ಬೆಂಗಳೂರು: ಇಂಡಸ್ ಟಿಎಂಟಿ ಸಂಸ್ಥೆಯ ಸ್ಥಾಪಕ ಎಸ್.ಆರ್.ಸತಾನಂತಮ್ ಇಂದು ವಿಧಿವಶರಾಗಿದ್ದಾರೆ.

ಅವರಿಗೆ 81 ವರ್ಷವಾಗಿತ್ತು, ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಇಂದು ಕೊನೆಯುಸಿರೆಳೆದಿದ್ದಾರೆ. ಇಂಡಸ್ ಸ್ಟೀಲ್ ಸಂಸ್ಥೆಯನ್ನ ಸ್ಥಾಪಿಸಿ ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದರು.

ಅಲ್ಲದೇ ಅನೇಕ ಸಮಾಜಮುಖಿ ಸೇವೆಯ ಚಟುವಟಿಕೆಗಳಲ್ಲಿ ತಮ್ಮನ್ನ ತೊಡಗಿಸಿಕೊಂಡು ಜನಮೆಚ್ಚುಗೆಗೆ ಪಾತ್ರರಾಗಿದ್ದರು. ಸತಾನಂತಮ್ ಅಗಲಿಕೆಗೆ ಗಣ್ಯರು ಕಂಬನಿ ಮಿಡಿದಿದ್ದಾರೆ.

The post ಇಂಡಸ್ ಟಿಎಂಟಿ ಸಂಸ್ಥೆಯ ಸ್ಥಾಪಕ ಎಸ್.ಆರ್.ಸತಾನಂತಮ್ ನಿಧನ appeared first on News First Kannada.

Source: newsfirstlive.com

Source link