ವಾಷಿಂಗ್ಟನ್: ವಿಶ್ವಾದ್ಯಂತ ಇಂದು ಸಾಮಾಜಿಕ ಜಾಲತಾಣ, ಸರ್ಕಾರ ಮತ್ತು ಕೆಲ ಪ್ರಮುಖ ಸುದ್ದಿ ವೆಬ್‍ಸೈಟ್‍ಗಳು ಡೌನ್ ಆಗಿತ್ತು.

ಅಮೆರಿಕ ಮೂಲದ ಕ್ಲೌಡ್ ಕಂಪ್ಯೂಟಿಂಗ್ ಸೇವಾ ಪೂರೈಕೆದಾರ ಫಾಸ್ಟ್ಲಿಯಲ್ಲಿನ ಸಿಡಿಎನ್(Content Delivery Network) ದೋಷದಿಂದ ಹಲವು ವೆಬ್‍ಸೈಟ್‍ಗಳಿಗೆ ಸಮಸ್ಯೆಯಾಗಿತ್ತು. ಇದನ್ನೂ ಓದಿ: ವರ್ಕ್ ಫ್ರಂ ಹೋಮ್- ಇಂಟರ್ನೆಟ್‌ಗಾಗಿ ಗುಡ್ಡ ಹತ್ತಿ ಟೆಂಟ್ ಹಾಕಿದ ಯುವತಿ

ಈ ಬಗ್ಗೆ ಪ್ರತಿಕ್ರಿಯಿಸಿದ ಫಾಸ್ಟ್ಲಿ ಜಾಗತಿಕವಾಗಿ ನಮ್ಮ ಪಿಒಪಿಗಳಲ್ಲಿ ಸಮಸ್ಯೆ ಕಾರಣವಾಗಿದ್ದ ಸರ್ವಿಸ್ ಕಾನ್ಫಿಗರೇಷನ್ ನನ್ನು ಗುರುತಿಸಿದ್ದೇವೆ ಮತ್ತು ಆ ಕಾನ್ಫಿಗರೇಷನ್ ಅನ್ನು ನಿಷ್ಕ್ರಿಯಗೊಳಿಸಿದ್ದೇವೆ. ನಮ್ಮ ಜಾಗತಿಕ ನೆಟ್‍ವರ್ಕ್ ಮತ್ತೆ ಸರಿಯಾಗುತ್ತಿದೆ ಎಂದು ಹೇಳಿದೆ.

ಅಮೆಜಾನ್, ರೆಡಿಟ್, ಫೈನಾನ್ಷಿಯಲ್ ಟೈಮ್ಸ್, ದಿ ಗಾರ್ಡಿಯನ್, ನ್ಯೂಯಾರ್ಕ್ ಟೈಮ್ಸ್, ಬ್ಲೂಮ್‍ಬರ್ಗ್ ನ್ಯೂಸ್, ಇಂಗ್ಲೆಂಡ್ ಸರ್ಕಾರ ಸೇರಿದಂತೆ ಸುದ್ದಿ ಸಂಸ್ಥೆಗಳು ನಿರ್ವಹಿಸುವ ವೆಬ್‍ಸೈಟ್‍ಗಳು ಡೌನ್ ಆಗಿತ್ತು.

The post ಇಂಟರ್ನೆಟ್‌ ನಿಲುಗಡೆ – ವಿಶ್ವದ ಟಾಪ್ ವೆಬ್‍ಸೈಟ್‍ಗಳು ಡೌನ್ appeared first on Public TV.

Source: publictv.in

Source link