ಇಂಡಿಯಾ ಬುಕ್ ಆಫ್ ರೆಕಾರ್ಡ್​ಗೆ ಸೇರಿದ ಶಾಲೆಯ ಮೆಟ್ಟಿಲನ್ನು ಹತ್ತದ ಬೆಂಗಳೂರಿನ ಬಾಲಕ | Bengaluru kid read Maximum English words in 5 minutes got place in India Book of Record


ಇಂಡಿಯಾ ಬುಕ್ ಆಫ್ ರೆಕಾರ್ಡ್​ಗೆ ಸೇರಿದ ಶಾಲೆಯ ಮೆಟ್ಟಿಲನ್ನು ಹತ್ತದ ಬೆಂಗಳೂರಿನ ಬಾಲಕ

ಕುಶಾಲ ಸಾಯಿ

5 ನಿಮಿಷದಲ್ಲಿ 438 ಶಬ್ದಗಳನ್ನು ಓದುವ ಮೂಲಕ ಬೆಂಗಳೂರಿನ ಕ್ವೀನ್ಸ್ ರಸ್ತೆಯ ನಿವಾಸಿ ಬಾಲಕ ಕುಶಾಲ್ ಸಾಯಿ ಇಂಡಿಯಾ ಬುಕ್ ಆಫ್ ರೆಕಾರ್ಡ್​ಗೆ ಸೇರ್ಪಡೆಗೊಂಡಿದ್ದಾನೆ.

ಕಲಿಕೆಗೆ ಮತ್ತು ಸಾಧನೆಗೆ ವಯಸ್ಸಿನ ಮಿತಿ ಇಲ್ಲ.  ಯಾವ ವಸ್ಸಲ್ಲೂ ಕೂಡ ಸಾಧನೆಯನ್ನು ಮಾಡಬಹುದು.  ನಮ್ಮ ಕರ್ನಾಟಕದ ಬೆಂಗಳೂರಿನ ಬಾಲಕ ನ್ಯಾಷನಲ್ ಇಂಟರ್ ನ್ಯಾಷನಲ್ ಮಟ್ಟದಲ್ಲಿ ಹೆಸರು ಮಾಡಿದ್ದಾನೆ. ನೆನಪಿಡುವ ಸಂಗತಿ ಎಂದರೆ ಬಾಲಕ ಇನ್ನು ಶಾಲೆಯ ಮೆಟ್ಟಿಲನ್ನು ಹತ್ತಿಲ್ಲ. ಆದರೆ ಅವನ ಸಾಧನೆಗೆ  ಸಾಕಷ್ಟು ಪ್ರಶಸ್ತಿಗಳ ಹರಿದು ಬಂದಿವೆ.  ಬಾಲಕನ ಮನೆಯಲ್ಲಿ ಎಲ್ಲಿ ನೋಡಿದರೂ ಅಲ್ಲಿ ಪ್ರಶಸ್ತಗಳು ಕಾಣುತ್ತವೆ. ಹಾಗಿದ್ದರೆ ಯಾರು ಆ ಬಾಲಕ ಇಲ್ಲದೆ ಆತನಕ ಕುರಿತು ಕಿರು ಪರಿಚಯ.

ಇದನ್ನು ಓದಿ: ಹುತಾತ್ಮ ಯೋಧನ ದೇಶಭಕ್ತಿ ಗೀತೆಯ ಭಾವೋದ್ರಿಕ್ತ ವಿಡಿಯೋ ವೈರಲ್

ಬೆಂಗಳೂರಿನ ಕ್ವೀನ್ಸ್ ರಸ್ತೆಯ ನಿವಾಸಿ  ಬಾಲಕನ ಹೆಸರು ಕುಶಾಲ್ ಸಾಯಿ ಈತನ ವಯಸ್ಸು ಕೇವಲ 6 ವರ್ಷ. 6 ವರ್ಷದ ಈ ಬಾಲಕ ದೇಶವೇ ಮೆಚ್ಚುವಂತಹ ಸಾಧನೆ ಮಾಡಿದ್ದಾನೆ. ಅದು ಮ್ಯಾಕ್ಸಿಮ್‌ ಇಂಗ್ಲಿಷ್ ವರ್ಡ್ಸ್ ಓದುವುದರಲ್ಲಿ ಸಾಧನೆ ಮಾಡಿದ್ದಾನೆ. 5 ನಿಮಿಷದಲ್ಲಿ 438 ಶಬ್ದಗಳನ್ನು ಓದುವ ಮೂಲಕ ಸಾಧನೆ ಮಾಡಿದ್ದಾನೆ. ಇಂಡಿಯಾ ಬುಕ್ ಆಫ್ ರೆಕಾರ್ಡ್ (India Book of Record). ಏಷ್ಯಾ ಬುಕ್ ಆಫ್ ರೆಕಾರ್ಡ್. ಡಾಕ್ಟರ್ ಕಲಾಮ್ ವರ್ಲ್ಡ್ ರೆಕಾರ್ಡ್.ಕರ್ನಾಟಕ ಸ್ಟೇಟ್ ರೆಕಾರ್ಡ್ ನಲ್ಲಿ ಈತನ ಸಾಧನೆಯನ್ನು ಸೇರಿಸಿದ್ದಾರೆ. ಬಾಲಕ ಕುಶಲ್ ಸಾಯಿ ಮನೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಸದ್ಯ ಗೂಗಲ್ ನಲ್ಲಿ ಕುಶಲ್ ಸಾಯಿ ಕೂಡ ಮಿಂಚಿತ್ತಿದ್ದಾನೆ.

TV9 Kannada


Leave a Reply

Your email address will not be published. Required fields are marked *