​​ಸ್ವಿಂಗ್​ ಮೂಲಕ ಔಟ್​ ಮಾಡಿದ್ದಾರೆ. ಭಾರತೀಯ ಅಭಿಮಾನಿಗಳಿಗೆ ನಾವು ಹೇಳುವುದೆಂದರೆ, ನೋಡಿ ನಮ್ಮ ಆ್ಯಂಡರ್​ಸನ್ ಪವರ್​ ಅಂತ. ಇದೇ ನೋಡಿ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಸದ್ಯ ಇಂಗ್ಲೆಂಡ್​ ಟ್ರೋಲಿಗರನ್ನ ಟೀಮ್​ ಇಂಡಿಯಾ ಫ್ಯಾನ್ಸ್​, ಸರಿಯಾಗಿಯೇ ಜಾಡಿಸಿದ್ದಾರೆ. ಇಂಗ್ಲೆಂಡ್​ನ​ ಬಾರ್ಮಿ ಆರ್ಮಿ ಪೋಸ್ಟ್​ ನೋಡಿದ್ದ ಟೀಮ್​ ಇಂಡಿಯಾ ಫ್ಯಾನ್ಸ್​, ನಾಜೂಕಾಗಿ ಆಂಗ್ಲರನ್ನ​​ ತರಾಟೆ ತೆಗೆದುಕೊಂಡಿದ್ದಾರೆ. ಆ್ಯಂಡರ್​ಸನ್​ಗೆ ರಿಷಭ್​ ಪಂತ್​​ ರಿವರ್ಸ್​ ಸ್ವೀಪ್​ ಶಾಟ್​​ ಬಾರಿಸಿರೋದು ಮರೆತಿಲ್ಲ ಎಂದು ಭಾವಿಸುತ್ತೇನೆ ಎಂದು, ಖಡಕ್​​ ರೀಪ್ಲೆ ಕೊಟ್ಟಿದ್ದಾರೆ. ಹಾಗೆಯೇ ಕೆಲವರು ಆ್ಯಂಡರ್​ಸನ್​ಗೆ ವಯಸ್ಸಾಗಿದೆ ಬಿಟ್ಟು ಬಿಡ್ರೋ ಎಂದಿದ್ರೆ, ಇನ್ನು ಕೆಲವರು ಸೆಪ್ಟೆಂಬರ್​ ಒಳಗೆ ಈ ಪರ್ಟಿಕ್ಯುಲರ್​ ಟ್ವೀಟ್​ ಉಲ್ಟಾ ಆಗುತ್ತೆ ಎಂದಿದ್ದಾರೆ. ಇನ್ನು ಕೆಲವರು, ಆಟವನ್ನು ಆಟದ ರೀತಿ ನೋಡಿ, ಫ್ಯಾನ್ಸ್​​ ಮಧ್ಯೆ ತಂದಿಕ್ಕುವ ಕೆಲಸ ಮಾಡಬೇಡಿ ಅಂತ ಬುದ್ದಿ ಹೇಳಿದ್ದಾರೆ.

ನೋಡಿದ್ರಲ್ಲ ಟೀಮ್​ ಇಂಡಿಯಾ ಫ್ಯಾನ್ಸ್​ ಸುಮ್ನಿದ್ರು, ಕೆರಳಿಸುವಂತೆ ಟ್ರೋಲ್​​ ಮಾಡಿರೋದನ್ನ. ಅದೇನೆ ಇರಲಿ… ಕ್ರಿಕೆಟ್​ನಲ್ಲಿ ಸೋಲು-ಗೆಲುವು ಕಾಮನ್. ಇವತ್ತು ಗೆದ್ದವರು ನಾಳೆ ಸೋಲ್ತಾರೆ, ನಾಳೆ ಸೋತವರು ಇನ್ನೊಂದಿನ ಗೆಲ್ತಾರೆ. ಆದರೆ ಫ್ಯಾನ್ಸ್​ ಈ ಒಬ್ಬರನ್ನು ಟ್ರೋಲ್​ ಮಾಡ್ಕೊಂಡು ರೊಚ್ಚಿಗೇಳೋದು ಸರಿಯಲ್ಲ..! ಇದು ಮುಂದಿನ ಅನಾಹುತಗಳಿಗೂ ಕಾರಣವಾಗಬಹುದು. ಹಾಗಾಗಿ ಎಚ್ಚರಿಕೆ ವಹಿಸೋದು ಒಳ್ಳೆಯದು.

The post ಇಂಗ್ಲೆಂಡ್ ಫ್ಯಾನ್ಸ್​ಗೆ ಬಿಸಿ ಮುಟ್ಟಿಸಿದ ಭಾರತೀಯಾ ಕ್ರಿಕೆಟ್ ಅಭಿಮಾನಿಗಳು..! appeared first on News First Kannada.

Source: newsfirstlive.com

Source link