– ಗಿಲ್ ಬಳಿಕ ಮತ್ತಿಬ್ಬರಿಗೆ ಗಾಯ

ಲಂಡನ್: ಇಂಗ್ಲೆಂಡ್ ಸರಣಿ ಆರಂಭಕ್ಕೆ ಇನ್ನೇನೂ ಕೆಲವೇ ದಿನಗಳು ಬಾಕಿ ಉಳಿದುಕೊಂಡಿದೆ. ಈ ನಡುವೆ ಟೀಂ ಇಂಡಿಯಾಗೆ ಗಾಯದ ಸಮಸ್ಯೆ ಕಾಡುತ್ತಿದೆ. ಇದೀಗ ವಾಷಿಂಗ್ಟನ್ ಸುಂದರ್ ಮತ್ತು ಅವೇಶ್ ಖಾನ್ ಗಾಯದ ಸಮಸ್ಯೆಯಿಂದಾಗಿ ಸರಣಿಯಿಂದ ಹೊರಬಿದ್ದಿದ್ದಾರೆ.

ಕೆಲ ದಿನಗಳ ಹಿಂದೆ ಯುವ ಆರಂಭಿಕ ಆಟಗಾರ ಶುಭಮನ್ ಗಿಲ್ ಗಾಯದಿಂದಾಗಿ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದರು. ಇದೀಗ ಆಲ್‍ರೌಂಡರ್ ವಾಷಿಂಗ್ಟನ್ ಸುಂದರ್ ಮತ್ತು ವೇಗಿ ಅವೇಶ್ ಖಾನ್ ಕೂಡ ಸರಣಿಯಿಂದ ಹೊರಗುಳಿಯುವಂತೆ ಆಗಿದೆ.

ವಾಷಿಂಗ್ಟನ್ ಸುಂದರ್ ಮತ್ತು ವೇಗಿ ಅವೇಶ್ ಖಾನ್ ಅಭ್ಯಾಸ ಪಂದ್ಯದಲ್ಲಿ ಅಡುವ ವೇಳೆ ಇಬ್ಬರಿಗೂ ಕೂಡ ಕೈ ಬೆರಳಿನ ಗಾಯವಾಗಿದೆ ಎಂದು ವರದಿಯಾಗಿದೆ. ಅದರಲ್ಲೂ ಆವೇಶ್ ಖಾನ್ ಅವರ ಕೈ ಬೆರಳು ಮುರಿತಕ್ಕೆ ಒಳಗಾಗಿದೆ ಎಂದು ಮೂಲಗಳು ತಿಳಿಸಿವೆ. ಅಭ್ಯಾಸ ಪಂದ್ಯದಲ್ಲಿ ಸುಂದರ್ ಹಾಗೂ ಆವೇಶ್ ಖಾನ್ ಜೊತೆಯಾಗಿ ಕಂಟ್ರಿ ಇಲೆವೆನ್ ತಂಡದ ಪರ ಆಡಿದ್ದರು. ಈ ವೇಳೆ ಗಾಯವಾಗಿದೆ. ಈ ಮೂಲಕ ಭಾರತದ 3 ಮಂದಿ ಆಟಗಾರರು ಸರಣಿಯ ಆರಂಭಕ್ಕೂ ಮೊದಲೇ ತಂಡದಿಂದ ಹೊರ ಬಿದ್ದಂತಾಗಿದೆ. ಇದನ್ನೂ ಓದಿ: ಹಿಟ್‍ಮ್ಯಾನ್ ಹಸ್ತಾಕ್ಷರ ಹಾಕಿಸಿಕೊಂಡ ಫ್ಯಾನ್‍ಬಾಯ್ ಅವೇಶ್ ಖಾನ್

ಬಿಸಿಸಿಐ ಶುಭಮನ್ ಗಿಲ್ ಅವರ ಜಾಗಕ್ಕೆ ಬದಲಿ ಆಟಗಾರನನ್ನು ಇಂಗ್ಲೆಂಡ್ ಕಳುಹಿಸಿಲ್ಲ. ಇದೀಗ ಈ ಇಬ್ಬರು ಆಟಗಾರರು ಕೂಡ ಗಾಯಲು ಆಗಿರುವುದರಿಂದ ಬದಲಿ ಆಟಗಾರರನ್ನು ಕಳುಹಿಸಲಿದೆಯೆ ಎಂಬುದನ್ನು ಕಾದು ನೋಡಬೇಕಾಗಿದೆ.

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯ ಆಗಸ್ಟ್ 4ರಂದು ನಾಟಿಂಗ್ ಹ್ಯಾಮ್‍ನ ಟ್ರೆಂಟ್ ಬ್ರಿಡ್ಜ್ ನಲ್ಲಿ ಆರಂಭಗೊಳ್ಳಲಿದೆ. ಇದನ್ನೂ ಓದಿ: 515 ಓವರ್ ಎಸೆದ ಬಳಿಕ ಸಣ್ಣ ತಪ್ಪು ಮಾಡಿದ ಭುವಿ

The post ಇಂಗ್ಲೆಂಡ್ ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾಗೆ ಗಾಯದ ಬರೆ appeared first on Public TV.

Source: publictv.in

Source link